More

    ಗೌಳಿ ಸಮುದಾಯಕ್ಕೂ ಪ.ಪಂ. ಸೇರಿಸಲು ಪ್ರಯತ್ನ ರಾಜ್ಯಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷ ದೇಶಪಾಂಡೆ ಮಾಹಿತಿ

    ಹಳಿಯಾಳ: ಜಿಲ್ಲೆಯಲ್ಲಿರುವ ಬುಡಕಟ್ಟು ಸಿದ್ದಿ ಸಮುದಾಯವನ್ನು ಈ ಹಿಂದೆ ನಾವೇ ಪರಿಶಿಷ್ಠ ಪಂಗಡಕ್ಕೆ ಸೇರಿಸಿದ್ದೇವೆ. ಅದೇ ರೀತಿ ಈಗ ಗೌಳಿ ಸಮುದಾಯವನ್ನು ಕೂಡ ಪರಿಶಿಷ್ಠ ಪಂಗಡಕ್ಕೆ ಸೇರಿಸುವ ಪ್ರಯತ್ನ ನಡೆದಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಟ್ಟಿಗೇರಾ ಗ್ರಾಮ ಪಂಚಾಯಿತಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮುಂಡಗೋಡದ ಲೊಯಲಾ ಸಮೂಹ ಸಂಸ್ಥೆಗಳು ಮತ್ತು ಹಳಿಯಾಳದ ಕ್ರಿಯೇಟಿವ್ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ತಟ್ಟಿಗೇರಾದಲ್ಲಿ ಆಯೋಜಿಸಿದ್ದ ‘2023ರ ಗಿರಿಜನೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಸಿದ್ದಿ ಜನಾಂಗದ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಕಲಾಪ್ರಕಾರಗಳು ಅತ್ಯಂತ ಶ್ರೀಮಂತವಾಗಿವೆ. ಅಂತಹ ಶ್ರೀಮಂತ ಕಲಾಪ್ರಕಾರಗಳ ಪ್ರದರ್ಶನ ಕೇವಲ ನಮ್ಮ ತಾಲೂಕು ಮತ್ತು ಜಿಲ್ಲೆಗಳಿಗೆ ಅಷ್ಟೇ ಸೀಮಿತವಾಗಿರದೇ, ರಾಜ್ಯ- ಹೊರರಾಜ್ಯ, ದೇಶ- ವಿದೇಶಗಳಿಗೂ ಪಸರಿಸುವಂತಾಗಬೇಕು. ಆಗಲೇ ಆ ಕಲಾಪ್ರಕಾರಗಳಿಗೆ ಹೆಚ್ಚಿನ ಮನ್ನಣೆ ದೊರಕುತ್ತದೆ. ಆದ್ದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಸಿದ್ದಿ ಕಲಾ ತಂಡಗಳಿಗೆ ಆದ್ಯತೆಯ ಮೇಲೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿ ಕೊಡಬೇಕು ಎಂದು ಸೂಚನೆ ನೀಡಿದರು.

    ಲೊಯೊಲಾ ಸಮೂಹ ಸಂಸ್ಥೆಯ ಫಾ. ಮೆಲ್ವಿನ ಲೊಬೊ ಮಾತನಾಡಿ, ನಮ್ಮ ಸಂಸ್ಥೆ ಈವರೆಗೂ ಹಳಿಯಾಳ, ಮುಂಡಗೋಡ, ಯಲ್ಲಾಪುರ ಭಾಗಗಳಲ್ಲಿರುವ ಗಿರಿಜನರ ಶ್ರೇಯೋಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕ್ಷೇತ್ರವನ್ನು ಜಿಲ್ಲೆಯ ಇತರ ತಾಲೂಕುಗಳಿಗೂ ವಿಸ್ತರಿಸುವ ಉದ್ದೇಶ ಇದೆ ಎಂದರು.

    ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಜನಪದ ಶ್ರೀ ಹಾಗೂ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹುಸೇನಬಿ ಬುಡನಸಾಬ್ ಮುಜಾವರ ಮತ್ತು ಸೋಬಿನಾ ಎಂ. ಕಾಂಬ್ರೆಕರ ಅವರನ್ನು ಸನ್ಮಾನಿಸಲಾಯಿತು.

    ವೇದಿಕೆಯಲ್ಲಿ ಫಾ. ಅನಿಲ ಡಿಸೋಜಾ, ಡಾ. ರಾಮಚಂದ್ರ ಕೆ.ಎಂ., ಸುಭಾಸ ಕೊರ್ವೆಕರ, ಕೃಷ್ಣಾ ಪಾಟೀಲ, ದೇಮಾಣಿ ಸಿರೋಜಿ, ಸಂಜಯ ಕುಬೇರಪ್ಪ ಕಾನಕತ್ರಿ, ಯಾಕೂಬಸಾವಬ್ ಕೆ. ನಾಯ್ಕ, ಕ್ರಿಯೇಟಿವ್ ಟ್ರಸ್ಟ್​ನ ಲೂಯಿಸ್ ಎಫ್. ಫಿರೆರಾ, ವೆಂಕಟೇಶ ಸೊಳಂಕಿ ಇದ್ದರು.

    ಸಹಾಯಕ ನಿರ್ದೇಶಕ ಡಾ. ರಾಮಚಂದ್ರ ಕೆ.ಎಂ. ಸ್ವಾಗತಿಸಿದರು. ಗೋಪಾಲಕೃಷ್ಣ ಎಸ್.ಎನ್. ನಿರೂಪಿಸಿದರು. ಶಿಕ್ಷಕ ನಿಜಲಿಂಗಪ್ಪ ಬಡಿಗೇರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts