More

    ಹಿನ್ನೆಲೆ ಸಂಗೀತದಲ್ಲಿ ಬಿಜಿಯಾದ ಶ್ರೀರಂಗ

    ಬೆಂಗಳೂರು: ವಿಭಿನ್ನ ಹಾಸ್ಯ ಕಥಾಹಂದರ ಹೊಂದಿರುವ “ಶ್ರೀರಂಗ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪ್ರಸ್ತುತ ಹಿನ್ನೆಲೆ ಸಂಗೀತ ಪ್ರಕ್ರಿಯೆ ನಡೆಯುತ್ತಿದೆ. ಬೆಂಗಳೂರು ಸುತ್ತಮುತ್ತ 21 ದಿನಗಳ ಚಿತ್ರೀಕರಣ ನಡೆದಿದೆ.‌ ಸದ್ಯದಲ್ಲೇ ಪ್ರಥಮ ಪ್ರತಿ ಸಿದ್ಧವಾಗಲಿದೆ. ಕರೊನಾ ಕಡಿಮೆಯಾದರೆ ಅಗಸ್ಟ್ ವೇಳೆಗೆ ಚಿತ್ರಮಂದಿರಗಳಲ್ಲಿ “ಶ್ರೀರಂಗ”ನ ದರ್ಶನವಾಗಲಿದೆ.

    ಇದನ್ನೂ ಓದಿ: ಧಾರಾವಾಹಿ ಕೆಲಸಗಳೂ ಸ್ಥಗಿತ: ಮೇ 10ರವರೆಗೆ ಸಮಸ್ಯೆ ಇಲ್ಲ

    ರತು ಕ್ರಿಯೇಷನ್ಸ್ ಲಾಂಛನದಲ್ಲಿ ಸುಮಾ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ವೆಂಕಟ್ ಭಾರದ್ವಾಜ್ ನಿರ್ದೇಶಿಸಿದ್ದಾರೆ. ಹಾಸ್ಯಭರಿತ ಮೂರು ಹಾಡುಗಳಿಗೆ ಸಮೀರ್ ಕುಲಕರ್ಣಿ ಸಂಗೀತ ನೀಡುತ್ತಿದ್ದಾರೆ. ಮಿಥುನ್ ಛಾಯಾಗ್ರಹಣ ಹಾಗೂ ಚಂದನ್ ಅವರ ಸಂಕಲನವಿರುವ ಈ ಚಿತ್ರದ ಇಂಟ್ರೋಡಕ್ಷನ್ ಹಾಡನ್ನು ವಿರಾಜ್ ಕನ್ನಡಿಗ ಬರೆದು, ಹಾಡಿದ್ದಾರೆ.

    ಇದನ್ನೂ ಓದಿ: ಕೆಜಿಎಫ್​ ಚಾಪ್ಟರ್ 2 ಸಿನಿಮಾದಲ್ಲಿ ಐಟಂ ಡ್ಯಾನ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ನೋರಾ ಫತೇಹಿ

    ಗುರುರಾಜ ಹೊಸಕೋಟೆ, ಯಮುನಾ ಶ್ರೀನಿಧಿ, ಶಿನವ, ರಚನಾ ರೈ, ಮಾಸ್ಟರ್ ಚಿರಾಯು ಚಕ್ರವರ್ತಿ, ರೂಪ ರಾಯಪ್ಪ, ವಂದನಾ ಶೆಟ್ಟಿ, ಸಾಗರ್ ಜಯರಾಂ, ಸೂಪರ್ ದೇವು, ರಾಮಕೃಷ್ಣ, ಜ್ಯೋತಿ ಮೂರುರ್, ವೆಂಕಟ್ ಭಾರದ್ವಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಶಂಕರ್ ರಾಮನ್ ಸಂಭಾಷಣೆ ಬರೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts