ಭಾರತದಲ್ಲಿ 2021ರವರೆಗೆ ಕರೊನಾ ನಿಯಂತ್ರಣವಾಗದಿದ್ದರೆ ಟಿ20 ವಿಶ್ವಕಪ್ ಸ್ಥಳಾಂತರ?

ನವದೆಹಲಿ: ಭಾರತದಲ್ಲಿ 2021ರವರೆಗೂ ಕರೊನಾ ವೈರಸ್ ನಿಯಂತ್ರಣವಾಗದಿದ್ದರೆ, ಟಿ20 ವಿಶ್ವಕಪ್ ಟೂರ್ನಿಯನ್ನು ಶ್ರೀಲಂಕಾ ಅಥವಾ ಯುಎಇಗೆ ಸ್ಥಳಾಂತರಗೊಳಿಸಲು ಐಸಿಸಿ ಚಿಂತನೆ ನಡೆಸಿದೆ.

ಈ ವರ್ಷ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿದ್ದ ಟಿ20 ವಿಶ್ವಕಪ್ ಟೂರ್ನಿ ಕರೊನಾ ವೈರಸ್ ಹಾವಳಿಯಿಂದಾಗಿ ಈಗಾಗಲೆ ಮುಂದೂಡಲ್ಪಟ್ಟಿದೆ. ಹೀಗಾಗಿ ಮುಂದಿನ ವರ್ಷದ ಟಿ20 ವಿಶ್ವಕಪ್ ಕೂಡ ಇಂಥದ್ದೇ ಕಾರಣದಿಂದಾಗಿ ಮುಂದೂಡಲ್ಪಡದಂತೆ ಮಾಡಲು ಐಸಿಸಿ ಬದಲಿ ಯೋಜನೆ ಸಿದ್ಧಗೊಳಿದಿದೆ. ಇದರನ್ವಯ ಶ್ರೀಲಂಕಾ ಮತ್ತು ಯುಎಇಯನ್ನು ಟೂರ್ನಿ ಆತಿಥ್ಯಕ್ಕೆ ಮೀಸಲು ರಾಷ್ಟ್ರಗಳನ್ನಾಗಿ ಆಯ್ಕೆ ಮಾಡಲಾಗಿದೆ.

ಮುಂದಿನ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಟಿ20 ವಿಶ್ವಕಪ್ ಟೂರ್ನಿ ನಿಗದಿಯಂತೆಯೇ ಭಾರತದಲ್ಲೇ ನಡೆಯಲಿರುವುದನ್ನು ಐಸಿಸಿ ಕಳೆದ ವಾರ ಖಚಿತಪಡಿಸಿತ್ತು. ಇದರ ಜತೆಗೆ 2022ರ ಟಿ20 ವಿಶ್ವಕಪ್ ಟೂರ್ನಿಯನ್ನು ಆಸ್ಟ್ರೇಲಿಯಾದಲ್ಲಿ ಆಯೋಜಿಸಲು ನಿರ್ಧರಿಸಿತ್ತು. ಆದರೆ ಇದರ ಜತೆಜತೆಯಲ್ಲೇ ಈ ಜಾಗತಿಕ ಟೂರ್ನಿಯ ಆಯೋಜನೆಗೆ ಮೀಸಲು ತಾಣವನ್ನೂ ಆಯ್ಕೆ ಮಾಡಿದೆ ಎನ್ನಲಾಗಿದೆ.

ಇದನ್ನೂ ಓದಿ:  2022ರವರೆಗೆ ಚೆನ್ನೈ ಸೂಪರ್‌ಕಿಂಗ್ಸ್‌ನಲ್ಲೇ ಧೋನಿ ಆಟ!

ಭಾರತ ಈಗ ವಿಶ್ವದಲ್ಲಿ 3ನೇ ಅತ್ಯಧಿಕ ಕರೊನಾ ವೈರಸ್ ಪ್ರಕರಣಗಳು ದಾಖಲಾಗಿರುವ ದೇಶವಾಗಿದೆ. 20 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, 45 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಾಲಿ ಪರಿಸ್ಥಿತಿಯಿಂದಾಗಿ ಬಿಸಿಸಿಐ ಈಗಾಗಲೆ ಪ್ರತಿಷ್ಠಿತ ಐಪಿಎಲ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಿದೆ. ಅಲ್ಲದೆ ದೇಶೀಯ ಕ್ರಿಕೆಟ್ ಋತುವನ್ನೂ ನಿಗದಿಯಂತೆ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಟಿ20 ವಿಶ್ವಕಪ್‌ಗೆ ಇನ್ನೂ ಸಾಕಷ್ಟು ಸಮಯ ಬಾಕಿ ಇರುವುದರಿಂದ ಬಿಸಿಸಿಐನಲ್ಲಿ ಸದ್ಯ ಯಾರೂ ಐಸಿಸಿ ಚಿಂತನೆಯ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ಟಿ20 ವಿಶ್ವಕಪ್ ಸ್ಥಳಾಂತರದ ಅನಿವಾರ‌್ಯತೆಯ ಬಗ್ಗೆ ಐಸಿಸಿ, 2021ರ ಮಾರ್ಚ್‌ವರೆಗೂ ಕಾದುನೋಡಲಿದೆ ಎನ್ನಲಾಗಿದೆ. ಅಲ್ಲಿಯವರೆಗೆ ಭಾರತದಲ್ಲಿ ಕರೊನಾ ವೈರಸ್ ನಿಯಂತ್ರಣಕ್ಕೆ ಬಾರದಿದ್ದರೆ ಮಾತ್ರ ಟಿ20 ವಿಶ್ವಕಪ್ ಮೀಸಲು ತಾಣಕ್ಕೆ ಸ್ಥಳಾಂತರವಾಗುವ ಸಾಧ್ಯತೆ ಇದೆ.

ಜೂನಿಯರ್ ಸ್ಟೈನ್ ಖ್ಯಾತಿಯ ಮುಂಬೈ ಕ್ರಿಕೆಟಿಗ ಆತ್ಮಹತ್ಯೆ, ಐಪಿಎಲ್ ಅವಕಾಶ ಕೈತಪ್ಪಿದ್ದೇ ಕಾರಣ!

Share This Article

ದೀರ್ಘ ಕಾಲದ ಬೆನ್ನು ನೋವು ನಿಯಂತ್ರಣಕ್ಕೆ ಮಾರ್ಜಾಲಾಸನ | Back Pain

ಪ್ರ: ಮಾರ್ಜಾಲಾಸನದ ಬಗ್ಗೆ ಮಾಹಿತಿ, ಅಭ್ಯಾಸದ ಕ್ರಮ ತಿಳಿಸಿ (Back Pain). ಉ: ಈ ಆಸನಕ್ಕೆ…

ಎಳನೀರನ್ನು ಹೀಗೆ ಕುಡಿದರೆ ಸಾಕು ಹೊಟ್ಟೆಯ ಸುತ್ತ ಸೇರಿಕೊಂಡಿರುವ ಬೊಜ್ಜು ಬೇಗನೆ ಕರಗುತ್ತೆ..!

ಪ್ರತೀ ಊರಿನಲ್ಲಿ ಎಳನೀರು ಸಿಗುತ್ತದೆ. ಇದನ್ನು ನಿಯಮಿತವಾಗಿ ಕುಡಿಯುತ್ತಾ ಬಂದರೆ ತೂಕವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ…

Weight Loss: ಊಟ ಬಿಟ್ಟರೆ ತೂಕ ಕಡಿಮೆಯಾಗುತ್ತಾ? ಈ ವಿಷಯಗಳನ್ನು ನಂಬಬೇಡಿ!

ಬೆಂಗಳೂರು: ಹೆಚ್ಚಿನವರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ತೂಕ ಇಳಿಸಿಕೊಳ್ಳಲು (Weight Loss) ಹಲವು…