More

    ಸಾಮಾಜಿಕ ಕಳಕಳಿ ಮೈಗೂಡಿಸಿಕೊಳ್ಳಿ

    ವಿರಾಜಪೇಟೆ: ಧರ್ಮ ಸಮಾಜದ ಒಳಿತನ್ನು ಬಯಸುತ್ತದೆ. ಧರ್ಮ ರಕ್ಷಣೆಗಾಗಿ ಶ್ರಮಿಸುವ ಪ್ರತಿಯೊಬ್ಬರೂ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು ಎಂದು ವಿಶ್ವ ಹಿಂದು ಪರಿಷತ್‌ನ ವಿರಾಜಪೇಟೆ ತಾಲೂಕು ಅಧ್ಯಕ್ಷ ಬಿ.ಎಂ.ಕುಮಾರ್ ಹೇಳಿದರು.

    ರಾಮ ಭಕ್ತ ಬಳಗ ವಿರಾಜಪೇಟೆ ವತಿಯಿಂದ ಗುರುವಾರ ವಿರಾಜಪೇಟೆ ಪುರಭವನದ ಸಭಾಂಗಣದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಶ್ರೀರಾಮಚಂದ್ರರ ಆದರ್ಶವನ್ನು ಮೈಗೂಡಿಸಿಕೊಂಡು ಸಂಘಟನೆ ಹುಟ್ಟುಹಾಕಿ ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ಸಂಘಟನೆಯಿಂದ ಮಾತ್ರ ಸಮಾಜಮುಖಿ ಕಾರ್ಯಗಳನ್ನು ಮಾಡಬಹುದಾಗಿದೆ ಎಂದರು.

    ಮನುಷ್ಯನ ಜೀವ ಅತ್ಯಂತ ಅಮೂಲ್ಯವಾದುದ್ದು. ತುರ್ತು ಸನ್ನಿವೇಶದಲ್ಲಿ ಜೀವ ಉಳಿಸಲು ರಕ್ತ ನೀಡುವುದು ಮನುಷ್ಯ ಧರ್ಮವಾಗಿರುವುದರಿಂದ ಆರೋಗ್ಯವಂತ ಪ್ರತಿಯೊಬ್ಬ ವ್ಯಕ್ತಿಯೂ ರಕ್ತದಾನ ಮಾಡಬೇಕು ಎಂದು ಹೇಳಿದರು.

    ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ರಕ್ತನಿಧಿ ಕೇಂದ್ರದ ಡಾ.ಕರುಂಬಯ್ಯ ಮಾತನಾಡಿ, 18 ರಿಂದ 45 ವರ್ಷದ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನದಿಂದ ಆರೋಗ್ಯ ವೃದ್ಧಿಯಾಗಲಿದೆ ಎಂದು ಹೇಳಿದರು.
    ವೇದಿಕೆಯಲ್ಲಿ ನಗರ ವಿಶ್ವ ಹಿಂದು ಪರಿಷತ್ ಜಿ.ಎಲ್.ಭಾಸ್ಕರ್ ಮತ್ತು ಹಿಂದು ಸಂಘಟನೆಯ ಪ್ರಮುಖರಾದ ಪದ್ಮನಾಭ ಉಪಸ್ಥಿತರಿದ್ದರು. ಸುಮಾರು 50 ಜನರು ರಕ್ತದಾನ ಮಾಡಿದರು.

    ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಪ್ರಿನ್ಸ್ ಗಣಪತಿ, ಬಜರಂಗ ದಳ ಜಿಲ್ಲಾ ಪ್ರಮುಖ್ ವಿವೇಕ್ ರೈ, ಹಿಂದು ಪರ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು. 7 ಠಿಣ 2.1 : ರಕ್ತದಾನ ಮಾಡುತ್ತಿರುವ ದಾನಿಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts