More

    ಎಲ್ಲಾ ದೊಡ್ಡ ತೆಲುಗು ಚಿತ್ರಗಳೂ ಒಂದೇ ಚಾನಲ್​ನಲ್ಲಿ ಪ್ರಸಾರ …

    ಹೈದರಾಬಾದ್​: ಬಿಗ್​ ಬಜೆಟ್​ ಮತ್ತು ಸ್ಟಾರ್​ ಚಿತ್ರಗಳ ಸ್ಯಾಟಿಲೈಟ್​ ಹಕ್ಕುಗಳನ್ನು ಖರೀದಿಸುವುದಕ್ಕೆ ಚಾನಲ್​ಗಳು ಪೈಪೋಟಿ ನಡೆಸುವುದು ಹೊಸ ವಿಷಯವೇನಲ್ಲ. ಕೆಲವು ಸ್ಟಾರ್​ಗಳ ಚಿತ್ರಗಳು ಒಂದು ಚಾನಲ್​ಗೆ ಹೋದರೆ, ಬೇರೆಯವರದ್ದು ಇನ್ನೊಂದು ಚಾನಲ್​ಗೆ ಮಾರಾಟವಾಗುತ್ತದೆ. ಇದು ಎಲ್ಲ ಭಾಷೆಗಳಲ್ಲೂ ಸಹಜ.

    ಇದನ್ನೂ ಓದಿ: ಅಪ್ಪನ ಚಿತ್ರ ಆಯ್ತು, ಈಗ ಮಗನ ಚಿತ್ರಕ್ಕೆ ಶೂಜಿತ್​ ನಿರ್ದೇಶನ …

    ಆದರೆ, ಸದ್ಯ ಬಿಡುಗಡೆಯಾಗಬೇಕಿರುವ ಕೆಲವು ದೊಡ್ಡ ಬಜೆಟ್​ನ, ದೊಡ್ಡ ಸ್ಟಾರ್​ಗಳ ಮತ್ತು ನಿರೀಕ್ಷಿತ ಚಿತ್ರಗಳ ಸ್ಯಾಟಿಲೈಟ್​ ಹಕ್ಕುಗಳನ್ನೆಲ್ಲ ಒಂದೇ ಚಾನಲ್​ನವರು ಖರೀದಿಸುವುದು ಬಹಳ ಅಪರೂಪ. ಆದರೆ, ಸ್ಟಾರ್​ ಮಾ ಎಂಬ ತೆಲುಗು ಚಾನಲ್​ ಅಂಥದ್ದೊಂದು ಸಾಧನೆ ಮಾಡಿದೆ.

    ಸ್ಟಾರ್ ಸಮೂಹದ ಚಾನಲ್​ ಆಗಿರುವ ಸ್ಟಾರ್​ ಮಾ, ಸದ್ಯ ತೆಲುಗಿನ ಕೆಲವು ನಿರೀಕ್ಷಿತ ಚಿತ್ರಗಳ ಹಕ್ಕುಗಳನ್ನು ಕಂಡಿದ್ದು, ಆ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಂತರ ಟಿವಿಯಲ್ಲಿ ಪ್ರೀಮಿಯರ್​ ಮಾಡಲಿದೆ. ಈ ಪ್ರತಿಷ್ಠಿತ ಚಿತ್ರಗಳ ಹಕ್ಕುಗಳನ್ನು ಖರೀದಿಸುವುದಕ್ಕೆಂದೇ ಚಾನಲ್​ ಕೋಟಿ ಕೋಟಿ ಹಣವನ್ನು ಎತ್ತಿಟ್ಟಿದೆ.

    ಜ್ಯೂನಿಯರ್​ ಎನ್​ಟಿಆರ್​ ಮತ್ತು ರಾಮ್​ಚರಣ್​ ತೇಜ ಅಭಿನಯದ ‘ಆರ್​ಆರ್​ಆರ್​’, ಮಹೇಶ್​ ಬಾಬು ಅವರ ‘ಸರಕಾರಿ ವಾರಿ ಪಾಟ’, ಅಲ್ಲು ಅರ್ಜುನ್​ ಅಭಿನಯದ ‘ಪುಷ್ಪಾ’, ಬಾಲಕೃಷ್ಣ ಅಭಿನಯದ ‘ಅಖಂಡ’, ರವಿತೇಜ ಅಭಿನಯದ ‘ಕಿಲಾಡಿ’, ಅಖಿಲ್​ ನಾಗಾರ್ಜುನ ಅಭಿನಯದ ‘ಮೋಸ್ಟ್​ ಎಲಿಜಿಬಲ್​ ಬ್ಯಾಚಲರ್​’ ಸೇರಿದಂತೆ ಹಲವು ಪ್ರಮುಖ ಚಿತ್ರಗಳ ಸ್ಯಾಟಿಲೈಟ್​ ಹಕ್ಕುಗಳನ್ನು ಖರೀದಿಸಿದೆ. ಚಿರಂಜೀವಿ ಅಭಿನಯದ ‘ಆಚಾರ್ಯ’ ಚಿತ್ರವೊಂದು ಈ ಪಟ್ಟಿಯಲ್ಲಿಲ್ಲ.

    ಇದನ್ನೂ ಓದಿ: ಸೂರ್ಯಗೆ ನಾಯಕಿಯಾಗಿದ್ದ ಸಿಮ್ರಾನ್​ ಈಗ ಕಾರ್ತಿಗೆ ವಿಲನ್​ …

    ಬಹುಶಃ ಅದು ಸಹ ಮುಂದಿನ ದಿನಗಳಲ್ಲಿ ಪಟ್ಟಿಗೆ ಸೇರಿದರೆ, ಅಲ್ಲಿಗೆ ಈ ಸೀಸನ್​ನ ಎಲ್ಲ ನಿರೀಕ್ಷಿತ ಚಿತ್ರಗಳನ್ನು ಒಂದೇ ಚಾನಲ್​ನಲ್ಲಿ ನೋಡಬಹುದಾಗಿದೆ.

    ಬಿಗ್​ಬಾಸ್​ ಶೋನಲ್ಲಿ ಶೂನ್ಯ ದ್ವೇಷಿಗಳನ್ನು ಹೊಂದಿರುವ ಏಕೈಕ ಸ್ಪರ್ಧಿ ಇವರಂತೆ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts