More

    ಈ ಬಾರಿ ಲ್ಯಾಪ್​ಟಾಪ್​ ಬದಲು ಟ್ಯಾಬ್ಲೆಟ್​


    ಬೆಂಗಳೂರು
    ಪದವಿ ವಿದ್ಯಾರ್ಥಿಗಳಿಗೆ ಉಚಿತ “ಲ್ಯಾಪ್​ಟಾಪ್​’ ಯೋಜನೆಯಿಂದ ಹಿಂದೆ ಸೆರಿದ ಉನ್ನತ ಶಿಕ್ಷಣ ಇಲಾಖೆ ಇದರ ಬದಲಾಗಿ “ಟ್ಯಾಬ್ಲೆಟ್​’ ನೀಡಲು ನಿರ್ಧರಿಸಿದೆ.
    ಪ್ರತಿ ವರ್ಷ ಸರ್ಕಾರ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್​ಟಾಪ್​ ನೀಡುತ್ತಿತ್ತು. ಆದರೆ, ಇದರ ಖರೀದಿಯಲ್ಲಿ ಅಕ್ರಮದ ನಡೆದಿರುವ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಲ್ಯಾಪ್​ಟಾಪ್​ ಬದಲು ಟ್ಯಾಬ್ಲೆಟ್​ ನೀಡಲು ತೀರ್ಮಾನಿಸಿದೆ.
    ಇತ್ತೀಚಿಗೆ ನಡೆದ ಸಚಿವ ಸಂಪುಟದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್​.ಅಶ್ವತ್ಥ ನಾರಾಯಣ ಅವರು ಹೊಸ ವರ್ಷಕ್ಕೆ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ಟ್ಯಾಬ್ಲೆಟ್​ ನೀಡುವುದಕ್ಕೆ ಯೋಜನೆ ರೂಪಿಸಿರುವುದಾಗಿ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಇದಕ್ಕೆ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿದ್ದು, ಶ್ರೀದಲ್ಲೇ ವಿದ್ಯಾರ್ಥಿಗಳ ಕೈಗೆ ಟ್ಲಾಬ್ಲೆಟ್​ ಸೇರಲಿದೆ.
    ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್​, ಇಂಜಿನಿಯರಿಂಗ್​ನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ, ದ್ವೀತಿಯ ಹಾಗೂ ತೃತೀಯ ವರ್ಷ ಸೇರಿದ ಒಟ್ಟು 1.55 ಲಕ್ಷ ವಿದ್ಯಾರ್ಥಿಗಳಗಿಎ 155.40 ಕೋಟಿ ರೂ. ವೆಚ್ಚದಲ್ಲಿ ಟ್ಲಾಬ್ಲೆಟ್​ ನೀಡಲಿದೆ. ಪ್ರತಿ ವಿದ್ಯಾರ್ಥಿಗೆ 10 ಸಾವಿರ ರೂ. ಮೌಲ್ಯಲದ ಟ್ಯಾಬ್ಲೆಟ್​ ಇದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts