More

    ಅಬ್ಬಬ್ಬಾ.. ಶ್ರೀಲಂಕಾದಲ್ಲಿ 1 ಲೀಟರ್​ ಪೆಟ್ರೋಲ್​ ಬೆಲೆ ಎಷ್ಟು ಗೊತ್ತಾ?: ಊಹಿಸಿಕೊಳ್ಳಲು ಸಾಧ್ಯವಿಲ್ಲ!

    ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ಜನರ ಜೀವನ ಹೇಳತೀರದು. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಎದುರಾಗಿದ್ದು, ಇದರೊಂದಿಗೆ ತೈಲ ಬೆಲೆ ಗಗನಕ್ಕೇರಿದೆ.

    ಇಲ್ಲಿನ ಜನರು ಜೀವನ ಕಳೆಯುವುದೇ ದುಸ್ತರವಾಗಿಬಿಟ್ಟಿದೆ. ತರಕಾರಿ, ದಿನಸಿ ಸಾಮಾಗ್ರಿಗಳು, ಗ್ಯಾಸ್​ ಬೆಲೆ ಏರಿಕೆ ಮಾಡಿದ್ದು ಆಯ್ತು ಈಗ ತೈಲ ಬೆಲೆಯಲ್ಲೂ ಭಾರೀ ಏರಿಕೆ ಕಂಡಿದೆ.

    ಮಂಗಳವಾರ ಪೆಟ್ರೋಲ್​ ಲೀಟರ್​ಗೆ 24.3 ರೂ. ಹಾಗೂ ಡೀಸೆಲ್​ ಬೆಲೆಯಲ್ಲಿ 38.4 ರೂ. ಏರಿಕೆ ಮಾಡುವ ಮೂಲಕ ಪ್ರತಿ ಲೀಟರ್​ ಭಾರೀ ಏರಿಕೆಯಲ್ಲಿ ಮಾರಾಟವಾಗುತ್ತಿದೆ.ಪ್ರಸ್ತುತ ಒಂದು ಲೀಟರ್​ ಪೆಟ್ರೋಲ್​​ 420 ರೂ. ಆಗಿದ್ದು, ಡೀಸೆಲ್​​ 400 ರೂ. ಆಗಿದೆ.

    ಒಂದೇ ದಿನದಲ್ಲಿ ಮೂರು ಬಾರಿ ಏರಿಕೆ ಮಾಡಲಾಗಿದ್ದು, ಇಂದು ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆ ಏರಿಕೆ ಮಾಡಿದ್ದೇವೆ ಎಂದು ಸಂಪುಟ ಸಭೆ ಬಳಿಕ ಇಲ್ಲಿನ ಇಂಧನ ಸಚಿವ ಕಂಚಾನ ವಿಜೆಶೇಖರ ಟ್ವೀಟ್​ ಮೂಲಕ ತಿಳಿಸಿದ್ದಾರೆ. ದೇಶದಲ್ಲಿ ಆರ್ಥಿಕ ಸ್ಥಿತಿ ಕುಸಿದಿರುವುದರಿಂದ ಹಾಗೂ ತೈಲ ಪೂರೈಕೆ ಇಲ್ಲದಿರುವುದರಿಂದ, ಬೇರೆ ದಾರಿ ಇಲ್ಲದೇ ಬೆಲೆ ಏರಿಕೆ ಮಾಡಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

    ಶ್ರೀಲಂಕಾದಲ್ಲಿ ಈ ಬಿಕ್ಕಟ್ಟು ಉಲ್ಬಣಗೊಂಡು ತಿಂಗಳುಗಟ್ಟಲೇ ಕಳೆದಿದ್ದರೂ ಸ್ವಲ್ಪ ಮಟ್ಟಿಗೂ ಸುಧಾರಣೆ ಕಂಡುಬಂದಿಲ್ಲ. ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದೇ ಇಲ್ಲಿನ ಪ್ರಧಾನಿ ಮಹಿಂದ್ರಾ ರಾಜಪಕ್ಸೆ ಕೂಡ ದೇಶವನ್ನೇ ತೊರೆದಿದ್ದಾರೆ. ಪ್ರತಿನಿತ್ಯ ಜನರು ಹೋರಾಟಗಳು ಮುಂದುವರಿದಿದ್ದು, ಸಹಜಸ್ಥಿತಿಯತ್ತ ಬರಲು ತುಂಬಾ ದಿನಗಳೇ ಬೇಕಾಗಬಹುದು.(ಏಜೆನ್ಸೀಸ್​)

    ರಸ್ತೆಯ ಮೇಲೆ ನಮಾಜ್​ ಮಾಡುವಂತಿಲ್ಲ: ಸಿಎಂ ಯೋಗಿ ಖಡಕ್​​ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts