More

    ಲಾಕ್‌ಡೌನ್‌ನಲ್ಲಿ ಕ್ರೀಡಾಪಟುಗಳ ನೆಚ್ಚಿನ ಸಂಗಾತಿ ಯಾರು ಗೊತ್ತೇ?

    ಪುಸ್ತಕ ಓದುತ್ತಿರುವ ರಾಣಿ ರಾಂಪಾಲ್, ಮನಿಕಾ ಬಾತ್ರಾ

    ಬೆಂಗಳೂರು: ಕ್ರೀಡಾ ಚಟುವಟಿಕೆಗಳು ಇಲ್ಲದೆ ಮನೆಯಲ್ಲೇ ಲಾಕ್‌ಡೌನ್ ಆಗಿದ್ದ ಕ್ರೀಡಾಪಟುಗಳು ಹೊಸ ಹವ್ಯಾಸವೊಂದನ್ನು ನೆಚ್ಚಿಕೊಂಡಿದ್ದಾರೆ. ಚೆಂಡು, ಬ್ಯಾಟ್, ರ‌್ಯಾಕೆಟ್, ಸ್ಟಿಕ್ ಜತೆಯಲ್ಲೇ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದ ಕ್ರೀಡಾಪಟುಗಳಿಗೆ ಈಗ ಪುಸ್ತಕಗಳು ಹೊಸ ಸಂಗಾತಿಯಾಗಿವೆ.

    ಇದನ್ನೂ ಓದಿ:ಪ್ರೇಕ್ಷಕರಿಲ್ಲದ ಕ್ರಿಕೆಟ್, ವಧುವಿಲ್ಲದ ಮದುವೆಯಂತೆ!

    ಲಾಕ್‌ಡೌನ್‌ನಲ್ಲಿ ಕ್ರೀಡಾಪಟುಗಳ ನೆಚ್ಚಿನ ಸಂಗಾತಿ ಯಾರು ಗೊತ್ತೇ?

    ಲಿಯಾಂಡರ್ ಪೇಸ್, ಅಜಿಂಕ್ಯ ರಹಾನೆ, ಮಯಾಂಕ್ ಅಗರ್ವಾಲ್ ಪುಸ್ತಕಪ್ರೀತಿ

    ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್, ‘ಪುಸ್ತಕ ಓದುವುದು ಆತ್ಮಕ್ಕೆ ಆಹಾರ ಪೂರೈಸಿದಂತೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಕ್ರಿಕೆಟಿಗರಾದ ಅಜಿಂಕ್ಯ ರಹಾನೆ ಮತ್ತು ಕನ್ನಡಿಗ ಮಯಾಂಕ್ ಅಗರ್ವಾಲ್ ಪುಸ್ತಕಗಳನ್ನು ಓದುವುದರಲ್ಲೇ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಮತ್ತು ಟೇಬಲ್ ಟೆನಿಸ್ ತಾರೆ ಮನಿಕಾ ಬಾತ್ರಾ ಕೂಡ ಪುಸ್ತಕ ಓದುವುದರ ಮೂಲಕ ಅತ್ಯುತ್ತಮ ರೀತಿಯಲ್ಲಿ ನಮ್ಮ ಸಮಯವನ್ನು ವ್ಯಯಿಸಬಹುದು ಎಂದಿದ್ದಾರೆ.

    ಇದನ್ನೂ ಓದಿ: ಬಾಹುಬಲಿಯಾದ ಡೇವಿಡ್ ವಾರ್ನರ್….!

    ಕ್ರೀಡಾ ಸಚಿವರಿಂದ ಮೆಚ್ಚುಗೆ

    ಲಾಕ್‌ಡೌನ್‌ನಲ್ಲಿ ಕ್ರೀಡಾಪಟುಗಳ ನೆಚ್ಚಿನ ಸಂಗಾತಿ ಯಾರು ಗೊತ್ತೇ?
    ರಿಯೋ ಒಲಿಂಪಿಕ್ಸ್ ರಜತ ವಿಜೇತೆ ಮತ್ತು ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿವಿ ಸಿಂಧು, ಪುಸ್ತಕಗಳನ್ನು ಓದಲು ಇದು ಅತ್ಯುತ್ತಮ ಸಮಯ ಎಂದಿದ್ದಾರೆ. ಸದ್ಗುರುಗಳ ‘ಡೆತ್-ಆ್ಯನ್ ಇನ್‌ಸೈಡ್ ಸ್ಟೋರಿ’ ಪುಸ್ತಕವನ್ನು ಓದುತ್ತಿರುವ ಚಿತ್ರವನ್ನು ಪ್ರಕಟಿಸಿ, ನೀವೂ ಓದಿ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ. ಸಿಂಧು ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ‘ಸಿಂಧು ಅವರಂಥ ಕ್ರೀಡಾಪಟುಗಳು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಿರುವುದನ್ನು ನೋಡಿ ಖುಷಿಯಾಗುತ್ತಿದೆ. ಪುಸ್ತಕಗಳನ್ನು ಓದುವುದರಿಂದ ಏಕಾಗ್ರತೆ ಮತ್ತು ೆಕಸ್ ಹೆಚ್ಚುತ್ತದೆ. ಜತೆಗೆ ಇದರಿಂದ ನೆನಪಿನ ಶಕ್ತಿಯೂ ವೃದ್ಧಿಸುತ್ತದೆ’ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts