More

    ಶ್ರೀಲಂಕಾ ಕ್ರಿಕೆಟ್​ ಆಟಗಾರ್ತಿ ವೀರಕ್ಕೋಡಿ ವಿದಾಯ

    ಕೊಲಂಬೊ: ಶ್ರೀಲಂಕಾ ಮಹಿಳಾ ಕ್ರಿಕೆಟ್​ ತಂಡದ ವೇಗಿ ಶ್ರೀಪಾಲಿ ವೀರಕ್ಕೋಡಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಬುಧವಾರ ವಿದಾಯ ಘೋಷಿಸಿದ್ದಾರೆ. 34 ವರ್ಷದ ಅವರು ಶ್ರೀಲಂಕಾ ಪರ 89 ಏಕದಿ ಮತ್ತು 58 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 58 ಮತ್ತು 31 ವಿಕೆಟ್​ ಕಬಳಿಸಿದ್ದಾರೆ.

    2018ರಲ್ಲಿ ಬಾಂಗ್ಲಾದೇಶ ವಿರುದ್ಧ ಅವರು ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. 2006ರಲ್ಲಿ ಜೈಪುರದಲ್ಲಿ ಪಾಕಿಸ್ತಾನ ವಿರುದ್ದ ಪದಾರ್ಪಣೆ ಮಾಡಿದ್ದ ಅವರು 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್​ ಜೀವನಕ್ಕೆ ತೆರೆ ಎಳೆದಿದ್ದಾರೆ.

    ಇದನ್ನೂ ಓದಿ: ಎಂಎಸ್​ಡಿ ಎಂದರೆ ಧೋನಿ ಅಲ್ಲ, ಹೊಸ ಅರ್ಥ ನೀಡಿದ್ದಾರೆ ಪೊಲೀಸರು!

    ನಾನು ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಅದಕ್ಕೆ ಇದು ಸರಿಯಾದ ಸಮಯ ಎಂದು ಭಾವಿಸಿದ್ದೇನೆ. ನಿವೃತ್ತಿ ಹೊಂದುವುದು ನನ್ನ ವೈಯಕ್ತಿಕ ನಿರ್ಧಾರವಾಗಿದೆ ಎಂದು ಶ್ರೀಪಾಲಿ ವೀರಕ್ಕೋಡಿ ತಿಳಿಸಿದ್ದಾರೆ. 2013ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಡಂಬುಲಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ 19 ರನ್​ಗೆ 3 ವಿಕೆಟ್​ ಕಬಳಿಸಿದ್ದು ಅವರ ಅತ್ಯುತ್ತಮ ನಿರ್ವಹಣೆಯಾಗಿದೆ. ಟಿ20 ಕ್ರಿಕೆಟ್​ನಲ್ಲೂ 2012ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧವೇ ಅತ್ಯುತ್ತಮ ಬೌಲಿಂಗ್​ (23ಕ್ಕೆ 3) ನಿರ್ವಹಣೆ ತೋರಿದ್ದರು.

    ಐಪಿಎಲ್‌ಗೆ ಇಲ್ಲವೇ ಆತ್ಮನಿರ್ಭರ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts