More

    ಅತ್ಯಾಚಾರ ಕೇಸ್​ನಲ್ಲಿ ಲಂಕಾ ಕ್ರಿಕೆಟಿಗ ಬಂಧನ: ಕ್ರಿಕೆಟ್​ನಿಂದ ದನುಷ್ಕ ಗುಣತಿಲಕ ಅಮಾನತು

    ಸಿಡ್ನಿ: ಅತ್ಯಾಚಾರ ಕೇಸ್​ನಲ್ಲಿ ಬಂಧನಕ್ಕೆ ಒಳಪಟ್ಟಿರುವ ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕ ಅವರನ್ನು ಎಲ್ಲ ಪ್ರಕಾರದ ಕ್ರಿಕೆಟ್​ನಿಂದ ಅಮಾನತು ಮಾಡಿ ಶ್ರೀಲಂಕಾ ಕ್ರಿಕೆಟ್​ ಮಂಡಳಿ ಆದೇಶಿಸಿದೆ.

    ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್​ ಟೂರ್ನಿ ನಡೆಯುತ್ತಿದ್ದು, ಶ್ರೀಲಂಕಾ ತಂಡದಲ್ಲಿ ಆಡುತ್ತಿದ್ದ ಎಡಗೈ ಬ್ಯಾಟರ್​ ಆಗಿರುವ ಗುಣತಿಲಕ ಅವರನ್ನು ಸಿಡ್ನಿ ನಗರ ಪೊಲೀಸರು ಭಾನುವಾರ ಬಂಧಿಸಿದ್ದರು. ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ ಮೂಲಕ 29 ವರ್ಷದ ಮಹಿಳೆಯೊಬ್ಬರ ಪರಿಚಯವಾಗಿದೆ. ನ.2ರಂದು ಆ ಮಹಿಳೆ ಮೇಲೆ ರೋಸ್​ ಬೇನಲ್ಲಿರುವ ನಿವಾಸದಲ್ಲಿ ಗುಣತಿಲಕ ಅವರು ಅತ್ಯಾಚಾರ ಮಾಡಿದ್ದಾರೆ ಎಂದು ಕೇಸ್​ ದಾಖಲಾಗಿದೆ.

    ಆನ್​ಲೈನ್​ನಲ್ಲೇ ಹಲವಾರು ದಿನಗಳವರೆಗೆ ಸಂವಹನ ನಡೆಸಿದೆವು. ಬಳಿಕ ಇಬ್ಬರೂ ಭೇಟಿಯಾದೆವು. ನ.2ರ ಸಂಜೆ ನನ್ನ ಮೇಲೆ ಆತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ.

    2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಣತಿಲಕ ಪಾದರ್ಪಣೆ ಮಾಡಿದ್ದರು. ಟಿ20 ವಿಶ್ವಕಪ್​ ಟೂರ್ನಿ ಹಿನ್ನೆಲೆ ಆಸ್ಟ್ರೇಲಿಯಾಕ್ಕೆ ಆಗಮಿಸಿದ್ದರು. ರೇಪ್​ ಕೇಸ್​ನಲ್ಲಿ ಸಿಲುಕಿದ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಕ್ರಿಕೆಟ್​ನಿಂದಲೇ ಅಮಾನತು ಆಗಿದ್ದಾರೆ. ಇನ್ನು ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಸೋತ ಶ್ರೀಲಂಕಾ ತಂಡ ತವರಿಗೆ ಮರಳಿದೆ.

    ಮಹಿಳೆಯ ಮೇಲೆ ಅತ್ಯಾಚಾರ: ಆಸ್ಟ್ರೇಲಿಯಾದಲ್ಲಿ ಲಂಕಾ ಕ್ರಿಕೆಟಿಗ ಅರೆಸ್ಟ್​, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಡ್ನಿ ಪೊಲೀಸ್​

    ಶಿವಮೊಗ್ಗದಲ್ಲಿ ಭೀಕರ ಅಪಘಾತ: ಅತ್ತೆ-ಸೊಸೆ-ಮೊಮ್ಮಗಳು ದುರ್ಮರಣ

    ಚಂದ್ರು ಸಾವಿನ ಪ್ರಕರಣ: ಗೌರಿಗದ್ದೆ ಆಶ್ರಮಕ್ಕೆ ತನಿಖಾ ತಂಡ ಭೇಟಿ, ವಿನಯ್​ ಗುರೂಜಿಯನ್ನೂ ವಿಚಾರಣೆ ನಡೆಸಿದ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts