More

    ಇಸ್ಕಾನ್‌ ದೇವಾಲಯದಲ್ಲಿ ಶ್ರೀಕೃಷ್ಣ ಬಲರಾಮರ ರಥೋತ್ಸವ; ಚೆಲುವರಾಯಸ್ವಾಮಿ ಚಾಲನೆ

    ಬೆಂಗಳೂರು : ಶ್ರೀರಾಮ, ಶ್ರೀಕೃಷ್ಣರು ಆದರ್ಶ ಮತ್ತು ಉಪದೇಶಗಳು ಎಲ್ಲರ ಜೀವನಕ್ಕೂ ಅವಶ್ಯಕ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಅಭಿಪ್ರಾಯಿಸಿದ್ದಾರೆ. ರಾಜಾಜಿನಗರದ ಇಸ್ಕಾನ್ ದೇವಾಲಯದಲ್ಲಿ ನಡೆದ ಶ್ರೀಕೃಷ್ಣ-ಬಲರಾಮರ 39ನೇ ವಾರ್ಷಿಕ ರಥೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಶ್ರೀಕೃಷ್ಣ ಪರಮಾತ್ಮನು ಕೇವಲ ಮನುಷ್ಯರು ಮಾತ್ರರಲ್ಲದೇ ದೇವತೆಗಳ ಸಂಕಷ್ಟಗಳನ್ನು ನೀಗಿಸುವಂತಹ ಮಹಾ ಪರಮಪುರುಷನಾಗಿದ್ದಾನೆ. ಅಂತಹ ಶ್ರೀರಾಮ ಮತ್ತು ಶ್ರೀಕೃಷ್ಣರ ಆದರ್ಶ ಮತ್ತು ಅವರು ನೀಡಿರುವ ಉಪದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

    ಅನೇಕ ಯುವಕರು ತಮ್ಮ ಲೌಕಿಕ ಭೋಗಗಳನ್ನು ತೊರೆದು ಇಸ್ಕಾನ್ ಸಂಸ್ಥೆಯಲ್ಲಿ ನಿಸ್ವರ್ಥಾಸೇವೆ ಮಾಡುತ್ತಿರುವುದು ಎಲ್ಲರಿಗೂ ಪ್ರೇರಣೆಯಾಗಿದೆ. ಇವರ ಸಮಾಜಮುಖಿ ಸೇವಾಕಾರ್ಯಗಳಿಗೆ ಸರ್ಕಾರದ ಸಹಕಾರ ಸದಾಕಾಲ ಇರುತ್ತದೆ ಎಂದು ಸಚಿವರು ಭರವಸೆ ನೀಡಿದರು.

    ಇಸ್ಕಾನ್ ಬೆಂಗಳೂರಿನ ಅಧ್ಯಕ್ಷರಾದ ಮಧು ಪಂಡಿತ ದಾಸರು ಮಾತನಾಡಿ, ರಥದ ಮೇಲೆ ಭಗವಂತನ ದರ್ಶನ ಪಡೆದವರು ಅಪಾರ ಆಧ್ಯಾತ್ಮಿಕ ಲಾಭವನ್ನು ಪಡೆಯುತ್ತಾರೆ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ಆ ರಥಸ್ಥರಾದ ಶ್ರೀಕೃಷ್ಣ-ಬಲರಾಮರು ಎಲ್ಲರಿಗೂ ಭಕ್ತಿ, ಶಾಂತಿ ಮತ್ತು ಸಂತೋಷವನ್ನು ದಯಪಾಲಿಸಲೆಂದು ಪ್ರಾರ್ಥಿಸಿದರು. ಮಹಾಲಕ್ಷ್ಮಿಲೇಔಟ್ ಶಾಸಕ ಗೋಪಾಲಯ್ಯ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ರಾಜಾಜಿನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಆಕರ್ಷಕ ರಥೋತ್ಸವವು ಕೊನೆಯಲ್ಲಿ ಇಸ್ಕಾನ್ ದೇವಾಲಯಕ್ಕೆ ಮರಳಿತು. ಈ ವೇಳೆ ಮಂಗಳವಾದ್ಯಗಳೊಂದಿಗೆ ಶ್ರೀಕೃಷ್ಣನ ಭಕ್ತರು ಮಾಡಿದ ಕೀರ್ತನೆಗಳು ಸಾರ್ವಜನಿಕರ ಗಮನ ಸೆಳೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts