More

    ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ; ಹತ್ತು ಆರೋಪಿಗಳ ಬಂಧನ: ಈ ಬಗ್ಗೆ ವಾರಗಳ ಹಿಂದೆಯೇ ಗಮನ ಸೆಳೆದಿತ್ತು ವಿಜಯವಾಣಿ

    ರಾಮನಗರ: ಎಸ್​ಎಸ್ಎಲ್​ಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹತ್ತು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಮಾಗಡಿ ಠಾಣೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು.

    ಮಾಗಡಿ ಕೆಂಪೇಗೌಡ ಶಾಲೆಯ ಪ್ರಾಂಶುಪಾಲ ಶ್ರೀನಿವಾಸ್, ಕ್ಲರ್ಕ್​ ರಂಗೇಗೌಡ, ಶಿಕ್ಷಕರಾದ ಕೃಷ್ಣಮೂರ್ತಿ, ಅರ್ಜುನ್, ನಾಗರಾಜ್, ಅಲೀಂ, ಶ್ರೀನಿವಾಸ್, ಲೋಕೇಶ್ ಸುಬ್ರಹ್ಮಣ್ಯ ಹಾಗೂ ವಿಜಯ್ ಬಂಧಿತ ಆರೋಪಿಗಳು.

    ಎಸ್​ಎಸ್​ಎಲ್​ಸಿಯ ಎಲ್ಲ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದ್ದವು. ಪ್ರತಿದಿನ ಪರೀಕ್ಷೆ ಆರಂಭಕ್ಕೂ ಮುನ್ನ ಪ್ರಶ್ನೆಪತ್ರಿಕೆ‌ಗಳನ್ನು ವಾಟ್ಸ್​ಆ್ಯಪ್​ ಮೂಲಕ ಹಂಚಲಾಗಿತ್ತು. ತದನಂತರ ಎಕ್ಸ್​ಪರ್ಟ್​ ಟೀಚರ್​​ಗಳಿಂದ ಅದಕ್ಕೆ ಉತ್ತರ ಬರೆಸಲಾಗುತ್ತಿತ್ತು. ಉತ್ತರ ಪತ್ರಿಕೆಗಳನ್ನು ಕೆಲವು ಪರೀಕ್ಷಾ ಕೇಂದ್ರಗಳಿಗೆ ನೀಡಿ ಪರೀಕ್ಷೆ ಬರೆಸಲಾಗುತ್ತಿತ್ತು ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ.

    ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ‘ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು?’ ಎಂಬ ಶೀರ್ಷಿಕೆಯಡಿ ವಿಜಯವಾಣಿ ಏ.28ರಂದು ವಿಶೇಷ ವರದಿಯನ್ನು ಪ್ರಕಟಿಸಿತ್ತು. ಆ ಬಳಿಕ ಈ ಪ್ರಕರಣದ ಸಂಬಂಧ ತನಿಖೆಯನ್ನು ರಚಿಸಲು ತನಿಖಾ ತಂಡ ರಚಿಸುವಂತೆ ಪ್ರೌಢ ಶಿಕ್ಷಣ ಮಂಡಳಿಯ ನಿರ್ದೇಶಕ ಗೋಪಾಲಕೃಷ್ಣ ಆದೇಶ ಹೊರಡಿಸಿದ್ದರು. ಇದೀಗ ಮುಂದುವರಿದ ಭಾಗವಾಗಿ ಹತ್ತು ಆರೋಪಿಗಳ ಬಂಧನ ಆಗಿರುವುದು ಈ ಪ್ರಕರಣದ ಕುರಿತು ಇನ್ನಷ್ಟು ಆಳ-ಅಗಲ ಹೊರಬೀಳುವ ಸಾಧ್ಯತೆಗಳಿವೆ.

    ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ; ಹತ್ತು ಆರೋಪಿಗಳ ಬಂಧನ: ಈ ಬಗ್ಗೆ ವಾರಗಳ ಹಿಂದೆಯೇ ಗಮನ ಸೆಳೆದಿತ್ತು ವಿಜಯವಾಣಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts