More

    ರಾಜ್ಯ ಬಜೆಟ್​ LIVE​​: ಸುದೀರ್ಘ 1 ಗಂಟೆ 40 ನಿಮಿಷ ಬಜೆಟ್ ಮಂಡಿಸಿದ ಸಿಎಂ ಬಿಎಸ್​ವೈ, ಇದು ಕೂಡ ದಾಖಲೆಯೇ ಸರಿ!

    ಬೆಂಗಳೂರು: ಜಿ.ಎಸ್.ಟಿ ಪರಿಹಾರ ಹಂಚಿಕೆಯ ಕೊರತೆಯನ್ನು ಬಜೆಟ್​ನಲ್ಲಿ ಬಹಿರಂಗವಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ​ ಒಪ್ಪಿಕೊಂಡರು. ತಮ್ಮ ಬಜೆಟ್ ಭಾಷಣದ ಕಟ್ಟಕಡೆಯಲ್ಲಿ ಹದಿನೈದನೇ ಹಣಕಾಸು ಆಯೋಗದ ಅನುದಾನದ ಹಂಚಿಕೆಯ ಕೊರತೆ ಹಾಗೂ ಜಿ.ಎಸ್.ಟಿ ಪರಿಹಾರ ಹಂಚಿಕೆಯ ಕೊರತೆಯನ್ನು ಉಲ್ಲೇಖಿಸಿ, ಬಜೆಟ್​ ಮಂಡನೆ ಮುಗಿಸಿದರು.

    53 ಸಾವಿರ ಕೋಟಿ ರೂ. ಸಾಲಕ್ಕೆ ಕ್ರಮ
    ಈ ಸಾಲಿನಲ್ಲಿ ಒಟ್ಟು 53 ಸಾವಿರ ಕೋಟಿ ಸಾಲ ಎತ್ತಲು ಸಿಎಂ ಯಡಿಯೂರಪ್ಪ ತೀರ್ಮಾನ. ಸಾಮಾಜಿಕ ಅರ್ಥಿಕ ಸಮೀಕ್ಷೆ ಪ್ರಕಾರ ರಾಜ್ಯದ ಜನಸಂಖ್ಯೆ 7.7 ಕೋಟಿ. ಹೀಗೆ ಪ್ರತಿ ವ್ಯಕ್ತಿ ತಲೆ ಮೇಲೆ ಬೀಳಲಿದೆ ತಲಾ 7000 ರೂ‌.ಸಾಲದ ಹೊರೆ. ಈ ಸಾಲಿನಲ್ಲಿ ಒಟ್ಟು 2 ಲಕ್ಷ 33 ಸಾವಿರ 134 ಕೋಟಿ ರೂ. ಅಗತ್ಯ ಇದೆ. ಈ ಪೈಕಿ ವಿವಿಧ ತೆರಿಗೆಗಳಿಂದ 1ಲಕ್ಷದ 79 ಲಕ್ಷದ 920 ಸಾವಿರ ಕೋಟಿ ಬರುತ್ತದೆ. 53 ಸಾವಿರ ಕೋಟಿ ಸಾಲದ ಮೂಲಕ ಭರಿಸಲು ಕ್ರಮ.

    12:50: ಸಿಎಂ ಬಿಎಸ್​ವೈ ಬಜೆಟ್​ ಮಂಡನೆ ಮುಕ್ತಾಯ. 1 ಗಂಟೆ 40 ನಿಮಿಷ ಬಜೆಟ್ ಮಂಡಿಸಿದ ಸಿಎಂ ಬಿಎಸ್​ವೈ.

    ಬಜೆಟ್​ನಲ್ಲಿ ರಾಜ್ಯದ ಆರ್ಥಿಕ ವ್ಯವಸ್ಥೆ
    12:48 PM: ಕೇಂದ್ರದ ತೆರಿಗೆಗಳಲ್ಲಿ ರಾಜ್ಯದ ಪಾಲು 8,887 ಕೋಟಿ ರೂ ಕಡಿತವಾಗಿದೆ. ಕೇಂದ್ರದಿಂದ ಜಿಎಸ್​ಟಿ ನಷ್ಟ ಪರಿಹಾರ 3000 ಕೋಟಿ ರೂ ಕಡಿತವಾಗಲಿದೆ. ರಾಜ್ಯದ ಸ್ವಂತ ತೆರಿಗೆ, ತೆರಿಗೆಯೇತರ ಸ್ವೀಕೃತಿ ಇಳಿಕೆಯಾಗಿದೆ. ಕಳೆದ ಬಜೆಟ್​ನ ಗುರಿ ತಲುಪುವುದು ಕಷ್ಟವಾಗಿದೆ. ಪ್ರಸಕ್ತ ವರ್ಷದಲ್ಲಿ ಹಲವು ಇಲಾಖೆಗಳ ವೆಚ್ಚವನ್ನು ಕಡಿತ ಮಾಡಲಾಗಿದೆ.

    12:46 PM: ಕೃಷಿ ಕ್ಷೇತ್ರದಲ್ಲಿ ಶೇ.3.9ರಷ್ಟು ಬೆಳವಣಿಗೆ ನಿರೀಕ್ಷೆ. ಕೈಗಾರಿಕಾ ವಲಯದಲ್ಲಿ ಶೇ.4.8 ರಷ್ಟು ಬೆಳವಣಿಗೆ ನಿರೀಕ್ಷೆ. ಸೇವಾ ವಲಯದಲ್ಲಿ ಶೇ.7.9 ರಷ್ಟು ಬೆಳವಣಿಗೆ ನಿರೀಕ್ಷೆ.

    12:44 PM: 2020-21ನೇ ಸಾಲಿನಲ್ಲಿ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ ನಿಗದಿ ಪಡಿಸಿದ ಒಟ್ಟು ಅನುದಾನ 72,093 ಕೋಟಿ ರೂ.

    12:42 PM: ಸಾಹಿತಿ ಎಸ್ ಎಲ್ ಭೈರಪ್ಪ ಹುಟ್ಟಿದ ಊರು ಹಾಸನ ಜಿಲ್ಲೆಯ ಸಂತೆಶಿವರ ಗ್ರಾಮದ ಅಭಿವೃದ್ಧಿಗೆ 5 ಕೋಟಿ ರೂ., 66 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ಪ್ರದೇಶದಲ್ಲಿ ನಾಡ ಪ್ರಭು ಕೆಂಪೇಗೌಡ 100 ಅಡಿ ಎತ್ತರದ ಪ್ರತಿಮೆ ನಿರ್ಮಾಣ. ಆನಂದ್ ರಾವ್ ವೃತ್ತದಲ್ಲಿ ಸರ್ಕಾರದ ಕಛೇರಿಯನ್ನು ಒಂದೆ ಕಟ್ಟಡದಲ್ಲಿ ತೆರೆಯಲು 25 ಫ್ಲೋರ್ ನ ಅವಳಿ ಗೋಪುರ 400 ಕೋಟಿ ವೆಚ್ಚದಲ್ಲಿ.

    12:39 PM: ಸ್ತ್ರೀಶಕ್ತಿ ಸ್ವ-ಸಹಾಯ ಸಂಘದ ಉತ್ಪನ್ನಗಳನ್ನು ಸರ್ಕಾರದ ಇಲಾಖೆಗಳಲ್ಲಿ ಅವಶ್ಯಕತೆಗನುಸಾರ ಖರೀದಿಸಲು ಕ್ರಮ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ತೃತೀಯ ಲಿಂಗಿಗಳ ಮೂಲಹಂತದ (Base line) ಸಮೀಕ್ಷೆ ಕೈಗೊಳ್ಳಲು 70 ಲಕ್ಷ ರೂ. ಅನುದಾನ. ಶ್ರವಣದೋಷವುಳ್ಳ ವ್ಯಕ್ತಿಗಳ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ವಿತರಿಸಲು 60 ಲಕ್ಷ ರೂ. ಅನುದಾನ.

    12:37 PM: ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಮಹಿಳಾ ಪೂರಕ ಪೌಷ್ಟಿಕ ಉತ್ಪಾದನಾ ಕೇಂದ್ರಗಳ ಆಧುನೀಕರಣಕ್ಕೆ ಮಹಿಳಾ ಅಭಿವೃದ್ಧಿ ನಿಗಮದಿಂದ 20 ಲಕ್ಷ ರೂ. ವರೆಗೆ ಬಡ್ಡಿ ರಹಿತ ಕಿರು ಸಾಲ ಸೌಲಭ್ಯ. 20 ಕೋಟಿ ರೂ. ಅನುದಾನ.

    12:36 PM: ನಬಾರ್ಡ್ ಸಹಯೋಗದಲ್ಲಿ 758 ಕೋಟಿ ರೂ. ವೆಚ್ಚದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ 26 ಜಿಲ್ಲೆಗಳ 3386 ಸರ್ಕಾರಿ ಶಾಲೆಗಳ 6469 ಶಾಲಾ ಕೊಠಡಿಗಳ ಪುನರ್ ನಿರ್ಮಾಣಕ್ಕೆ ಕ್ರಮ.

    12:34 PM: ಒಂದೇ ಸೂರಿನಡಿ ಪೂರ್ವ ಪ್ರಾಥಮಿಕ ತರಗತಿಗಳಿಂದ ಪದವಿಪೂರ್ವ ತರಗತಿವರೆಗೆ ಶಿಕ್ಷಣ ನೀಡುವ 276 ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ.

    12:33 PM: ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ಬುಡಕಟ್ಟು ಜನರ ಪಾರಂಪರಿಕ ವೈದ್ಯಪದ್ಧತಿ ಮತ್ತು ಆಚರಣೆಗಳ ದಾಖಲೀಕರಣ ಮತ್ತು ಆಯ್ದ ಔಷಧಿಗಳ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಎರಡು ಕೋಟಿ ರೂ. ಅನುದಾನ.

    12:32 PM: ಪ್ರತಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ, ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಇವರ ಹೆಸರಿನಲ್ಲಿ ಒಂದು ಲಕ್ಷ ರೂ. ನಗದು ಪ್ರಶಸ್ತಿ ನೀಡಲು ಕ್ರಮ. 60 ಲಕ್ಷ ರೂ. ಅನುದಾನ.

    12:30 PM: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಮೂಲಕ ವಾಹನ ಚಾಲನಾ ತರಬೇತಿ, ವಿವಿಧ ಪ್ಯಾರಾಮೆಡಿಕಲ್ ಸರ್ಟಿಫಿಕೇಟ್ ಕೋರ್ಸುಗಳೊಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಸಣ್ಣ ಸರಕು ಸಾಗಾಣಿಕೆ ವಾಹನ ಖರೀದಿಗೆ ಸಾಲದ ಸೌಲಭ್ಯ ನೀಡಲು ಕ್ರಮ.

    12:29 PM: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಡೆಸುವ ವಸತಿ ಶಾಲೆಗಳಲ್ಲಿ ಆಯಾ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಕನಿಷ್ಠ ಶೇ. 25 ರಷ್ಟು ಸೀಟು ಹಂಚಿಕೆಗೆ ಕ್ರಮ. ಈ ವಸತಿ ಶಾಲೆಗಳಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ ರಚನೆ.

    12:27 PM: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರ ಕಲ್ಯಾಣಕ್ಕೆ ಎಸ್‍ಸಿಎಸ್‍ಪಿ/ ಟಿಎಸ್‍ಪಿ ಅಡಿ 26,930 ಕೋಟಿ ರೂ. ಅನುದಾನ ನಿಗದಿ. ಇದು ನಿಯಮಾನುಸಾರ ಹಂಚಿಕೆ ಮಾಡಬೇಕಾದ ಮೊತ್ತಕ್ಕಿಂತ ಹೆಚ್ಚು.

    12:25 PM: ಮಾಜಿ ಸಿಎಂ ದಿವಂಗತ ಎಸ್ ನಿಜಲಿಂಗಪ್ಪನವರು ಚಿತ್ರದುರ್ಗದಲ್ಲಿ ವಾಸವಿದ್ದ ಮನೆಯನ್ನ ಸಂರಕ್ಷಿಸಲು 5 ಕೋಟಿ ಅನುದಾನ. ವಿವೇಕಾನಂದ ಯುವ ಕೇಂದ್ರವನ್ನು 2 ಕೋಟಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆ. ವಿಜ್ಞಾನೇಶ್ವರ ಅಧ್ಯಯನ ಪೀಠ ವನ್ನು ಒಂದು ಕೋಟಿ ವೆಚ್ಚದಲ್ಲಿ ಸ್ಥಾಪನೆ. ಚಿತ್ರದುರ್ಗದ ಮುರುಘಾ ಮಠದ ಆವರಣದಲ್ಲಿ 325 ಅಡಿ ಎತ್ತರದ ಬಸವೇಶ್ವರರ ಕಂಚಿನ ಪುತ್ಥಳಿಗಾಗಿ 20 ಕೋಟಿ ನೆರವು.

    12:24 PM: ಆಧುನಿಕ ಮೀನುಗಾರಿಕೆ ತಾಂತ್ರಿಕತೆ ಅಳವಡಿಕೆಯ ಉತ್ತೇಜನಕ್ಕೆ 1.5 ಕೋಟಿ ರೂ. ವೆಚ್ಚದಲ್ಲಿ “ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ” ಜಾರಿ. “ಮಹಿಳಾ ಮೀನುಗಾರರ ಸಬಲೀಕರಣ” ಯೋಜನೆಯಡಿ 1000 ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು ನೀಡಲು ಐದು ಕೋಟಿ ರೂ. ಅನುದಾನ. ಮುಲ್ಕಿಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆ.

    12:23 PM: ವಿದೇಶಿ ತಳಿಯ ಹಂದಿಗಳನ್ನು ಆಮದು ಮಾಡಿಕೊಳ್ಳುವ “ಸಮಗ್ರ ವರಾಹ ಅಭಿವೃದ್ಧಿ” ಯೋಜನೆಗೆ ಐದು ಕೋಟಿ ರೂ. ಅನುದಾನ.

    12:22 PM: “ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ” ಫಲಾನುಭವಿಗಳಿಗೆ ರಾಜ್ಯ ಸರ್ಕಾರ 4000 ರೂ. ಹೆಚ್ಚುವರಿ ನೆರವು ನೀಡುವ ಯೋಜನೆಯನ್ನು ಮುಂದುವರೆಸಲು 2600 ಕೋಟಿ ರೂ. ಅನುದಾನ.

    12:20 PM: ನೀರಿನ ಭದ್ರತೆ, ಭೂ ಸಂಚಯ ಮತ್ತು ಸಾಮೂಹಿಕ ಕೃಷಿ, ಕೃಷಿ ಉತ್ಪನ್ನಗಳ ಸಂಸ್ಕರಣೆ, ಮಾರುಕಟ್ಟೆಗೆ ಉತ್ತೇಜನ ನೀಡಲು ಮತ್ತು ಕೃಷಿ ಹಾಗೂ ತೋಟಗಾರಿಕೆಯನ್ನು ಉದ್ದಿಮೆಯಾಗಿ ಪರಿಗಣಿಸಲು ಹೊಸ ಕೃಷಿ ನೀತಿ ಅನುಷ್ಠಾನ.

    12:15 PM: ಬೆಂಗಳೂರಿನಲ್ಲಿ ದಿವಂಗತ ಅನಂತಕುಮಾರ್​ ಪ್ರತಿಷ್ಠಾನ ಸ್ಥಾಪನೆ.

    12:12 PM: ಬೆಳೆ ವಿಮೆ ಯೋಜನೆಗೆ 900 ಕೋಟಿ ರೂ. ಮೀಸಲು. ಕೃಷಿ ಸಮ್ಮಾನ್​ ಯೋಜನೆಗೆ 2600 ಕೋಟಿ ರೂ. ಮೀಸಲು. ಕಾಫಿ ಬೆಳೆಗಾರರ ಪಂಪ್​ಸೆಟ್​ ವಿದ್ಯುತ್​ ಶುಲ್ಕ ವಾಪಸ್​.

    12:10 PM: ಬೆಂಗಳೂರು ಅಭಿವೃದ್ಧಿಗೆ 8772 ಕೋಟಿ ರೂ. ಮೀಸಲು. ನಗರದಲ್ಲಿ 10 ಕಡೆ ಹೊಸ ಅಗ್ನಿಶಾಮಕ ಠಾಣೆ ಸ್ಥಾಪನೆ. ಘನ ತ್ಯಾಜ ನಿರ್ವಹಣೆಗೆ 900 ಕೋಟಿ ರೂ. ಮೀಸಲು.

    12:05 PM: ಪ್ರವಾಸೋದ್ಯಮ ಅಭಿವೃದ್ಧಿಗೆ 500 ಕೋಟಿ ರೂ. ಮೀಸಲು. ಕೆಎಸ್​ಆರ್​ಟಿಸಿಗೆ 2400 ಹೊಸ ಬಸ್​ ಖರೀದಿ. ಜೋಗಜಲಪಾತ ಅಭಿವೃದ್ಧಿಗೆ 500 ಕೋಟಿ ರೂ. ಮೀಸಲು. ಬಿಎಂಟಿಸಿ ಅಭಿವೃದ್ಧಿಗೆ 700 ಕೋಟಿ ರೂ. ಮೀಸಲು. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 1500 ಕೋಟಿ ರೂ. ಮೀಸಲು.

    12:02 PM: ನೇಕಾರರ ಸಾಲಮನ್ನಾ ಯೋಜನೆಗೆ 79.57 ಕೋಟಿ ರೂ. ಮೀಸಲು. ಬೇಲೇಕೇರಿ ಬಂದರೂ ಅಭಿವೃದ್ಧಿಗೆ 2500 ಕೋಟಿ ರೂ. ಅನುದಾನ. ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರ ಬಾದಾಮಿ ಅಭಿವೃದ್ಧಿಗೆ 25 ಕೋಟಿ ರೂ. ಮೀಸಲು. ಮಳೆಯಿಂದಾಗುವ ಅನಾಹುತ ತಡೆಗೆ 200 ಕೋಟಿ ರೂ. ಮೀಸಲು. ಲಂಬಾಣಿ ಸಂಸ್ಕೃತಿ ಭಾಷಾ ಅಭಿವೃದ್ಧಿ ಅಕಾಡೆಮಿಗೆ 50 ಲಕ್ಷ ರೂ. ನೀಡಲಾಗುವುದು.

    12:01 PM: ಫಿಲ್ಮ್​ ಸಿಟಿ ನಿರ್ಮಾಣಕ್ಕೆ 500 ಕೋಟಿ ರೂ. ಅನುದಾನ.

    11:57 AM- ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ 317 ಕೋಟಿ ರೂ. ಮೀಸಲು. ಬೆಂಗಳೂರಿನ 4 ದಿಕ್ಕುಗಳಲ್ಲೂ ಕಲಾಕ್ಷೇತ್ರ ಸ್ಥಾಪನೆ. ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 5 ಕೋಟಿ ರೂ. ಮೀಸಲು.

    11:54 AM- ಮಕ್ಕಳ ಯೋಜನೆಗಾಗಿ 36 ಸಾವಿರ ಕೋಟಿ ರೂ. ಮೀಸಲು. ಹಿಂದುಳಿದ ವರ್ಗದ ಯುವಕರು ಬೈಕ್​ ಖರೀದಿಸಲು 25 ಸಾವಿರ ಕೋಟಿ ರೂ. ನೀಡಲಾಗುವುದು.

    11:53 AM- ಉಪ್ಪಾರ ಜನಾಂಗದ ಅಭಿವೃದ್ಧಿಗೆ 10 ಕೋಟಿ ರೂ., ಅಂಬಿಗರ ಚೌಡಯ್ಯ ನಿಗಮಕ್ಕೆ 10 ಕೋಟಿ ರೂ. ಮೀಸಲು ಹಾಗೂ ರಾಜೀವ್​ ಗಾಂಧಿ ವಸತಿ ನಿಗಮಕ್ಕೆ 1000 ಕೋಟಿ ರೂ. ಮೀಸಲು. ಕುಂಬಾರ ಹಾಗೂ ಗೊಲ್ಲ ಸಮುದಾಯಕ್ಕೆ 10 ಕೋಟಿ ರೂ. ನೀಡಲಾಗುವುದು. 

    11:52 AM- ಬೆಂಗಳೂರಿನ ಸಿಲ್ಕ್​ ಬೋರ್ಡ್​ ಜಂಕ್ಸನ್​ನಿಂದ ಕೆ.ಆರ್.​ ಪುರವರೆಗೆ ಮೆಟ್ರೋ.

    11:49 AM- ಬೆಂಗಳೂರಿನ ಆಯ್ದ ಸರ್ಕಾರಿ ಕಚೇರಿಗಳಲ್ಲಿ ಮಹಿಳಾ ವಿಶ್ರಾಂತಿ ಕೊಠಡಿಗಳ ಸ್ಥಾಪನೆ. ಸಿರಿಧಾನ್ಯ ಪ್ರೋತ್ಸಾಹಕ್ಕೆ ಎಕರೆಗೆ 10 ರಿಂದ 20 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುವುದು. ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ಆದ್ಯತೆ.

    11:47 AM- ಚರ್ಮ ಶಿಲ್ಪ ಉತ್ಪಾದನಾ ಘಟಕ ಸ್ಥಾಪನೆಗೆ 12.5 ಕೋಟಿ ರೂ. ಮೀಸಲು. ಅನ್ನದಾತರ ಮನೆ ಬಾಗಿಲಿಗೆ ಕೀಟನಾಶಕ ವಿತರಣೆ. ಕಟ್ಟಡ ಕಾರ್ಮಿಕರಿಗೆ ಉಚಿತ ಹೆಲ್ತ್​ ಕಾರ್ಡ್​. 10 ಮೊಬೈಲ್​ ಕ್ಲೀನಿಕ್​ಗಳ ಸ್ಥಾಪನೆ.

    11:46 AM- ಶುಭ್ರ ಬೆಂಗಳೂರು ಯೋಜನೆಗೆ 999 ಕೋಟಿ ರೂ. ಮೀಸಲು. ಬೆಂಗಳೂರಿಗೆ ಒಟ್ಟು 90 ಎಲೆಕ್ಟ್ರಿಕ್​​ ಬಸ್​ಗಳ ಖರೀದಿ. ಏರ್​ಪೋರ್ಟ್​ ಬಳಿ 100 ಅಡಿ ಎತ್ತರದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ. ನಗರದ 4 ಕಡೆ ವಿದ್ಯುತ್​ ಚಿತಾಗಾರ ಸ್ಥಾಪನೆ.

    11:44 AM- ಕೆ.ಸಿ.ಜನರಲ್ ಆಸ್ಪತ್ರೆ ಸೇರಿ 5 ಆಸ್ಪತ್ರೆಗಳು ಮೇಲ್ದರ್ಜೆಗೆ. 400 ಉರ್ದು ಶಾಲೆಗಳಲ್ಲಿ ಆಂಗ್ಲ ಶಿಕ್ಷಣ ಆರಂಭ. ರೈತರಿಗೆ ಹಾಗೂ ಮೀನುಗಾರರಿಗೆ ಕಿಶಾನ್​ ಕ್ರೆಡಿಟ್​ ಕಾರ್ಡ್​ ವಿತರಣೆ.

    11:41 AM- ತುಮಕೂರಲ್ಲಿ ತೆಂಗು ಆಧಾರಿತ ಕೈಗಾರಿಕಾ ಅಭಿವೃದ್ಧಿ ಪಾರ್ಕ್​ ನಿರ್ಮಾಣ. ರಾಜ್ಯದ 5 ಜಿಲ್ಲೆಗಳಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪನೆ. ವಿಟಿಯು ಅಬಿವೃದ್ಧಿಗೆ 10 ಕೋಟಿ ರೂ. ಅನುದಾನ.

    11:39 AM- ರಾಮನಗರದಲ್ಲಿ ರಣಹದ್ದು ಧಾಮ ಸ್ಥಾಪನೆ. ಅಂರ್ತಜಲ ಮಟ್ಟ ಹೆಚ್ಚಿಸಲು ಕೇಂದ್ರದ ಅಟಲ್​ ಭೂ ಜಲ ಯೋಜನೆ ಜಾರಿ. ಅಡಿಕೆ ಬೆಳೆಗಾರರಿಗೆ ಬಂಪ್​ ಯೋಜನೆ. ದೀರ್ಘಾವಧಿ ಸಾಲದ ಮೇಲಿನ ಬಡ್ಡಿ ವಿನಾಯ್ತಿ.

    11:38 AM- ಕಟ್ಟಡ ಕಾರ್ಮಿಕರಿಗೆ ಉಚಿತ ಫ್ರಿಪೇಯ್ಡ್​ ಹೆಲ್ತ್​ ಕಾರ್ಡ್​ ವಿತರಣೆ. ಅಂಧ ತಾಯಂದಿರಿಗೆ ತಿಂಗಳಿಗೆ 2000 ರೂ. ಶಿಶುಪಾಲನಾ ಭತ್ಯೆ.

    11:36 AM- ಬೆಂಗಳೂರು ಅಭಿವೃದ್ಧಿಗೆ 8772 ಕೋಟಿ ರೂ. ಅನುದಾನ.

    11:34 AM- ಉಡುಪಿಯ ಅಂಗಾರು ಕಟ್ಟೆ ಬಂದರು ಅಭಿವೃದ್ಧಿಗೆ 130 ಕೋಟಿ ರೂ. ಅನುದಾನ. ಹೊಸ ಏತ ನೀರಾವರಿಗೆ 500 ಕೋಟಿ ರೂ. ಮೀಸಲು. ರೈತರಿಗೆ ಸಹಾಕಾರಿಯಾಗಲ 900 ಕೋಟಿ ರೂ. ಮೀಸಲು. ಹಾಪ್​ಕಾಮ್ಸ್​ ಮಳಿಗೆಗಳ ಅಭಿವೃದ್ಧಿ ಮಾಡಲಾಗುವುದು.

    11:32 AM- ಹನಿ ನೀರಾವರಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು. ಇಸ್ರೇಲ್​ ಮಾದರಿಯಲ್ಲಿ ನೀರಿನ ರಕ್ಷಣೆಗೆ ಕ್ರಮ ಕಯಗೊಳ್ಳಲಾಗುವುದು. 10 ಲಕ್ಷ ಮನೆಗಳಿಗೆ ಮನೆ ಮನೆಗೆ ಗಂಗೆ ನೀರು ಯೋಜನೆ.

    11:30 AM- ಶನಿವಾರ ಶಾಲಾ ಮಕ್ಕಳ ಬ್ಯಾಗ್​ಗೆ ತಡೆ. 1 ಲಕ್ಷ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್​ ಪಾಸ್​. ಸಂಚಾರಿ ಕೃಷಿ ಹೆಲ್ತ್​ ಕ್ಲೀನಿಕ್​. ಹೊಸ ಶಿಕ್ಷಣ ನೀತಿ ಜಾರಿಯಾಗಲಿದೆ.

    11:28 AM- ಕ್ರೈಸ್ತ ಸಮುದಾಯ ಅಭಿವೃದ್ಧಿಗೆ 200 ಕೋಟಿ ರೂ. ಮೀಸಲು. ವಿಶ್ವಕರ್ಮ ಸಮುದಾಯ ಅಭಿವೃದ್ಧಿಗೆ 25 ಕೋಟಿ ರೂ. ಮೀಸಲು.

    11:28 AM- ಎತ್ತಿನ ಹೊಳೆ ಕುಡಿಯುವ ನೀರು ಯೋಜನೆಗೆ 1500 ಕೋಟಿ ರೂ. ಅನುದಾನ.

    11:25 AM- ಮಹಾದಾಯಿ ಯೋಜನೆಗೆ 500 ಕೋಟಿ ರೂ. ಅನುದಾನ.

    11:23 AM- ಕೃಷಿ ಸಮ್ಮಾನ್​ ಯೋಜನೆಗೆ 2600 ಕೋಟಿ ರೂ. ಮೀಸಲು. ಸಣ್ಣ ಮತ್ತು ಅತಿಸಣ್ಣ ಕೃಷಿ ರೈತರಿಗೆ ಪ್ರತಿ ವರ್ಷ 10 ಸಾವಿರ ಪ್ರೋತ್ಸಾಹ ಧನ. ಸಾವಯವ ಕೃಷಿ ಪದ್ಧತಿಗೆ 200 ಕೋಟಿ ರೂ. ಮೀಸಲು.  

    11:19 AM- ಅಬಕಾರಿ ಶುಂಕ ಶೇ.6 ರಷ್ಟು ಹೆಚ್ಚಳ. ಇಂಧನ ಮೆಲಿನ್​ ಸೆಸ್​ ಶೇ. 32 ರಿಂದ 35ಕ್ಕೇ ಏರಿಕೆ. ಪೆಟ್ರೋಲ್ 1.60 ರೂ. ಹಾಗೂ ಡೀಸೆಲ್​ 1.59 ರೂ. ಏರಿಕೆ.

    11:16 AM- ಭಾಗ್ಯಲಕ್ಷ್ಮೀ ಯೋಜನೆ, ಶಾಲಾ ಮಕ್ಕಳಿಗೆ ಬೈಸಿಕಲ್​ ವಿತರಣೆ ಯೋಜನೆ ಮುಂದುವರಿಕೆ.

    11:15 AM- ಇತರೆ ರಾಜ್ಯಗಳಿಗೆ ಹೋಲಿಸಿದರೆ, ರಾಜ್ಯದ ಆದಾಯ ಹೆಚ್ಚಾಗಿದೆ. ಜಿಡಿಪಿಯಲ್ಲಿ ಶೇ. 6.8 ವೃದ್ಧಿ ನಿರೀಕ್ಷೆಯಿದೆ.

    11:14 AM- ಕೇಂದ್ರ ತೆರಿಗೆಯಲ್ಲಿ ರಾಜ್ಯದ ಪಾಲು ಕಡಿಮೆಯಾಗಿದೆ. ಹೀಗಾಗಿ ಪ್ರಸಕ್ತ ವರ್ಷದಲ್ಲಿ ಹಣಕಾಸು ವೆಚ್ಚ ಅನಿವಾರ್ಯವಾಗಿದೆ.

    11:13 AM- ನಮ್ಮ ಸರ್ಕಾರದಲ್ಲಿ ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಲಾಗಿದೆ.

    11:12 AM- ಅಭಿವೃದ್ಧಿಯನ್ನೆ ಮಂತ್ರವನ್ನಾಗಿ ನಮ್ಮ ಸರ್ಕಾರ ಮಾಡಿಕೊಂಡಿದೆ. ಪ್ರವಾಹದಲ್ಲಿ ಹಾನಿಯಾದ ಮನೆಗಳಿಗೆ ತಲಾ 5 ಲಕ್ಷ ರೂ. ಪರಿಹಾರವನ್ನು ನೀಡಲಾಗಿದೆ.

    11:09 AM-  ನಮ್ಮ ಸರ್ಕಾರ ಆರಂಭದಲ್ಲೇ ಬರ ಮತ್ತು ಪ್ರವಾಹವನ್ನು ಎದುರಿಸಿದೆ. ಹೀಗಾಗಿಯೂ ಪರಿಹಾರವನ್ನು ಸಮರ್ಪಕವಾಗಿ ವಿತರಿಸಲಾಗಿದೆ. ಬೆಳೆಹಾನಿಯನ್ನು ಎದುರಿಸಿದ ರೈತರಿಗೆ ತಲಾ 10 ಸಾವಿರ ರೂ. ನೀಡಲಾಗಿದೆ.

    11:07 AM- ಪ್ರಧಾನಿ ಮೋದಿ ಆಶಯದಂತೆ ರೈತರ ಆದಾಯ ದುಪ್ಪಟ್ಟು. ಪ್ರಧಾನಿ ಮೋದಿ ಸರ್ಕಾರದ ಮಾರ್ಗದಲ್ಲೇ ನಮ್ಮ ಬಜೆಟ್ ಇದೆ.​

    11:05 AM- ಬಜೆಟ್​ ಆರಂಭದಲ್ಲೇ ಸದನದಲ್ಲಿ ಪ್ರತಿಪಕ್ಷಗಳಿಂದ ಗದ್ದಲ. ಬಜೆಟ್​ ಪ್ರತಿಗಳನ್ನು ನೀಡುವಂತೆ ಒತ್ತಾಯ. ಆದರೆ, ಕೊಡಲು ಒಪ್ಪದ ಆಡಾಳಿತಾರೂಢ ಬಿಜೆಪಿ. ವಿತರಿಸುವಂತೆ ಕೊನೆಯಲ್ಲಿ ಸಿಎಂ ಬಿಎಸ್​ವೈಯಿಂದ ಸ್ಪೀಕರ್​ಗೆ ಮನವಿ. ಬಿಎಸ್​ವೈ ಮನವಿಯಂತೆ ಬಜೆಟ್​ ಪ್ರತಿ ವಿತರಣೆಗೆ ಸ್ಪೀಕರ್ ಸೂಚನೆ.

    11:03 AM- ರೈತರ ಸಂಕೇತವಾಗಿ ಹಸಿರು ಶಾಲು ಹೊದ್ದುಕೊಂಡು ಬಜೆಟ್​ ಮಂಡಿಸುತ್ತಿರುವ ಸಿಎಂ ಬಿಎಸ್​ವೈ.

    11:01 AM- ಏಳನೇ ಬಾರಿಗೆ ಬಜೆಟ್​ ಮಂಡನೆ ಮಾಡುತ್ತಿರುವ ಸಿಎಂ ಬಿಎಸ್​ವೈ.

    11:00 AM- ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪರಿಂದ ಬಜೆಟ್​ ಮಂಡನೆ ಆರಂಭ.

    10:55 AM- ವಿಧಾನಸೌಧಕ್ಕೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಗಮನ.

    10:53 AM- ಮಹದಾಯಿ ಯೋಜನಗೆ ಬಂಪರ್ ಕೊಡುಗೆ. ಸಚಿವ ಸಂಪುಟ ಸಭೆಯಲ್ಲಿ ಸಚಿವರಿಗೆ ಸುಳಿವು ನೀಡಿದ ಸಿಎಂ ಬಿಎಸ್​ವೈ.

    10:50 AM- ಸಚಿವ ಸಂಪುಟ ಸಭೆ ಮುಕ್ತಾಯವಾಗಿದ್ದು, ಈ ಬಾರಿ ನೀರಾವರಿ ಮತ್ತು ಕೃಷಿಗೆ ಹೆಚ್ಚಿನ ಹಣ ಮೀಸಲಿಡಲು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.

    10:40 AM- ಸಚಿವ ಸಂಪುಟ ಸಭೆಯಲ್ಲಿ ಬಜೆಟ್​ಗೆ ಅನುಮೋದನೆ ಪಡೆದುಕೊಂಡ ಸಿಎಂ ಬಿಎಸ್​ವೈ. ಇದಕ್ಕೂ ಮುನ್ನ ಸಚಿವ ಸಂಪುಟ ಸಭೆ ಆರಂಭದಲ್ಲೇ ಸಚಿವರಿಗೆ ಸಿಹಿ ಹಂಚಿದ ಸಿಎಂ.

    10:32 AM- ಬಜೆಟ್ ಪೂರ್ವ ಸಭೆಯಲ್ಲಿ ಇಲಾಖೆಗೆ ಬೇಕಾದ ಬೇಡಿಕೆಗಳನ್ನು ಸಿಎಂ ಮುಂದೆ ಇಟ್ಟಿದ್ದೇವೆ. ಗ್ರಾಮೀಣಾಭಿವೃದ್ಧಿ ಇಲಾಖೆ ದೊಡ್ಡ ಇಲಾಖೆಯಾಗಿದ್ದು, ಕೇಂದ್ರ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಮನೆ ಮನೆಗೂ ಗಂಗೆ ಯೋಜನೆಗೆ ಕೇಂದ್ರದ ಅನುದಾನ ಕೇಳಿದ್ದೇವೆ. ರಾಜ್ಯದಲ್ಲಿ ಅತಿವೃಷ್ಠಿಯಾಗಿತ್ತು. 1500 ಕೋಟಿ ರೂ. ರಸ್ತೆ ಅಭಿವೃದ್ದಿಗೆ ಬಿಡುಗಡೆಯಾಗಿದೆ. ಇಡೀ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟು ಅನುದಾನ ಬಿಡುಗಡೆಯಾಗಿದೆ. ಇದೆಲ್ಲವನ್ನೂ ಗಮನಿಸಿ ಸಿಎಂ ಉತ್ತಮ ಬಜೆಟ್ ಮಂಡನೆ ಮಾಡಲಿದ್ದಾರೆ- ಸಚಿವ ಈಶ್ವರಪ್ಪ ಹೇಳಿಕೆ

    10:30 AM- ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಆರಂಭ.

    10.26 AM – ಮುಂಗಡಪತ್ರ ವಿಧಾನಮಂಡಲದಲ್ಲಿ ಮಂಡಿಸಲ್ಪಡುವ ತನಕ ಅದರ ಗೌಪ್ಯತೆ ಕಾಪಾಡುವುದು ನಮ್ಮ ಕರ್ತವ್ಯ. ಸಿಎಂ ಅವರು ಉತ್ತಮ ಬಜೆಟ್ ಮಂಡಿಸುತ್ತಾರೆ ಎಂಬ ನಂಬಿಕೆ ಇದೆ – ಸಚಿವ ಸಿ.ಟಿ.ರವಿ ಹೇಳಿಕೆ

    10.24 AM –  ಸಿಎಂ ಕೊಠಡಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಸಂಪುಟ ಸಹೋದ್ಯೋಗಿಗಳಾದ ಡಿಸಿಎಂ ಡಾ.ಅಶ್ವತ್ಥ ನಾರಾಯಣ, ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಉಪಸ್ಥಿತಿ

    10:15 AM – ಸಿಎಂ ಕೊಠಡಿಗೆ ಆಗಮಿಸಿ ಶುಭಕೋರುತ್ತಿರುವ ಸಚಿವ ಸಂಪುಟ ಸಹೋದ್ಯೋಗಿಗಳು 

    10:10 AM- ಅರ್ಧ ಗಂಟೆ ಮುಂಚಿತವಾಗಿ ವಿಧಾನಸೌಧಕ್ಕೆ ಆಗಮಿಸಿ ಸಚಿವರಿಗಾಗಿ ಕಾದು ಕುಳಿತ ಸಿಎಂ ಬಿಎಸ್​ವೈ.

    10:05 AM- ಸಚಿವ ಸಂಪುಟ ಸಭೆಗೆ ನಿಗದಿತ ಸಮಯಕ್ಕೆ ಅರ್ಧ ಗಂಟೆ ಮುಂಚಿತವಾಗಿ ಸಿಎಂ ಬಿಎಸ್​ವೈ ಆಗಮಿಸಿದ್ದಾರೆ. 10:30ಕ್ಕೆ ನಡೆಯಲಿರುವ ಸಂಪುಟ ಸಭೆಯಯಲ್ಲಿ ಬಜೆಟ್​ಗೆ ಅನುಮೋದನೆ ಪಡೆಯಲಿದ್ದಾರೆ.

    10:00 AM- ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಬಿಎಸ್​ವೈ ವಿಜಯದ ಸಂಕೇತವನ್ನು ತೋರಿಸಿ ವಿಧಾನಸೌಧವನ್ನು ಪ್ರವೇಶಿಸಿದರು.

    9:50 AM- ಸಚಿವ ಶ್ರೀರಾಮುಲು ಪುತ್ರಿ ವಿವಾಹ ಕಾರ್ಯ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸಮಾರಂಭಕ್ಕೆ ಆಗಮಿಸಿ ನೂತನ ವಧು-ವರರಿಗೆ ಶುಭಹಾರೈಸಿ ಸಿಎಂ ಬಿಎಸ್​ವೈ ವಿಧಾನಸೌಧದತ್ತ ಹೊರಟರು.

    9:40 AM- ಬಜೆಟ್ ಪ್ರತಿಗಳುಳ್ಳ ವಾಹನ ಪೊಲೀಸ್ ಭದ್ರತೆಯೊಂದಿಗೆ ವಿಧಾನಸೌಧಕ್ಕೆ ಆಗಮನ. ಒಟ್ಟು 9 ವಾಹನಗಳಲ್ಲಿ ಬಜೆಟ್ ಪ್ರತಿಗಳು ವಿಧಾನಸೌಧಕ್ಕೆ ರವಾನೆ.

    9:38 AM- ಕೃಷಿಗೆ ಅವಶ್ಯಕವಾದ ಯೋಜನೆ ರೂಪಿಸಲು ಪ್ರಯತ್ನಿಸುತ್ತೇನೆ. ರೈತರು ನೆಮ್ಮದಿಯಿಂದ ಬದುಕುವಂತಾಗಬೇಕು.

    9:35 AM- ಹಿಂದಿನ ಯಾವುದೇ ಯೋಜನೆಗಳನ್ನು ಬಜೆಟ್​ನಲ್ಲಿ ಕಡಿತಗೊಳಿಸುವುದಿಲ್ಲ. ಬಜೆಟ್​ ಮಂಡನೆಗೆ ಪ್ರತಿಪಕ್ಷಗಳ ಸಹಕಾರ ಮುಖ್ಯವೆಂದು ಬಿಎಸ್​ವೈ ಮನವಿ ಮಾಡಿದರು.

    9:30 AM- ಸಕಾಲಕ್ಕೆ ಮಳೆ-ಬೆಳೆಯಾಗಲಿ, ರೈತರು ಬದುಕು ನೆಮ್ಮದಿಯಾಗಲಿ ಎಂದು ದೇವರಲ್ಲಿ ಪಾರ್ಥಿಸಿದ್ದೇನೆಂದು ಸಿಎಂ ಬಿಎಸ್​ವೈ ಹೇಳಿದರು.

    9:25 AM- ನಾನಿಂದು ರೈತ ಪರ ಬಜೆಟ್​ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ತಿಳಿಸಿದರು.

    9:15 AM- ಬಜೆಟ್​ ಮಂಡನೆ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯ 9 ನೇ ಕ್ರಾಸ್ ನಲ್ಲಿರುವ ಮಹಾಗಣಪತಿ ದೇವಾಲಯಕ್ಕೆ ಸಿಎಂ ಬಿಎಸ್​ವೈ ಪೂಜೆ ಸಲ್ಲಿಸಿದರು. ಬಳಿಕ ಮಲ್ಲೇಶ್ವರಂನ 8ನೇ ಕ್ರಾಸ್​ನಲ್ಲಿರುವ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದದರು.

    ಸಮತೋಲನದ ಬಜೆಟ್​ಗೆ ಬಿಎಸ್​ವೈ ಕಸರತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts