More

    ಬಸರಿಕಟ್ಟೆಯಲ್ಲಿ ಜ.22ಕ್ಕೆ ಶ್ರೀರಾಮ ತಾರಕ ಹೋಮ

    ಜಯಪುರ: ಅಯೋಧ್ಯೆಯಲ್ಲಿ ಜ.22ರಂದು ಶ್ರೀ ಬಾಲ ರಾಮನ ಮಂದಿರದ ಪ್ರಾಣ ಪ್ರತಿಷ್ಠಾಪನೆ ದಿನದಂದು ಬಸರಿಕಟ್ಟೆಯ ಶ್ರೀ ಲಕ್ಷ್ಮೀ ಜನಾರ್ಧನ ಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ತಾರಕ ಹೋಮ ನಡೆಯಲಿದೆ ಎಂದು ಹೋಬಳಿ ಸಂಚಾಲಕ ಮಣಿಕಂಠನ್ ಕಂದಸ್ವಾಮಿ ಹೇಳಿದರು.
    ಬಸರಿಕಟ್ಟೆಯಲ್ಲಿ ಸೋಮವಾರ ನಡೆದ ಪೂರ್ವ ಸಿದ್ದಾತ ಸಭೆಯಲ್ಲಿ ಮಾತನಾಡಿದ ಅವರು, ಯಾವುದೋ ಜನ್ಮದ ಪುಣ್ಯದ ಲವಾಗಿ ಮಂತ್ರಾಕ್ಷತೆ ಹಂಚುವ ಭಾಗ್ಯ ನಮಗೆ ಸಿಕ್ಕಿದೆ. ಹಾಗಾಗಿ ಹೋಬಳಿ ಮನೆ ಮನೆಗಳಿಗೆ ಶ್ರೀರಾಮ ಮಂದಿರ ಲೋಕಾರ್ಪಣೆ ಆಹ್ವಾನ ನೀಡಲಾಗುತ್ತಿದೆ. ಮೇಗುಂದಾ ಹೋಬಳಿಯಾದ್ಯಾಂತ ಹಲವು ದೇವಸ್ಥಾನಗಳಲ್ಲಿ ವಿವಿಧ ಕಾರ್ಯಕ್ರಮಗಳು, ಹೋಮ, ಹವನ ನಡೆಯಲಿದೆ. ಬಸರೀಕಟ್ಟೆಯ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಧ್ಯಾಹ್ನ ಅನ್ನ ಪ್ರಸಾದ ವಿನಿಯೋಗ , ಎಲ್‌ಇಡಿ ಪರದೆಯಲ್ಲಿ ಪ್ರಾಣ ಪ್ರತಿಷ್ಠೆಯ ನೇರಪ್ರಸಾರ , ತಾಳಮದ್ದಳೆ, ಮಹಾಗಣಪತಿ ದೇವಸ್ಥಾನದಲ್ಲಿ ದೀಪೋತ್ಸವ, ಭಜನೆ ಕಾರ್ಯಕ್ರಮಗಳು ನಡೆಯಲಿದೆ ಎಂದರು. ಧರ್ಮರಾಜ್ ಜೈನ್, ಸುಂದರಮೂರ್ತಿ, ಸಮರ್ಥ, ಮಂಡಲ ಸಂಯೋಹಕರಾದ ಸುಧೀಂದ್ರ , ನವೀನ್, ಅರುಣ್‌ಕುಮಾರ್, ರಕ್ಷಿತ್, ಕಂದಸ್ವಾಮಿ, ಅರವಿಂದ, ರಾಜಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts