More

    ಮೃದಂಗ ವಾದಕ ಶತಾಯುಷಿ ಡಾ.ಟಿ.ಕೆ.ಮೂರ್ತಿ ಶತಮಾನೋತ್ಸವ

    ಬೆಂಗಳೂರು : ಹಿರಿಯ ಮೃದಂಗ ವಾದಕ, ಪದ್ಮಶ್ರೀ ಪುರಸ್ಕೃತ ಡಾ.ಟಿ.ಕೆ.ಮೂರ್ತಿಯವರ ಶತಮಾನೋತ್ಸವ ಸಮಾರಂಭವು ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಎನ್.ಆರ್.ಕಾಲೋನಿಯ ಪತ್ತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಡಾ.ಟಿ.ಕೆ.ಮೂರ್ತಿಯವರನ್ನು ಸನ್ಮಾನಿಸಲಾಯಿತು.

    1924 ರಲ್ಲಿ ಜನಿಸಿದ ಡಾ.ಟಿ.ಕೆ.ಮೂರ್ತಿಯವರು ಮೃದಂಗ ಕ್ಷೇತ್ರದಲ್ಲಿ 90 ವರ್ಷದ ಅನುಭವ ಹೊಂದಿರುವ ಹಿರಿಮೆ ಹೊಂದಿದ್ದಾರೆ. ರಾಜ್ಯ ಸರ್ಕಾರದ ಪ್ರತಿಷ್ಠಿತ ಚೌಡಯ್ಯ ಪ್ರಶಸ್ತಿ ಪುರಸ್ಕೃತರೂ ಆಗಿರುವ ಡಾ.ಟಿ.ಕೆ.ಮೂರ್ತಿಯವರಿಗೆ ಅವರ ಶಿಷ್ಯರಾದ ಬಿ.ಸಿ.ಮಂಜುನಾಥ್ ಅವರು ಗೌರವ ಸನ್ಮಾನವನ್ನು ಆಯೋಜಿಸಿದ್ದರು.

    ಸಮಾರಂಭವು ತಾಳಾರ್ಚನೆ ಮೂಲಕ ಉದ್ಘಾಟನೆಯಾಗಿ ಮೂರ್ತಿಯವರ ಕೆಲವು ರಚನೆಗಳನ್ನು ಪ್ರಸ್ತುತಪಡಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ವಾಂಸರುಗಳಾದ ಡಾ ಆರ್.ಕೆ.ಪದ್ಮನಾಭ, ಡಾ ಸುಮಾ ಸುಧೀಂದ್ರ ಹಾಗು ಮೈಸೂರು ನಾಗರಾಜ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts