More

    ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ದಾಖಲಿಸಿದ ಲಂಕಾ ಲೆಜೆಂಡ್ಸ್

    ರಾಯ್‌ಪುರ: ದಿಗ್ಗಜ ಎಡಗೈ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ (53*ರನ್, 49 ಎಸೆತ, 8 ಬೌಂಡರಿ) ಅರ್ಧಶತಕದ ಹೊರತಾಗಿಯೂ ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡ ರಸ್ತೆ ಸುಕರ‌್ಷತಾ ವಿಶ್ವ ಸರಣಿ ಟಿ20 ಟೂರ್ನಿಯಲ್ಲಿ ಶ್ರೀಲಂಕಾ ಲೆಜೆಂಡ್ಸ್ ವಿರುದ್ಧ 5 ವಿಕೆಟ್‌ಗಳಿಂದ ಸೋಲು ಕಂಡಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ವಿಂಡೀಸ್, 4 ವಿಕೆಟ್‌ಗೆ 157 ರನ್ ಪೇರಿಸಿತು. ಪ್ರತಿಯಾಗಿ ಲಂಕಾ ತಂಡ ಉಪುಲ್ ತರಂಗ (53*) ಮತ್ತು ತಿಲಕರತ್ನೆ ದಿಲ್ಶಾನ್ (47) ಬಿರುಸಿನ ಆಟದಿಂದ 19 ಓವರ್‌ಗಳಲ್ಲಿ 5 ವಿಕೆಟ್‌ಗೆ 160 ರನ್ ಪೇರಿಸಿ ಜಯಿಸಿತು. ಲಂಕಾ ಗೆಲುವಿಗೆ ಕೊನೇ 3 ಓವರ್‌ಗಳಲ್ಲಿ 18 ರನ್ ಬೇಕಿತ್ತು. ಆಗ ಇನಿಂಗ್ಸ್‌ನ 18ನೇ ಓವರ್ ಎಸೆದ ಟಿನೋ ಬೆಸ್ಟ್ 2 ವಿಕೆಟ್ ಕಬಳಿಸಿ ವಿಂಡೀಸ್‌ಗೆ ಗೆಲುವಿನ ಆಸೆ ಹುಟ್ಟಿಸಿದರು. ಆದರೆ ಸ್ಯಾನ್‌ೆರ್ಡ್ ಎಸೆದ ಇನಿಂಗ್ಸ್‌ನ 19ನೇ ಓವರ್‌ನಲ್ಲಿ ಲಂಕಾ ತಂಡ 14 ರನ್ ಕಸಿದು ಜಯಿಸಿತು. ಎಡಗೈ ಬ್ಯಾಟ್ಸ್‌ಮನ್ ತರಂಗ ಸತತ 2 ಬೌಂಡರಿ ಸಿಡಿಸಿ ಗೆಲುವಿನೊಂದಿಗೆ ಅರ್ಧಶತಕವನ್ನೂ ಪೂರೈಸಿಕೊಂಡರು.

    ಇದನ್ನೂ ಓದಿ: ಮ್ಯಾಕ್ಸ್‌ವೆಲ್ ಸಿಕ್ಸರ್ ಆರ್ಭಟಕ್ಕೆ ಮುರಿದ ಪ್ರೇಕ್ಷಕರ ಆಸನ, ಉತ್ತಮ ಕೆಲಸಕ್ಕೆ ನೆರವಾಯಿತು!

    ವೆಸ್ಟ್ ಇಂಡೀಸ್: 4 ವಿಕೆಟ್‌ಗೆ 157 (ಲಾರಾ 53*, ಡ್ವೇನ್ ಸ್ಮಿತ್ 47, ಬೆಸ್ಟ್ 18*, ದಿಲ್ಶಾನ್ 28ಕ್ಕೆ 1, ಜಯಸಿಂಘೆ 8ಕ್ಕೆ 1). ಶ್ರೀಲಂಕಾ ಲೆಜೆಂಡ್ಸ್: 19 ಓವರ್‌ಗಳಲ್ಲಿ 5 ವಿಕೆಟ್‌ಗೆ 160 (ದಿಲ್ಶಾನ್ 47, ಜಯಸೂರ್ಯ 12, ಉಪುಲ್ ತರಂಗ 53*, ಚಾಮರ ಸಿಲ್ವ 22, ಬೆನ್ 19ಕ್ಕೆ 2, ಬೆಸ್ಟ್ 22ಕ್ಕೆ 2). ಪಂದ್ಯಶ್ರೇಷ್ಠ: ಉಪುಲ್ ತರಂಗ.

    ಇಂದಿನ ಪಂದ್ಯ
    ಬಾಂಗ್ಲಾದೇಶ-ಇಂಗ್ಲೆಂಡ್ ಲೆಜೆಂಡ್ಸ್
    ಆರಂಭ: ರಾತ್ರಿ 7.00
    ನೇರಪ್ರಸಾರ: ಕಲರ್ಸ್‌ ಕನ್ನಡ ಸಿನಿಮಾ

    ಇಂದಿನಿಂದ ವರ್ಲ್ಡ್ ಸಿರೀಸ್ ಕ್ರಿಕೆಟ್, ಕರೊನಾ ಕಾಲದಲ್ಲಿ ದಿಗ್ಗಜರ ಟಿ20 ಫೈಟ್

    ಸ್ಫೋಟಿಸಿದ ಸೆಹ್ವಾಗ್, ಭಾರತ ಲೆಜೆಂಡ್ಸ್ ತಂಡಕ್ಕೆ ಸುಲಭ ತುತ್ತಾದ ಬಾಂಗ್ಲಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts