More

    ಬಿಸಿಸಿಐ ಆಡಳಿತ ಶ್ರೀನಿವಾಸನ್, ಅಮಿತ್ ಷಾ ಕೈಯಲ್ಲಿದೆ ಎಂದ ರಾಮಚಂದ್ರ ಗುಹಾ!

    ನವದೆಹಲಿ: ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದರೇನಂತೆ, ಭಾರತೀಯ ಕ್ರಿಕೆಟ್ ಆಡಳಿತವನ್ನು ಈಗಲೂ ಎನ್. ಶ್ರೀನಿವಾಸನ್ ಮತ್ತು ಅಮಿತ್ ಷಾ ಅವರೇ ನಡೆಸುತ್ತಿದ್ದಾರೆ ಎಂದು ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿಯ (ಸಿಒಎ) ಮಾಜಿ ಸದಸ್ಯ ಹಾಗೂ ಇತಿಹಾಸಕಾರ ರಾಮಚಂದ್ರ ಗುಹಾ ಆರೋಪಿಸಿದ್ದಾರೆ.

    ‘ದಿ ಕಾಮನ್ವೆಲ್ತ್ ಆ್ ಕ್ರಿಕೆಟ್’ ಎಂಬ ತನ್ನ ಹೊಸ ಪುಸ್ತಕದಲ್ಲಿ ದೇಶದ ಕ್ರಿಕೆಟ್ ಆಡಳಿತದ ಬಗ್ಗೆ ಬರೆದಿರುವ 62 ವರ್ಷದ ರಾಮಚಂದ್ರ ಗುಹಾ, ಬಿಸಿಸಿಐ ಆಡಳಿತದ ವೈಖರಿಯಲ್ಲಿ ನಿರೀಕ್ಷಿಸಲಾಗಿದ್ದ ಬದಲಾವಣೆ ಇನ್ನೂ ಬಂದಿಲ್ಲ ಎಂದಿದ್ದಾರೆ. ಅಲ್ಲದೆ ಕೆಲ ರಾಜ್ಯಗಳ ಕ್ರಿಕೆಟ್ ಸಂಸ್ಥೆಯನ್ನು ಈಗಲೂ ಕೆಲ ಪ್ರಭಾವಿಗಳ ಪುತ್ರಿಯರು ಮತ್ತು ಪುತ್ರರೇ ಅಧಿಕಾರದಲ್ಲಿದ್ದಾರೆ. ಸ್ವಜನಪಕ್ಷಪಾತ ಮುಂದುವರಿದಿದೆ ಎಂದು ದೂರಿದ್ದಾರೆ. ಗುಹಾ 2017ರಲ್ಲಿ ಸಿಒಎ ರಚಿಸಲ್ಪಟ್ಟಾಗ 6 ತಿಂಗಳ ಕಾಲ ಅದರ ಸದಸ್ಯರಾಗಿದ್ದರು.

    ಗಂಗೂಲಿ ವಿರುದ್ಧವೂ ಗರಂ
    ಬಿಸಿಸಿಐ ಅಧ್ಯಕ್ಷರಾಗಿದ್ದರೂ, ಫ್ಯಾಂಟಸಿ ಗೇಮ್‌ಗಳನ್ನು ಪ್ರಚಾರ ಮಾಡುತ್ತಿರುವ ಸೌರವ್ ಗಂಗೂಲಿ ವಿರುದ್ಧವೂ ಗುಹಾ ಕಿಡಿಕಾರಿದ್ದಾರೆ. ‘ಇದು ನಿಜಕ್ಕೂ ಅತಿದೊಡ್ಡ ಅನರ್ಥ. ಗಂಗೂಲಿ ಈಗ ಬಿಸಿಸಿಐ ಅಧಿಕಾರ ಚುಕ್ಕಾಣಿ ಹಿಡಿದಿದ್ದರೂ ಕೆಲ ಫ್ಯಾಂಟಸಿ ಗೇಮ್‌ಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಕ್ರಿಕೆಟಿಗರ ಈ ರೀತಿಯ ಹಣದಾಹ ಆಘಾತಕಾರಿಯಾಗಿದೆ’ ಎಂದು ಹೇಳಿದ್ದಾರೆ.

    VIDEO | ಬಿಗ್ ಬಾಷ್‌ನಲ್ಲಿ ಪತ್ನಿಯ ಸ್ಫೋಟಕ ಶತಕಕ್ಕೆ ಸಾಕ್ಷಿಯಾದ ಆಸೀಸ್​ ವೇಗಿ ಮಿಚೆಲ್ ಸ್ಟಾರ್ಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts