More

    ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಶ್ರೀಲಂಕಾ ಆಘಾತ

    ಕೊಲಂಬೊ: ಆರಂಭಿಕ ಅವಿಷ್ಕಾ ಫೆರ್ನಾಂಡೊ (118ರನ್, 115 ಎಸೆತ, 10 ಬೌಂಡರಿ, 2 ಸಿಕ್ಸರ್) ಭರ್ಜರಿ ಶತಕದ ನೆರವಿನಿಂದ ಶ್ರೀಲಂಕಾ ತಂಡ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡಕ್ಕೆ 14 ರನ್‌ಗಳಿಂದ ಸೋಲುಣಿಸಿದೆ. ಇದರಿಂದ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ ಶ್ರೀಲಂಕಾ, ಐಸಿಸಿ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್‌ನಲ್ಲಿ 10 ಅಂಕವನ್ನೂ ಸಂಪಾದಿಸಿತು.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಲಂಕಾ, 9 ವಿಕೆಟ್ 300 ರನ್ ಪೇರಿಸಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ 6 ವಿಕೆಟ್‌ಗೆ 286 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೇ 3 ಓವರ್‌ಗಳಲ್ಲಿ 38 ರನ್ ಗಳಿಸಬೇಕಾಗಿದ್ದ ದಕ್ಷಿಣ ಆಫ್ರಿಕಾಕ್ಕೆ ಇನಿಂಗ್ಸ್‌ನ 48 ಮತ್ತು 49ನೇ ಓವರ್‌ನಲ್ಲಿ ಚಮೀರ ಮತ್ತು ಕರುಣರತ್ನೆ ಕ್ರಮವಾಗಿ 6 ಮತ್ತು 5 ರನ್ ಮಾತ್ರ ಬಿಟ್ಟುಕೊಟ್ಟರು. ಇದರಿಂದ ಕೊನೇ ಓವರ್‌ನಲ್ಲಿ 27 ರನ್ ಗಳಿಸಬೇಕಾಗಿದ್ದ ಆಫ್ರಿಕಾ, 12 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಸರಣಿಯ 2ನೇ ಪಂದ್ಯ ಶನಿವಾರ ನಡೆಯಲಿದೆ.

    ಶ್ರೀಲಂಕಾ: 9 ವಿಕೆಟ್‌ಗೆ 300 (ಅವಿಷ್ಕಾ ಫೆರ್ನಾಂಡೊ 118, ಭಾನುಕಾ 27, ಧನಂಜಯ ಡಿಸಿಲ್ವ 44, ಅಸಲಂಕಾ 72, ರಬಾಡ 66ಕ್ಕೆ 2, ಮಹಾರಾಜ್ 30ಕ್ಕೆ 2), ದಕ್ಷಿಣ ಆಫ್ರಿಕಾ: 6 ವಿಕೆಟ್‌ಗೆ 286 (ಮಾರ್ಕ್ರಮ್ 96, ಬವುಮಾ 38, ಡುಸೆನ್ 59, ಕ್ಲಾಸೆನ್ 36, ಅಖಿಲ ಧನಂಜಯ 65ಕ್ಕೆ 2, ಹಸರಂಗ 52ಕ್ಕೆ 1, ಕರುಣರತ್ನೆ 18ಕ್ಕೆ 1, ಜಯವಿಕ್ರಮ 47ಕ್ಕೆ 1).

    ಓವಲ್‌ನಲ್ಲಿ ಭಾರತ ಸಾಧಾರಣ ಮೊತ್ತ, ಆಂಗ್ಲರಿಗೆ ಬೌಲರ್‌ಗಳಿಂದ ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts