More

    ಹೊಸವರ್ಷಕ್ಕೆ ಎಸ್ಸೆಸ್ಸೆಲ್ಸಿ, ಪಿಯು ಶುರು: ದಿನಾಂಕ ಫಿಕ್ಸ್​- ಸಿಎಂ ಸಮ್ಮತಿಯೊಂದೇ ಬಾಕಿ

    ಬೆಂಗಳೂರು: ಕರೊನಾ ಸೋಂಕಿನ ಪ್ರಮಾಣ ತಗ್ಗುತ್ತಿದ್ದು, ಎರಡನೇ ಅಲೆಯ ಯಾವುದೇ ಲಕ್ಷಣ ಕಂಡುಬರದಿರುವುದರಿಂದ ಜನವರಿ 1ರಿಂದಲೇ ವಿದ್ಯಾಗಮ ಜತೆಗೆ 10 ಮತ್ತು ದ್ವಿತೀಯ ಪಿಯು ತರಗತಿಗಳು ಹಾಗೂ ಜ.15ರಿಂದ 9 ಹಾಗೂ ಪ್ರಥಮ ಪಿಯು ತರಗತಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.

    10 ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳು ಇರುವುದರಿಂದ ವಿದ್ಯಾರ್ಥಿಗಳ ಉನ್ನತ ಅಭ್ಯಾಸ ಹಾಗೂ ಭವಿಷ್ಯದ ದೃಷ್ಟಿಯಿಂದ ತರಗತಿಗಳ ಆರಂಭ ಅತ್ಯವಶ್ಯಕವಾಗಿದೆ. ಹೀಗಾಗಿ ಈ ತರಗತಿಗಳನ್ನು ಮೊದಲು ಆರಂಭಿಸಿ 15 ದಿನಗಳ ನಂತರ 9 ಹಾಗೂ 11ನೇ ತರಗತಿ ಆರಂಭಿಸಲು ಅನುಮತಿ ನೀಡುವುದು ಸೂಕ್ತವೆಂದು ಕರೊನಾ ಸಲಹಾ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಈ ಬಗ್ಗೆ ರ್ಚಚಿಸಲು ಮುಖ್ಯಮಂತ್ರಿಗಳ ಸಮಯ ಕೇಳಿದ್ದಾರೆ. ನಂತರ ಸಿಎಂ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ.

    ಶಾಲೆ ಆರಂಭಕ್ಕೆ ಸಿಎಂ ಒಪ್ಪಿಗೆ ಸೂಚಿಸುವುದು ಬಹುತೇಕ ಖಚಿತವಾಗಿದೆ. ಕರೊನಾ ತಾಂತ್ರಿಕ ಮತ್ತು ಸಲಹಾ ಸಮಿತಿ ಸದಸ್ಯರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಗುರುವಾರ ಸಭೆ ನಡೆಸಿದರು. ರಾಜ್ಯದಲ್ಲಿ ಪ್ರಸ್ತುತ ಕರೊನಾ ಸೋಂಕು ಹರಡುವಿಕೆ, ಪ್ರಕರಣಗಳ ದಾಖಲು, ಮರಣದ ಪ್ರಮಾಣ ತಗ್ಗಿರುವುದರಿಂದ ಶಾಲೆ ಆರಂಭಿಸುವ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಮುಂದಿನ ವ್ಯಾಸಂಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ದೃಷ್ಟಿಯಿಂದ ಎಸ್ಸೆಸ್ಸೆಲ್ಸಿ , ದ್ವಿತೀಯ ಪಿಯು ಮತ್ತು ಪರಿಷ್ಕೃತ ವಿದ್ಯಾಗಮ ಆ ರಂ ಭಿಸುವ ಸಂಬಂಧ ಕ್ರಮಗಳ ಕುರಿತು ಸಲಹಾ ಸಮಿತಿ ಸಲಹೆ ನೀಡಿದೆ. ಆದರೆ, ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ನಡೆಸುವುದು ಬೇಡ ಎಂದು ಕರೊನಾ ತಾಂತ್ರಿಕ ಸಲಹಾ ಸಮಿತಿ ತಿಳಿಸಿದೆ. ಬದಲಾಗಿ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ನಡೆಸುವುದು ಉತ್ತಮ ಎಂದು ಸಮಿತಿ ಸಲಹೆ ನೀಡಿದೆ.

    ಇದನ್ನೂ ಓದಿ: ಈ ಬಾರಿ ಲ್ಯಾಪ್​ಟಾಪ್​ ಬದಲು ಟ್ಯಾಬ್ಲೆಟ್​

    ಸಭೆಯಲ್ಲಿ ಯಾರ್ಯಾರಿದ್ದರು?

    ಕರೊನಾ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಸುದರ್ಶನ, ಸದಸ್ಯರಾದ ಡಾ.ವಿ.ರವಿ, ಡಾ.ಎಂ.ಶರೀಫ್, ಡಾ.ಬಿ.ಎಲ್.ಶಶಿಭೂಷಣ, ಡಾ.ಲೋಕೇಶ ಅಲ್ಹಾರಿ ಸೇರಿದಂತೆ ಕರೊನಾ ಸಲಹಾ ಸಮಿತಿ ಸದಸ್ಯರು, ಆರೋಗ್ಯ ಇಲಾಖೆ ಆಯುಕ್ತ ಪಂಕಜ ಕುಮಾರ್ ಪಾಂಡೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಆಯುಕ್ತ ವಿ.ಅನ್ಬುಕುಮಾರ್, ಪಿಯು ಮಂಡಳಿ ನಿರ್ದೇಶಕಿ ಸ್ನೇಹಲ್ ಇತರರು ಇದ್ದರು.

    ಪಾಲಕರ ಅನುಮತಿ ಕಡ್ಡಾಯ

    ಶಾಲೆಗಳು ಕಟ್ಟುನಿಟ್ಟಾಗಿ ಸುರಕ್ಷತಾ ಕ್ರಮ ಅನುಸರಿಸುವ ಬಗ್ಗೆ ಖಾತರಿ ಮಾಹಿತಿ ಪಡೆದ ನಂತರವೇ ತರಗತಿ ಆರಂಭಿಸುತ್ತೇವೆ. ಶಾಲೆಗೆ ಬರಲು ಇಚ್ಛಿಸುವ ವಿದ್ಯಾರ್ಥಿಗಳು ಹಾಜರಾತಿಗೆ ಪಾಲಕರಿಂದ ಕಡ್ಡಾಯವಾಗಿ ಅನುಮತಿ ಪತ್ರ ತರಬೇಕು. ಆರೋಗ್ಯದ ತೊಂದರೆ, ಶೀತ, ನೆಗಡಿ, ಕೆಮ್ಮು ಹಾಗೆಯೇ ಕರೊನಾ ಲಕ್ಷಣಗಳಿರುವ ಮಕ್ಕಳು ಶಾಲೆಗೆ ಬರುವಂತಿಲ್ಲ. ಅಲ್ಲದೆ, ಅವರು ಪರೀಕ್ಷೆ ಮಾಡಿಸಿಕೊಂಡು ವೈದ್ಯಕೀಯ ವರದಿಯೊಂದಿಗೆ ಹಾಜರಾಗಬೇಕಿದೆ. ತಮ್ಮ ಮಕ್ಕಳಿಗೆ ರುಚಿ, ವಾಸನೆ ಕೊರತೆ, ಉಸಿರಾಟದ ತೊಂದರೆ, ಗಂಟಲು ನೋವು ಸೇರಿದಂತೆ ಯಾವುದೇ ಲಕ್ಷಣಗಳಿಲ್ಲ ಎಂಬುದನ್ನು ಖಾತರಿ ಪಡಿಸಿಕೊಂಡು ಪಾಲಕರು ಅನುಮತಿ ಪತ್ರದಲ್ಲಿ ಸಹಿ ಮಾಡಿ ಕಳುಹಿಸುವುದು ಕಡ್ಡಾಯ. ಈಗಾಗಲೇ ಈ ಎಲ್ಲ ಮಾರ್ಗಸೂಚಿಗಳನ್ನು ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಅನುಸರಿಸುತ್ತಿರುವುದರಿಂದ ಉತ್ತಮವಾಗಿ ತರಗತಿಗಳು ನಡೆಯುತ್ತಿವೆ. ಇದೇ ಮಾದರಿಯನ್ನು ಶಾಲೆಗಳು ಸಹ ಅನುಸರಿಸಬೇಕು ಎಂದು ಸಮಿತಿಯು ವರದಿಯಲ್ಲಿ ತಿಳಿಸಿದೆ ಎಂದು ಸಚಿವರು ತಿಳಿಸಿದರು.

    ಹೊಸವರ್ಷಕ್ಕೆ ಎಸ್ಸೆಸ್ಸೆಲ್ಸಿ, ಪಿಯು ಶುರು: ದಿನಾಂಕ ಫಿಕ್ಸ್​- ಸಿಎಂ ಸಮ್ಮತಿಯೊಂದೇ ಬಾಕಿತಾಂತ್ರಿಕ ಸಲಹಾ ಸಮಿತಿ ಪರಿಸ್ಥಿತಿ ಅವಲೋಕಿಸಿ ಯಾವ ತರಗತಿಗಳನ್ನು ಯಾವ ದಿನಗಳಲ್ಲಿ ಪ್ರಾರಂಭಿಸಬೇಕು ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು ಎಂಬ ಕುರಿತು ಪ್ರಮಾಣಿತ ಕಾರ್ಯಚರಣಾ ವಿಧಾನ(ಎಸ್​ಒಪಿ)ವನ್ನು ಸಿದ್ಧಪಡಿಸಿಕೊಟ್ಟಿದೆ. ಇದರ ಆಧಾರದ ಮೇಲೆ ಮುಖ್ಯಮಂತ್ರಿಗಳ ಜತೆ ರ್ಚಚಿಸಿ ಶಾಲೆ ಆರಂಭಿಸುವ ಬಗ್ಗೆ ನಿರ್ಧಾರವನ್ನು ಪ್ರಕಟಿಸಲಾಗುವುದು.

    | ಸುರೇಶ್ ಕುಮಾರ್ ಶಿಕ್ಷಣ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts