More

    ರಾಜ್ಯದಲ್ಲಿ ಅಶಾಂತಿ ಮೂಡಿಸಲು ಯತ್ನಿಸಿದ ಅಮೂಲ್ಯ, ಆರ್ದ್ರಾರನ್ನು ಗಡಿಪಾರು ಮಾಡಿ

    ಚಿಕ್ಕಮಗಳೂರು: ಬೆಂಗಳೂರಿನಲ್ಲಿ ದೇಶದ್ರೋಹಿ ಹೇಳಿಕೆ ನೀಡಿದ ಅಮೂಲ್ಯ ಹಾಗೂ ಆರ್ದ್ರಾ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

    ಸಿಎಎ ವಿರುದ್ಧದ ಪ್ರತಿಭಟನೆ ಹೆಸರಿನಲ್ಲಿ ದೇಶದ್ರೋಹದ ಘೊಷಣೆ ಕೂಗುವವರಿಗೆ ಪ್ರಚೋದನೆ ನೀಡುತ್ತಿರುವ ಸಂಘಟಕರು ಮತ್ತು ಮುಖಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದೇಶದ್ರೋಹಿಗಳಿಗೆ ಅವಕಾಶ ನೀಡುವ ಮೂಲಕ ರಾಜ್ಯದಲ್ಲಿ ಗಲಭೆ ಸೃಷ್ಟಿಸಿ ಅಶಾಂತಿ ಉಂಟು ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

    ಮುಖಂಡ ಸಿ.ಎಚ್.ಲೋಕೇಶ್ ಮಾತನಾಡಿ, ರಾಜ್ಯದಲ್ಲಿ ಗಲಭೆ ಹುಟ್ಟುಹಾಕುವ ಕೆಲವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರಕ್ಕೆ ಕೆಟ್ಟ ಹೆಸರು ತಂದು ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರ ಅದಕ್ಕೆ ಅವಕಾಶ ನೀಡುವುದಿಲ್ಲ. ಅಮೂಲ್ಯಳಂತಹ ಕ್ರಿಮಿಗಳನ್ನು ಮತ್ತೆ ಸಮಾಜದ ಒಳಗೆ ಬರಲು ಬಿಡಬಾರದು. ಜೀವಮಾನವಿಡೀ ಜೈಲಿನಲ್ಲಿ ಕೊಳೆಯಬೇಕು. ಸಾಧ್ಯವಾದರೆ ಇದಕ್ಕಾಗಿ ಕಾನೂನು ರೂಪಿಸಬೇಕು. ವಿದೇಶಗಳಲ್ಲಿರುವಂತೆ ಇಲ್ಲಿಯೂ ದೇಶ ವಿರೋಧಿಗಳನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

    ಮುಖಂಡ ಎಚ್.ಡಿ.ತಮ್ಮಯ್ಯ ಮಾತನಾಡಿ, ಮಲೆನಾಡಿನಲ್ಲಿ ಹುಟ್ಟಿದ ಅಮೂಲ್ಯ ಚಿಕ್ಕಮಗಳೂರು ಜಿಲ್ಲೆಯವಳು ಎಂದು ಹೇಳಲು ನಾಚಿಕೆ ಪಡುವಂತಾಗಿದೆ. ಪಾಕ್ ಪರ ಘೊಷಣೆ ಕೂಗಿ ಜಿಲ್ಲೆಯ ಜನ ತಲೆತಗ್ಗಿಸುವ ಕೆಲಸ ಮಾಡಿದ್ದಾಳೆ. ದೇಶ ದ್ರೋಹಿಗಳಾದ ಆರ್ದ್ರಾ, ಅಮೂಲ್ಯ ಅವರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

    ನಗರ ಬಿಜೆಪಿ ಅಧ್ಯಕ್ಷ ಮಧುಕುಮಾರ್ ರಾಜ್ ಅರಸ್ ಮಾತನಾಡಿ, ಸಿಎಎ ವಿರುದ್ಧ ಹೋರಾಟದ ಹೆಸರಿನಲ್ಲಿ ದೇಶದ ಸಂಸ್ಕಾರ, ಸಂಸ್ಕೃತಿ ವಿರುದ್ಧ ಘೊಷಣೆ ಕೂಗಿಸುವ ಸಂಘಟನೆಗಳನ್ನು ಬಹಿಷ್ಕರಿಸಬೇಕು ಎಂದರು.

    ಜಿಪಂ ಸದಸ್ಯೆ ಜಸಂತಾ ಅನಿಲ್​ಕುಮಾರ್, ಮುಖಂಡರಾದ ಸಿ.ಆರ್.ಪ್ರೇಮ್ುಮಾರ್, ಕೋಟೆ ರಂಗನಾಥ್, ಟಿ.ರಾಜಶೇಖರ್, ದೀಪಕ್ ದೊಡ್ಡಯ್ಯ, ಹಂಪಯ್ಯ, ಕವಿತಾ ಶೇಖರ್, ಸಮೃದ್ಧ್ ಪೈ ಇದ್ದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts