More

    ಕೊಹ್ಲಿ ಸೆಂಚುರಿ | ಗೆದ್ದ ಆರ್‌ಸಿಬಿ; ಪ್ಲೇ ಆಫ್ ಆಸೆ ಜೀವಂತ

    ಹೈದರಾಬಾದ್​: ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ (100 ರನ್​, 63 ಎಸೆತ,12 ಬೌಂಡರಿ, 4 ಸಿಕ್ಸರ್​) ವಿಶ್ವದ ಶ್ರೀಮಂತ ಟಿ20 ಲೀಗ್​ನಲ್ಲಿ 4 ವರ್ಷಗಳ ಬಳಿಕ ಸಿಡಿಸಿದ ಆಕರ್ಷಕ ಶತಕ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್​ (71 ರನ್​, 47 ಎಸೆತ, 7 ಬೌಂಡರಿ, 2 ಸಿಕ್ಸರ್​) ಜತೆಗಿನ ಭರ್ಜರಿ ಜತೆಯಾಟದ ನೆರವಿನಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಐಪಿಎಲ್​&16ರಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಎದುರು 8 ವಿಕೆಟ್​ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಫಾಫ್​ ಡು ಪ್ಲೆಸಿಸ್​ ಬಳಗ ಪ್ಲೇಆಫ್​​ ಅವಕಾಶ ವೃದ್ಧಿಸಿಕೊಂಡಿದೆ.

    ರಾಜೀವ್​ ಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಸನ್​ರೈಸರ್ಸ್​ ತಂಡ ವಿಕೆಟ್​ ಕೀಪರ್​&ಬ್ಯಾಟರ್​ ಹೆನ್ರಿಕ್​ ಕ್ಲಾಸೆನ್​ (104 ರನ್​, 51 ಎಸೆತ, 8 ಬೌಂಡರಿ, 6 ಸಿಕ್ಸರ್​) ಶತಕದ ನೆರವಿನಿಂದ 5 ವಿಕೆಟ್​ಗೆ 186 ರನ್​ ಕಲೆಹಾಕಿತು. ಪ್ರತಿಯಾಗಿ ಆರ್​ಸಿಬಿ ತಂಡ ಕೊಹ್ಲಿ& ಪ್ಲೆಸಿಸ್​ ಜೋಡಿಯ ಭರ್ಜರಿ ಮೊದಲ ವಿಕೆಟ್​ ಜತೆಯಾಟದ ನೆರವಿನಿಂದ 19.2 ಓವರ್​ಗಳಲ್ಲಿ 2 ವಿಕೆಟ್​ಗೆ 187 ರನ್​ ಪೇರಿಸಿ ಗೆಲುವಿನ ಕೇಕೇ ಹಾಕಿತು.

    ವಿರಾಟ್​-ಪ್ಲೆಸಿಸ್​ ಭರ್ಜರಿ ಆಟ

    ಆಕರ್ಷಕ ಕವರ್​ ಡ್ರೈವ್​ ಮೂಲಕ ಬೌಂಡರಿ ಸಿಡಿಸಿ ಚೇಸಿಂಗ್​ ಆರಂಭಿಸಿದ ಕೊಹ್ಲಿ ಜತೆ ಪ್ಲೆಸಿಸ್​ ಭರ್ಜರಿ ಬ್ಯಾಟಿಂಗ್​ ನಡೆಸಿದರು. ಈ ಜೋಡಿ ಪವರ್​ಪ್ಲೇನಲ್ಲಿ ಸ್ಫೋಟಕ ಬ್ಯಾಟಿಂಗ್​ ಮೂಲಕ 64 ರನ್​ ದೋಚಿತು. ಕೊಹ್ಲಿ ಹಾಗೂ ಪ್ಲೆಸಿಸ್​ ಜೋಡಿ ಮೊದಲ ವಿಕೆಟ್​ಗೆ 108 ಎಸೆತಗಳಲ್ಲಿ 172 ರನ್​ಗಳ ಜತೆಯಾಟವಾಡಿತು. ಪ್ಲೆಸಿಸ್​ 34 ಎಸೆತದಲ್ಲಿ ಸತತ ಮೂರನೇ ಹಾಗೂ ಟೂರ್ನಿಯಲ್ಲಿ 8ನೇ ಅರ್ಧಶತಕ ಪೂರೈಸಿದರು. 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಬಳಿಕ ಬಿರುಸಿನಾಟ ನಡೆಸಿದ ಕೊಹ್ಲಿಗೆ ಮತ್ತೊಂದು ಬದಿಯಿಂದ ಪ್ಲೆಸಿಸ್​ ಉತ್ತಮ ಬೆಂಬಲ ಒದಗಿಸಿದರು. 18ನೇ ಓವರ್​ನಲ್ಲಿ ಸಿಕ್ಸರ್​ ಸಿಡಿಸಿದ ಕೊಹ್ಲಿ 62 ಎಸೆತಗಳಲ್ಲಿ ಶತಕ ಪೂರೈಸಿ ಮರು ಎಸೆತದಲ್ಲಿ ವಿಕೆಟ್​ ಒಪ್ಪಿಸಿದರು. ನಂತರ 4 ಎಸೆತದ ಅಂತರದಲ್ಲಿ ಪ್ಲೆಸಿಸ್​ ಸಹ ಡಗೌಟ್​ ಸೇರಿದರು. ಅಂತಿಮ ಓವರ್​ನಲ್ಲಿ 3 ರನ್​ ಅವಶ್ಯವಿದ್ದಾಗ ಮ್ಯಾಕ್ಸ್​ವೆಲ್​ (5*) ಹಾಗೂ ಮೈಕೆಲ್​ ಬ್ರೇಸ್​ವೆಲ್​ (4*) 4 ಎಸೆತ ಬಾಕಿಯಿರುವಂತೆ ಆರ್​ಸಿಬಿ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts