More

    ಶ್ರೀರಾಮ ಮಂದಿರ ನಿಧಿ ಸಮರ್ಪಣ ಅಭಿಯಾನ

    ಹಾವೇರಿ: ದೇಶದ ಮನೆಮನೆಯಿಂದ ಸಂಗ್ರಹಿಸಿದ ನಿಧಿಯಿಂದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವು ನಿರ್ವಣಗೊಳ್ಳಬೇಕು ಎಂಬ ಉದ್ದೇಶದಿಂದ ಜ. 15ರಿಂದ ಫೆ. 5ರವರೆಗೆ ರಾಜ್ಯದಲ್ಲಿ ಶ್ರೀರಾಮ ಮಂದಿರ ನಿಧಿ ಸಮರ್ಪಣ ಮಹಾಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದು ಪರಿಷತ್ ಸಹ ಸಂಘಟನೆ ಕಾರ್ಯದರ್ಶಿ ಮನೋಹರ ಮಠದ ಹೇಳಿದರು.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಆ. 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮ ಮಂದಿರ ನಿರ್ವಣಕ್ಕೆ ಭೂಮಿಪೂಜೆ ನೆರವೇರಿಸಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಯೋಜನೆಯನ್ವಯ ನಿಧಿ ಸಂಗ್ರಹಣೆ ಜವಾಬ್ದಾರಿಯನ್ನು ವಿಶ್ವ ಹಿಂದು ಪರಿಷತ್​ಗೆ ನೀಡಿದ್ದು, ದೇಶದಲ್ಲಿ 4ಲಕ್ಷ ಗ್ರಾಮಗಳ 11 ಕೋಟಿ, ರಾಜ್ಯದ 27 ಸಾವಿರ ಗ್ರಾಮಗಳಲ್ಲಿ 90 ಲಕ್ಷ ಹಾಗೂ ಜಿಲ್ಲೆಯಲ್ಲಿ 694 ಗ್ರಾಮಗಳ ಅಂದಾಜು 2 ಲಕ್ಷ ಮನೆಗಳನ್ನು ತಲುಪುವ ಗುರಿ ಹೊಂದಲಾಗಿದೆ. ಭಕ್ತಿ ಹಾಗೂ ಶಕ್ತಿಗೆ ಅನುಗುಣವಾಗಿ ನೀಡುವ ಹಣವನ್ನು ಸ್ವೀಕರಿಸಲಾಗುವುದು. ಇದರಲ್ಲಿ ಯಾವುದೇ ಒತ್ತಾಯವಿಲ್ಲ ಎಂದರು.

    10, 100 ಹಾಗೂ 1000 ರೂ.ಗಳ ಮುದ್ರಿತ ಕೂಪನ್​ಗಳನ್ನು ನೀಡಿ ನಿಧಿ ಸಂಗ್ರಹಿಸಲಾಗುವುದು. 2 ರಿಂದ 10 ಸಾವಿರ ರೂ. ವರೆಗೆ ನೀಡಿದರೆ ರಸೀದಿ ನೀಡಲಾಗುವುದು. 10 ಸಾವಿರಕ್ಕಿಂತ ಹೆಚ್ಚಿನ ನಿಧಿಯನ್ನು ಚೆಕ್ ಮೂಲಕ ಸಂಗ್ರಹಿಸಲಾಗುವುದು. ನಿಧಿ ಸಂಗ್ರಹಣೆ ಅಭಿಯಾನದ ಕಾರ್ಯಕರ್ತರ ತಂಡ ರಚಿಸಲಾಗಿದೆ. ಸಂಗ್ರಹವಾದ ಹಣವನ್ನು 48 ಗಂಟೆಯೊಳಗೆ ತೀರ್ಥಕ್ಷೇತ್ರ ಟ್ರಸ್ಟ್​ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದರು.

    ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದು ಪರಿಷತ್​ನ ಮುಖಂಡರಾದ ರಾಜು ಹೈಬತ್ತಿ, ಈಶ್ವರ ಹಾವನೂರ, ಪ್ರದೀಪ ಮುಳ್ಳೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts