More

    ಯುವಕರು ವಿದ್ಯಾವಂತರಾಗಿ ಸಮಾಜದ ಆಸ್ತಿಯಾಗಲಿ

    ನ್ಯಾಮತಿ: ಯುವಕರು ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಿ ವಿದ್ಯಾವಂತರಾಗಿ ಸಮಾಜದ ಆಸ್ತಿಯಾಗಬೇಕು ಎಂದು ರಾಜನಹಳ್ಳಿಯ ವಾಲ್ಮೀಕಿ ಪೀಠದ ವಾಲ್ಮೀಕಿ ಮಹಾಸಂಸ್ಥಾನದ ಜಗದ್ಗುರು ಪ್ರಸನ್ನಾನಂದಪುರಿ ಸ್ವಾಮೀಜಿ ಕಿವಿಮಾತು ಹೇಳಿದರು.

    ಪಟ್ಟಣದ ಬೇಡರ ಕಣ್ಣಪ್ಪ ದೇಗುಲದಲ್ಲಿ ಸೋಮವಾರ ತಾಲೂಕಿನ ಜನರಿಗೆ ವಾಲ್ಮೀಕಿ ಜಾತ್ರೆಯ ಆಹ್ವಾನ ನೀಡಿ ಅವರು ಮಾತನಾಡಿದರು.

    ತಾಯಂದಿರು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ಇತಿಹಾಸ, ಪರಂಪರೆಗಳ ಬಗ್ಗೆ ತಿಳಿಹೇಳಬೇಕು. ಕಾಂತರಾಜ ವರದಿ ಜಾರಿಗೆ ಆಗ್ರಹಿಸಲಾಗುವುದು. ಸಮಾಜದ ಜನರು ವಾಲ್ಮೀಕಿ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ನೀಡಿದರು.

    ಸಮಾಜದ ಜನರ ಜಾಗೃತಿಗೊಳಿಸುವ ಕಾರ್ಯವನ್ನು ವಾಲ್ಮೀಕಿ ಸಮಾಜದಲ್ಲೂ ಮಾಡಲಿದ್ದು, ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ಕೆ ಮುಂದಾಗಿದೆ. ಜಾತ್ರಾ ಮಹೋತ್ಸವ ಪರಿಚಯಿಸುವಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ಸಮಾಜದ ಒಳಿತಿಗಾಗಿ ಎಲ್ಲರೂ ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

    ಜಾತ್ರಾ ಮಹೋತ್ಸವದ ಸ್ಥಳೀಯ ಗೌರವಾಧಕ್ಷರನ್ನಾಗಿ ಆರುಂಡಿ ಬಿ. ದೇವೇಂದ್ರಪ್ಪ ಮತ್ತು ಐವರನ್ನು ಸೇವಾ ಪ್ರತಿನಿಧಿಗಳಾಗಿ ಆಯ್ಕೆ ಮಾಡಲಾಯಿತು. ತಾಲೂಕು ಅಧ್ಯಕ್ಷ ಬಳ್ಳಾರಿ ಸೋಮಶೇಖಪ್ಪ, ಕಾರ್ಯದರ್ಶಿ ಜಿ.ಎಚ್. ಕುಮಾರ, ಮುಖಂಡರಾದ ರಾಮಚಂದ್ರಪ್ಪ ಒಡೆಯರಹತ್ತೂರು, ಮಾದಾಪುರ ರುದ್ರೇಶ್, ನ್ಯಾಮತಿ ಈಶ್ವರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts