More

    ಎಸ್​ಎಸ್​ಎಲ್​ಸಿ ಪರೀಕ್ಷೆ ರದ್ದು; ಮತ್ತೊಂದು ರಾಜ್ಯ ಸೇರ್ಪಡೆ

    ನವದೆಹಲಿ: ಹಲವು ರಾಜ್ಯಗಳಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಒಂದಿಲ್ಲೊಂದು ಕುತ್ತು ಎದುರಾಗುತ್ತಲೇ ಇದೆ. ಕರೊನಾ ವ್ಯಾಪಕವಾಗಿ ಹಬ್ಬುತ್ತಿರುವ ಕಾರಣದಿಂದಾಗಿ ಇದೀಗ 10ನೇ ತರಗತಿ ಪರೀಕ್ಷೆಯನ್ನು ಮತ್ತೊಂದು ರಾಜ್ಯ ರದ್ದು ಪಡಿಸಿ ಶನಿವಾರ ನಿರ್ಧಾರ ಕೈಗೊಂಡಿದೆ.

    ಈಗಾಗಲೇ ತೆಲಂಗಾಣ, ತಮಿಳುನಾಡು, ಪಂಜಾಬ್​ ಸೇರಿ ಹಲವು ರಾಜ್ಯಗಳಲ್ಲಿ 10ನೇ ತರಗತಿ ಪರೀಕ್ಷೆಯನ್ನು ರದ್ದುಪಡಿಸಿ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣ ಎಂದು ಘೋಷಿಸಲಾಗಿದೆ.

    ಇದನ್ನೂ ಓದಿ; ದ್ವಿತೀಯ ಪಿಯು ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಕರೊನಾ ಸೋಂಕಿಲ್ಲ; ಸಚಿವ ಸುರೇಶ್‍ಕುಮಾರ್ ಸ್ಪಷ್ಟನೆ 

    ನೆರೆಯ ತೆಲಂಗಾಣ ಕೈಗೊಂಡ ತೀರ್ಮಾನವನ್ನೇ ಈಗ ಆಂಧ್ರಪ್ರದೇಶ ಕೂಡ ಅನುಸರಿಸಿದೆ. ಕರೊನ್ಆ ವ್ಯಾಪಕವಾಗಿ ಹಬ್ಬುಉತತ್ಇರುವ ಕಾರಣ 10ನೇ ತರಗತಿ ಪರೀಕ್ಷೆಯನ್ನು ಕೈಗೊಳ್ಳದಿರಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಂಧ್ರಪ್ರದೇಶ ಶಿಕ್ಷಣ ಸಚಿವ ಆದಿಮುಲುಪು ಸುರೇಶ್​ ಹೇಳಿಕೆ ನೀಡಿದ್ದಾರೆ.

    ಸದ್ಯ ಆಂಧ್ರದಲ್ಲಿ 7,961 ಜನರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ಇದರಲ್ಲಿ 3,948 ಸಕ್ರಿಯ ಪ್ರಕರಣಗಳಿವೆ. ಇದಲ್ಲದೇ. 96 ಜನರು ಕೋವಿಡ್​ನಿಂದಾಗಿ ಮೃತಪಟ್ಟಿದ್ದಾರೆ. ಕರೊನಾ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ಪರೀಕ್ಷೆ ನಡೆಸುವುದಿಲ್ಲ ಸರ್ಕಾರ ಘೋಷಿಸಿದೆ.

    ಇದನ್ನೂ ಓದಿ; ಸೇಲ್ಸ್​ಮನ್​ ಆಗಲು ಒಪ್ಪದ ಶಿಕ್ಷಕನನ್ನು ವಜಾಗೊಳಿಸಿದ ಶಾಲೆ; ಬಾಳೆಹಣ್ಣು ಮಾರಾಟಕ್ಕಿಳಿದವ ಕೈ ಹಿಡಿದ ವಿದ್ಯಾರ್ಥಿಗಳು

    ಕರ್ನಾಟಕದಲ್ಲಿ ದ್ವಿತೀಯ ಪಿಯು ಇಂಗ್ಲಿಷ್​ ಭಾಷಾ ಪರೀಕ್ಷೆ ಯಶಸ್ವಿಯಾಗ ನಡೆದಿದೆ. ಜೂನ್​ 25ರಂದು ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಎಲ್ಲ ಸಿದ್ಧತೆ ನಡೆದಿದೆ ಎಂದು ಸಚಿವ ಸುರೇಶ್​ಕುಮಾರ್​ ತಿಳಿಸಿದ್ದಾರೆ.

    ಲಡಾಖ್​ಗೆ ಹರಿಯುವ ಗಾಲ್ವಾನ್​ ನದಿ ದಿಕ್ಕನ್ನೇ ಬದಲಿಸುತ್ತಿದೆ ಚೀನಾ; ಉಪಗ್ರಹ ಚಿತ್ರಗಳಿಂದ ಕುತಂತ್ರ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts