More

    ವಾಲ್ಮೀಕಿ ಸಮುದಾಯಕ್ಕೆ ಶೇ.7.5 ಮೀಸಲು ನೀಡದಿದ್ದರೆ ಹೋರಾಟ ಅನಿವಾರ್ಯ: ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಎಚ್ಚರಿಕೆ

    ಹೊನ್ನಾಳಿ: ವಾಲ್ಮೀಕಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಶೇ.7.5ರಷ್ಟು ಮೀಸಲು ಅತ್ಯಗತ್ಯ. ಅದನ್ನು ಪಡೆಯಲು ಹೋರಾಟಕ್ಕೆ ನಾವು ಸದಾ ಸಿದ್ಧ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

    ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಾಲ್ಮೀಕಿ ಸಮಾಜದ ಸಭೆಯಲ್ಲಿ ಮಾತನಾಡಿ, ದಶಕಗಳ ಹಿಂದೆ ನಿಗದಿಪಡಿಸಲಾಗಿರುವ ಮೀಸಲಾತಿಯನ್ನೇ ಇಂದಿಗೂ ಮುಂದುವರಿಸಿಕೊಂಡು ಬರಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಪ್ರಮಾಣ ಹೆಚ್ಚಿಸಬೇಕು ಎಂದು ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗ ವರದಿ ನೀಡಿದ್ದರೂ ಸರ್ಕಾರ ಜಾರಿಗೊಳಿಸಿಲ್ಲ. ಇದರಿಂದ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ನಮ್ಮ ಸಮಾಜಕ್ಕೆ 1958ರಲ್ಲಿ ನಿಗದಿಪಡಿಸಿದ್ದ ಮೀಸಲು ಪ್ರಮಾಣವನ್ನು ದೇವರಾಜ ಅರಸು ಆಡಳಿತಾವಧಿಯಲ್ಲಿ ಕೊಂಚ ಹೆಚ್ಚಿಸಲಾಯಿತು. ಬಳಿಕ ಹಾವನೂರು ಆಯೋಗದ ವರದಿಯಂತೆ ಸಮುದಾಯವನ್ನು ಎಸ್ಟಿ’ಗೆ ಸೇರ್ಪಡೆಗೊಳಿಸಲಾಯಿತು. 2013ರಲ್ಲಿ ಸಿದ್ದರಾಮಯ್ಯ ಅವರು ಪ್ರತ್ಯೇಕ ಆರ್ಥಿಕ ಅನುದಾನ ನೀಡಿದರು. ಬಿ.ಎಸ್.ಯಡಿಯೂರಪ್ಪ ಅವರು ಶೇ.7.5ರಷ್ಟು ಮೀಸಲು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಇಂದಿಗೂ ಈಡೇರಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಾದರೂ ಈಗ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

    ವಾಲ್ಮೀಕಿ ನಾಯಕ ಸಮಾಜದ ತಾಲೂಕು ಅಧ್ಯಕ್ಷ ಕುಳಗಟ್ಟೆ ಕೆ.ಎಲ್.ರಂಗನಾಥ್, ಗೌರವಾಧ್ಯಕ್ಷ ತಿಮ್ಮೇನಹಳ್ಳಿ ಟಿ.ಆರ್.ಚಂದಪ್ಪ, ಮುಖಂಡರಾದ ಕೋಣನತಲೆ ನಾಗಪ್ಪ, ಶಿವಾನಂದ್, ಜೆಸಿಬಿ ಹನುಮಂತಪ್ಪ, ಪ್ರಭುಗೌಡ, ಹನುಮಂತಪ್ಪ, ಚಂದ್ರಪ್ಪ, ರಾಜೇಂದ್ರ, ಹನುಮಂತಪ್ಪ ಕುಳಗಟ್ಟೆ, ಶೇಖರಪ್ಪ ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts