More

    ಕ್ಷೇತ್ರ ಬಹಿರಂಗಪಡಿಸಿದ ಶ್ರೀರಾಮುಲು; ಇದರ ಹಿಂದಿರುವ ಪ್ಲಾನ್​ ಏನು?

    ಬಳ್ಳಾರಿ: ಮುಂದಿನ ಚುನಾವಣೆಗೆ ಬಳ್ಳಾರಿಯತ್ತ ಮುಖ ಮಾಡಿರುವ ಶ್ರೀರಾಮುಲು ಈ ಬಾರಿ ಸಂಡೂರು ಅಥವಾ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುವೆ ಎಂದು ಬಹಿರಂಗಪಡಿಸಿದ್ದಾರೆ.

    ರಾಮುಲು ಸ್ವಂತ ಜಿಲ್ಲೆಯಿಂದ ಸ್ಪರ್ಧೆ ಮಾಡುವ ನಿರ್ಧಾರದ ಹಿಂದೆ ಹತ್ತು ಹಲವು ಲೆಕ್ಕಾಚಾರಗಳು ಇದ್ದು ಮೊಳಕಾಲ್ಮೂರಿನಲ್ಲಿ ಸೋಲುವ ಭಯಕ್ಕೆ ತವರು‌ ಜಿಲ್ಲೆಗೆ ರಾಮುಲು ಮರಳುತ್ತಿದ್ದಾರಾ ಎನ್ನುವ ಪ್ರಶ್ನೆ ಎದುರಾಗಿದೆ. ಶ್ರೀರಾಮುಲು ಕಳೆದ ಬಾರಿ ಎರಡೆರಡು ಕಡೆ ಸ್ಪರ್ಧೆ ಮಾಡಿದ್ದರು. ಈ ಬಾರಿ ಒಂದೇ ಕಡೆ, ಅದೂ ತಮ್ಮ ಹುಟ್ಟೂರಲ್ಲಿ ನಿಲ್ಲಲು ಸಜ್ಜಾಗಿದ್ದಾರೆ. ಅತ್ತ ಬಿಜೆಪಿ ನಾಯಕರಿಂದಲೂ ಇತ್ತ ಮಿತ್ರ ಜನಾರ್ದನ ರೆಡ್ಡಿ ಕಡೆಯಿಂದಲೂ ಸಹಕಾರ ಸಿಗದೇ ಅತಂತ್ರಗೊಂಡಿರುವ ರಾಮುಲು ತವರು ಜಿಲ್ಲೆಗೆ ಮರಳುತ್ತಿದ್ದಾರೆ ಎನ್ನಲಾಗುತ್ತಿದೆ.

    ಶ್ರೀರಾಮುಲು ಕಳೆದ ಬಾರಿ ಹೊರ ಜಿಲ್ಲೆಗಳಿಂದ ಸ್ಪರ್ಧಿಸಿ, ಸಾಲು ಸಾಲು‌ ಹಿನ್ನಡೆ ಅನುಭವಿಸಿದ್ದರು. ಕಳೆದ ಬಾರಿ ಮೊಳಕಾಲ್ಮೂರು ಹಾಗು ಬಾದಾಮಿಯಿಂದ ಸ್ಪರ್ಧಿಸಿ ಮೊಳಕಾಲ್ಮೂರಲ್ಲಿ ಗೆದ್ದಿದ್ದರು. ಆದರೆ ಚುನಾವಣೆಗೂ ಮೊದಲು ಡಿಸಿಎಂ ಆಗುವ ಕನಸಿಟ್ಟುಕೊಂಡಿದ್ದ ರಾಮುಲುಗೆ ನಿರಾಸೆಯಾಗಿತ್ತು. ಬಯಸಿದ ಖಾತೆ ಸಿಗದೇ ರಾಮುಲು ಕಡಗಣೆಗೆ ಒಳಗಾಗಿದ್ದರು.

    ಅಷ್ಟೇ ಅಲ್ಲದೇ ಬಳ್ಳಾರಿ ಉಸ್ತುವಾರಿ ಪಡೆಯೋಕೂ ರಾಮುಲು ಸರ್ಕಸ್ ಮಾಡಿದ್ದರು. ಶ್ರೀರಾಮುಲು ಹೊರ ಜಿಲ್ಲೆಯಿಂದ ಸ್ಪರ್ಧೆ ಮಾಡಿದ್ದರಿಂದ ಕಂಪ್ಲಿ, ಬಳ್ಳಾರಿ ಗ್ರಾಮೀಣ ಸೇರಿದಂತೆ ಅನೇಕ ಬಿಜೆಪಿ ಅಭ್ಯರ್ಥಿಗಳ ಸೊಲಾಗಿತ್ತು. ಹೀಗಾಗಿ ರಾಮುಲು ಬೆನ್ನಿಗೆ ನಿಲ್ಲುವ ಶಾಸಕರ ಸಂಖ್ಯೆ ಕಡಿಮೆ‌ ಆಗಿತ್ತು. ಈಗ ಬಳ್ಳಾರಿಯಿಂದ ಸ್ಪರ್ಧೆ ಮಾಡಿ ಈ ಬಾರಿ ಹಿನ್ನಡೆಯಾಗದಂತೆ ಹಾಗೂ ಬಳ್ಳಾರಿ ವಿಜಯನಗರ ರಾಯಚೂರು ಜಿಲ್ಲೆಗಳ ಮೇಲೆ ಪೋಕಸ್ ಮಾಡಲು ರಾಮುಲು ಪ್ಲಾನ್ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts