More

    ಕನ್ನಡದಲ್ಲಿ ‘ಬೀಗ’, ತೆಲುಗಿನಲ್ಲಿ ‘ಕರಾಳ’ … ಹೀಗೊಂದು ಸೈಂಟಿಫಿಕ್ ಥ್ರಿಲ್ಲರ್

    ಬೆಂಗಳೂರು: ಕನ್ನಡದಲ್ಲಿ ಇದುವರೆಗೂ ಹಲವು ತರಹದ ಥ್ರಿಲ್ಲರ್​ ಚಿತ್ರಗಳು ಬಂದಿವೆ. ಈಗ ಸೈಂಟಿಫಿಕ್​ ಥ್ರಿಲ್ಲರ್​ ಚಿತ್ರವೊಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಇದೊಂದು ದ್ವಿಭಾಷಾ ಚಿತ್ರವಾಗಿದ್ದು, ತೆಲುಗಿನಲ್ಲಿ ‘ಕರಾಳ’ ಮತ್ತು ಕನ್ನಡದಲ್ಲಿ ‘ಬೀಗ’ ಎಂಬ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ.

    ಇದನ್ನೂ ಓದಿ: ಬಚ್ಚಿಟ್ಟ ‘ಸತ್ಯ’ದ ಹುಡುಕಾಟದಲ್ಲಿ ಸಂತೋಷ್​, ರಂಜಿನಿ; ಮೋಷನ್ ಪೋಸ್ಟರ್ ಬಿಡುಗಡೆ

    ಕನ್ನಡದಲ್ಲಿ 'ಬೀಗ', ತೆಲುಗಿನಲ್ಲಿ 'ಕರಾಳ' … ಹೀಗೊಂದು ಸೈಂಟಿಫಿಕ್ ಥ್ರಿಲ್ಲರ್ಈ ಹಿಂದೆ ಜಗ್ಗೇಶ್​ ಅಭಿನಯದ ‘ಅಗ್ರಜ’ ಹಾಗೂ ಸುಮಂತ್​ ಅಭಿನಯದ ‘ಲೀ’ ಚಿತ್ರಗಳನ್ನು ನಿರ್ದೇಶಿಸಿದ್ದ ಎಚ್.ಎಂ.ಶ್ರೀನಂದನ್ ಅವರ ಮೂರನೇ ಚಿತ್ರವಿದು. ಇದರಲ್ಲಿ ರವಿಶಂಕರ್​, ‘ಮೊಗ್ಗಿನ ಮನಸು’ ಖ್ಯಾತಿಯ ಜೆ.ಡಿ.ಆಕಾಶ್, ಸೈಯದ್ ಇರ್ಫಾನ್ ಜೊತೆಗೆ ನಿರ್ದೇಶಕ ಹೆಚ್.ಎಂ.ಶ್ರೀನಂದನ್ ಸಹ ಮುಖ್ಯ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಜತೆಗೆ ಸಹಾರ, ಸುಮಿತಾ ಬಜಾಜ್, ಸುಚೇಂದ್ರಪ್ರಸಾದ್ ಮುಂತಾದವರು ನಟಿಸಿದ್ದಾರೆ.

    ‘ಬೀಗ’ ಕುರಿತು ಮಾತನಾಡುವ ಶ್ರೀನಂದನ್, ‘ವೈಜ್ಞಾನಿಕ ಹಿನ್ನೆಲೆ ಇಟ್ಟುಕೊಂಡು ಮಾಡಿರುವ ಕಥೆ ಇದು. ರವಿಶಂಕರ್ ಅವರು ಸಸ್ಪೆಂಡ್ ಆದ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಒಂದು ಮನೆಯ ಲಾಕ್ ಓಪನ್ ಮಾಡಿದ ಮೇಲೆ ಅಲ್ಲಿ ಏನೇನು ನಡೆಯುತ್ತದೆ ಎಂದು ಚಿತ್ರದಲ್ಲಿ ಹೇಳಿದ್ದೇವೆ. ಇಲ್ಲಿ ಒಂದು ಆತ್ಮ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಹೆಣ್ಣು ಮಗುವೊಂದು ರಸ್ತೆಯಲ್ಲಿ ಬಂದಾಗ ಅದು ಮಗು ಎನ್ನುವುದನ್ನೂ ನೋಡದೆ ಕೆಲವರು ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಆ ತರಹದ ಮನಸ್ಥಿತಿ ಇದ್ದವರು ಈ ಚಿತ್ರ ನೋಡಿದ ಮೇಲೆ ಬದಲಾಗಬೇಕು ಎನ್ನುವುದು ನಮ್ಮ ಆಶಯ’ ಎನ್ನುತ್ತಾರೆ ನಂದನ್​.

    ಇದನ್ನೂ ಓದಿ: ಪ್ರಗತಿಪರ ರೈತನಾದ ವಿಜಯ್​ ರಾಘವೇಂದ್ರ; ಮಾರ್ಚ್​ 3ಕ್ಕೆ ‘ಕಾಸಿನಸರ’ ಬಿಡುಗಡೆ

    ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣವಾಗಿದೆ. ಎಂ.ಬಿ. ಹಳ್ಳಿಕಟ್ಟೆ ಮತ್ತು ವೀನಸ್​ ನಾಗರಾಜ್​ ಛಾಯಾಗ್ರಹಣ ಮಾಡಿದ್ದು, ಶ್ರೀಗುರು ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರವನ್ನು ವಿ.ಎಂ.ಆರ್ ಪ್ರೊಡಕ್ಷನ್ ಲಾಂಛನದಲ್ಲಿ ರಮೇಶ್ ಮುನಿಹನುಮಪ್ಪ, ಹೆಚ್.ಎಂ. ಶ್ರೀನಂದನ್ ಹಾಗೂ ಕೃಷ್ಣ ಎಲ್ ನಿರ್ಮಿಸಿದ್ದು, ಇತ್ತೀಚೆಗೆ ಟ್ರೇಲರ್​ ಬಿಡುಗಡೆಯಾಗಿದೆ.

    ಸಿಟಾಡೆಲ್ ಚಿತ್ರೀಕರಣದಲ್ಲಿ ಸಮಂತಾ ಕೈಗೆ ಗಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts