More

    ಪಾಕ್ ಪರ ಘೋಷಣೆ ವಿಚಾರ ಮರೆ ಮಾಚಲು ಶೃಂಗೇರಿ ಶಾಸಕ ರಾಜೇಗೌಡ ತಂತ್ರ; ಬಜರಂಗ ದಳದ ಮೇಲೆ ಸುಳ್ಳು ಆರೋಪ

    ಎನ್.ಆರ್.ಪುರ: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಚಾರವನ್ನು ಮರೆಮಾಚಲು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಬಜರಂಗದಳದ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಎಂ.ಎನ್.ನಾಗೇಶ್ ಆರೋಪಿಸಿದರು.

    ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗ ದಳದಿಂದ ಶಾಸಕರ ಹೇಳಿಕೆ ಖಂಡಿಸಿ ಶನಿವಾರ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ದೇಶ ವಿರೋಧಿ ಚಟುವಟಿಕೆ ಮಾಡುವವರು ವಿಧಾನಸೌಧದಲ್ಲಿ ವಿರೋಧಿ ದೇಶದ ಪರವಾಗಿ ಘೋಷಣೆ ಕೂಗುತ್ತಾರೆ. ಅದನ್ನು ಕೇಳಿಯೂ ಕೇಳದಂತೆ ಸರ್ಕಾರ ಕಿವುಡಾಗಿದೆ. ತನಿಖೆಯಲ್ಲೂ ದೇಶ ವಿರೋಧಿ ಘೋಷಣೆ ಕೂಗಿದ್ದು ಸಾಬೀತಾದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಸರ್ಕಾರದ ವೈಲ್ಯವನ್ನು ಮರೆಮಾಚಲು ಶೃಂಗೇರಿ ಕ್ಷೇತ್ರದಲ್ಲಿ ಈ ಹಿಂದೆ ಸ್ಥಳೀಯವಾಗಿ ನಡೆದ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುವ ಮೂಲಕ ಬಜರಂಗದಳ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದರು.
    ಶಾಸಕರು ಕ್ಷೇತ್ರದ ಎಲ್ಲ ಸಮುದಾಯಕ್ಕೂ ಸೇರಿದವರು ಎಂಬುದನ್ನು ಅರಿತುಕೊಳ್ಳಬೇಕು. ಕ್ಷೇತ್ರದಲ್ಲಿ ಹಲವು ಜ್ವಲಂತ ಸಮಸ್ಯೆಗಳಿದ್ದರೂ ಈ ಬಗ್ಗೆ ಸದನದಲ್ಲಿ ಚರ್ಚಿಸಲು ವಿಲವಾಗಿದ್ದಾರೆ. ವಿರೋಧಿ ದೇಶದ ಪರ ಘೋಷಣೆ ಕೂಗಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
    ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಶಾಸಕರು ಸದನದಲ್ಲಿ ಸಂಘ ಪರಿವಾರದ ಹೆಸರು ಎತ್ತಿರುವುದು ಖಂಡನೀಯ. ವಿರೋಧಿ ದೇಶದ ಮಿತ್ರರನ್ನು ಬಚಾವು ಮಾಡಲು ಹೊರಟಿರುವ ಸರ್ಕಾರದ ನಿಲುವನ್ನು ಪಕ್ಷ ಖಂಡಿಸುತ್ತದೆ. ಕ್ಷೇತ್ರದಲ್ಲಿ ಸೌಹಾರ್ದತೆ ಇರಬೇಕೆನ್ನುವ ಶಾಸಕರು ಕೇವಲ ಹಿಂದುಗಳ ವಿರುದ್ಧ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದರು.
    ತಾಲೂಕು ವಿಶ್ವ ಹಿಂದು ಪರಿಷತ್ ಘಕಟದ ಅಧ್ಯಕ್ಷ ಕಣಿವೆ ಸತ್ಯನಾರಾಯಣ ಮಾತನಾಡಿ, ಶಾಸಕರನ್ನು ಸದನದಲ್ಲಿ ಸಂಘ ಪರಿವಾರದ ಹೆಸರನ್ನು ಪ್ರಸ್ತಾಪಿರುವ ವಿಷಯದ ಕುರಿತು ಪ್ರಮುಖರೊಂದಿಗೆ ಚರ್ಚಿಸಿ ಸ್ವೀಕರ್‌ಗೆ ದೂರು ನೀಡಬೇಕೆಂದು ಚಿಂತನೆ ನಡೆಸಲಾಗಿದೆ ಎಂದರು.
    ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಮದನ್, ಬಜರಂಗ ದಳ ಜಿಲ್ಲಾ ಸಹ ಸಂಚಾಲಕ ಗಡಿಗೇಶ್ವರ ಅಭಿಷೇಕ್, ಅನೂಪ್, ಪ್ರಥಮ್, ಪ್ರಸನ್ನ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ದಯಾನಂದ್, ವಿಶ್ವ ಹಿಂದು ಪರಿಷತ್ ಮುಖಂಡ ಕೂಸ್ಗಲ್ ಪುರುಷೋತ್ತಮ್, ಬಿಜೆಪಿ ಮುಖಂಡರಾದ ಅಶ್ವಿನ್, ಲೋಕೇಶ್, ಶ್ರೀನಾಥ್, ಎ.ಬಿ.ಮಂಜುನಾಥ್, ಪ್ರವೀಣ್, ನಾಗರಾಜ್, ವಿನಯಕುಮಾರ್ ಮತ್ತಿತರರಿದ್ದರು. ಮಾನವಸರಪಣಿ ನಿರ್ಮಿಸಿ ಶಾಸಕರ ವಿರುದ್ಧ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts