More

    ಸಾಸಲು ಗ್ರಾಮದಲ್ಲಿ ಜೋಡಿ ರಥಕ್ಕೆ ಪೂಜೆ

    ಕಿಕ್ಕೇರಿ: ಹೋಬಳಿಯ ಸಾಸಲು ಗ್ರಾಮದಲ್ಲಿ ರಥಗಳಿಗೆ ಪೂಜೆ ಸಲ್ಲಿಸುವ ಮೂಲಕ ಜಾತ್ರೆಯನ್ನು ಸೋಮವಾರ ಸರಳವಾಗಿ ಆಚರಿಸಲಾಯಿತು.

    ಸೋಮೇಶ್ವರ, ಶಂಭುಲಿಂಗೇಶ್ವರ ಜೋಡಿ ರಥ ಶಿಥಿಲಾವಸ್ಥೆ ತಲುಪಿದ್ದ ಕಾರಣ ರಥಗಳನ್ನು ಎಳೆಯದೆ ಸಂಕೇತವಾಗಿ ರಥಗಳಿಗೆ ಪೂಜಿಸಲಾಯಿತು. ಮುಜರಾಯಿ ಸ್ವಾಮ್ಯದ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲದ ರಥವನ್ನು ಹೊಸದಾಗಿ ನಿರ್ಮಿಸಲು ಈಗಾಗಲೇ ವರ್ಷಗಳಲ್ಲಿ ಚಾಲನೆ ದೊರೆತಿದ್ದು, ರಥ ನಿರ್ಮಾಣ ಕುಂಟುತ್ತ ಸಾಗಿದ ಕಾರಣ ರಥೋತ್ಸವ ಇರಲಿಲ್ಲ. ಇದರೊಂದಿಗೆ ಸೋಮೇಶ್ವರ ದೇಗುಲ ಜೀರ್ಣೋದ್ಧಾರ ನಡೆಯುತ್ತಿರುವುದರಿಂದ ದೇವರುಗಳ ಉತ್ಸವಮೂರ್ತಿ ಮೆರವಣಿಗೆ ರಥಬೀದಿಯಲ್ಲಿ ನಡೆಯಲಿಲ್ಲ.

    ರಥದ ಮನೆಯಿಂದ ಸ್ವಲ್ಪ ದೂರಕ್ಕೆ ರಥವನ್ನು ಕರೆತಂದು ರಥಕ್ಕೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು. ಭಕ್ತರು ರಥಕ್ಕೆ ಹಣ್ಣು-ಕಾಯಿ ಅರ್ಪಿಸಿ, ಧೂಪ ದೀಪ ಬೆಳಗಿದರು. ಪುಷ್ಕರಿಣಿಯಲ್ಲಿ ಮಿಂದ ಭಕ್ತರು ಬಾಲಾಯಲದಲ್ಲಿರುವ ಸೋಮೇಶ್ವರ, ಶಂಭುಲಿಂಗೇಶ್ವರ ಮೂರ್ತಿ, ಕುದುರೆಮಂಡಮ್ಮ ದೇವರ ದರ್ಶನ ಪಡೆದರು.

    ಮುಂಬರುವ ವರ್ಷದಲ್ಲಿ ನೂತನ ರಥ, ನವೀಕೃತ ದೇಗುಲ ಲೋಕಾರ್ಪಣೆಯಾಗಲಿದೆ. ಭಕ್ತರು ಎಂದಿನಂತೆ ಸಹಕರಿಸಬೇಕು ಎಂದು ತಹಸೀಲ್ದಾರ್ ಎಸ್.ವಿ. ಲೋಕೇಶ್ ಮನವಿ ಮಾಡಿದರು.

    ಉಪತಹಸೀಲ್ದಾರ್ ವೀಣಾ, ರಾಜಸ್ವ ನಿರೀಕ್ಷಕ ಗೋಪಾಲಕೃಷ್ಣ, ಗ್ರಾಮ ಆಡಳಿತಾಧಿಕಾರಿ ಪ್ರಸನ್ನ, ತಿಪ್ಪೇಶ್, ಸುನಿಲ್ ಗಾಣಿಗೇರ್, ಈ.ರಾಜು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts