More

    ಶ್ರೀ ಚನ್ನಬಸವಸ್ವಾಮಿ ರಥೋತ್ಸವ ಜ.23ಕ್ಕೆ

    ಗಂಗಾವತಿ: ನಗರದ ಶ್ರೀ ಚನ್ನಮಲ್ಲಿಕಾರ್ಜುನ ಪುರಾಣ ಮಂಟಪದಲ್ಲಿ ಆರಾಧ್ಯ ದೈವ ಶ್ರೀ ಚನ್ನಬಸವ ಮಹಾಸ್ವಾಮಿಗಳ 78ನೇ ವರ್ಷದ ಪುಣ್ಯಸ್ಮರಣೋತ್ಸವ ನಿಮಿತ್ತ ಪುರಾಣ ಪ್ರವಚನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.


    ಜ.23 ರಂದು ಮಹಾರಥೋತ್ಸವ ಜರುಗಲಿದ್ದು, ಒಂದು ತಿಂಗಳ ಮುನ್ನವೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಪೂರ್ವಭಾವಿಯಾಗಿ ಪಂ. ಪುಟ್ಟರಾಜ ಗವಾಯಿ ವಿರಚಿತ ಶ್ರೀ ಚನ್ನಬಸವ ಶಿವಯೋಗಿಗಳ ಪುರಾಣ ಪ್ರವಚನಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
    ಸಾನ್ನಿಧ್ಯವಹಿಸಿದ್ದ ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಆಶೀರ್ವಚನ ನೀಡಿ, ಎಲ್ಲ ಸಮುದಾಯದ ಆರಾಧ್ಯದೈವ ಶ್ರೀ ಚನ್ನಬಸವ ಸ್ವಾಮಿಗಳು ನುಡಿದಂತೆ, ಗಂಗಾವತಿ ಕ್ಷೇತ್ರ ಛೋಟಾಬಾಂಬೆ ಆಗುತ್ತಿದೆ ಎಂದರು.


    ಅರಳಹಳ್ಳಿ ಬೃಹನ್ಮಠದ ಗವಿಸಿದ್ದಯ್ಯ ಸ್ವಾಮೀಜಿ, ಪುರಾಣ ಪ್ರವಚನಕಾರ ಶ್ರವಣಕುಮಾರ ಶಾಸಿ, ಶರಣಬಸವಸ್ವಾಮಿ, ಕಲಾವಿದರಾದ ಪಂಚಾಕ್ಷರಿ ಬೊಮ್ಮಲಾಪುರ, ರಾಮುಕಂಪ್ಲಿ, ಮುಖಂಡರಾದ ವೀರಭದ್ರಪ್ಪ ಸಾಲಗುಂದಿ, ಶಿವಲಿಂಗಯ್ಯ ಸಾಲಿಮಠ, ಪಂಪಾಪತಿ ಹುರಕಡ್ಲಿ, ಶಾಂತಮಲ್ಲಯ್ಯಸ್ವಾಮಿ, ಸಿದ್ದಲಿಂಗೇಶ ಪೂಲಭಾವಿ, ಅಶೋಕ್ ಸಾಲಗುಂದಿ, ಅಮರಯ್ಯಸ್ವಾಮಿ, ಶಿವಪ್ರಕಾಶ ಅಕ್ಕಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts