More

    ವಿಮಾನ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಾರಾಟಕ್ಕೆ ಮುಹೂರ್ತ ಫಿಕ್ಸ್​- ಇಲ್ಲಿದೆ ನೋಡಿ ಸಂಪೂರ್ಣ ವಿವರ

    ನವದೆಹಲಿ: ಲಾಕ್​ಡೌನ್​ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳಿನಿಂದ ವಿಮಾನ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಎಷ್ಟೋ ಮಂದಿ ತಮ್ಮ ಊರಿಗೆ ವಾಪಸಾಗಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ. ಇನ್ನು ಕೆಲವರಿಗೆ ಬೇರೆ ಬೇರೆ ಕಾರಣಗಳಿಗೆ ಪರ ಊರುಗಳಿಗೆ ವಿಮಾನದಲ್ಲಿ ಹೋಗುವ ಧಾವಂತ.

    ಅಂತೂ ವಿಮಾನ ಪ್ರಯಾಣಿಕರ ಇಷ್ಟು ದಿನಗಳ ನಿರೀಕ್ಷೆ ಇದೀಗ ಮುಕ್ತಾಯಗೊಂಡಿದೆ. ಕೇಂದ್ರ ಸರ್ಕಾರ ವಿಶೇಷ ರೈಲಿನ ವ್ಯವಸ್ಥೆ ಮಾಡಿರುವ ಬೆನ್ನಲ್ಲೇ ಇದೀಗ ವಿಮಾನಗಳ ಹಾರಾಟಕ್ಕೂ ಅವಕಾಶ ಕಲ್ಪಿಸಿದೆ. ಆದರೆ ಇದು ಕೇವಲ ಭಾರತದ ಒಳಗಿರುವ ಊರುಗಳಿಗೇ ವಿನಾ ಹೊರದೇಶಗಳ ಪ್ರಯಾಣಕ್ಕೆ ಅಲ್ಲ.

    ಇದನ್ನೂ ಓದಿ: VIDEO- ಲಾಕ್​ಡೌನ್​ ಎಫೆಕ್ಟ್​: ಕೋರ್ಟ್​ ಮುಂದೆ ಭರ್ಜರಿ ವ್ಯಾಯಾಮ! ಇದ್ಯಾಕೆ ಅಂತೀರಾ?

    ಅಂದ ಹಾಗೆ, ಏರ್​ ಇಂಡಿಯಾ ವಿಮಾನವು ಮೇ.19ರಿಂದ ಜೂನ್​ 2ರ ನಡುವಿನ ಅವಧಿಯಲ್ಲಿ ಹಾರಾಟ ಮಾಡಲಿದೆ. ಯಾವ ನಗರಕ್ಕೆ ಎಷ್ಟು ವಿಶೇಷ ವಿಮಾನಗಳಿರಲಿವೆ, ಮುಂಗಡ ಟಿಕೆಟ್​ ಹೇಗೆ ಬುಕ್​ ಮಾಡುವುದು, ಹಣ ಎಷ್ಟು ಇರಲಿದೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇದಾಗಲೇ ಏರ್‌ ಇಂಡಿಯಾ, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಿದ್ದು ಅದರ ಅನುಮತಿಗಾಗಿ ಕಾಯುತ್ತಿದೆ.

    ಒಂದು ವೇಳೆ ಅನುಮತಿ ಸಿಕ್ಕರೆ ಮೇ.19ರಿಂದ ಜೂನ್‌ 2ರವರೆಗಿನ ಅವಧಿಯಲ್ಲಿ ಏರ್​ ಇಂಡಿಯಾ ವಿಮಾನದ ಮೂಲಕ ನೀವು ಊರನ್ನು ತಲುಪಬಹುದಾಗಿದೆ.

    ಇದನ್ನೂ ಓದಿ: ಕಂಟೈನ್​ಮೆಂಟ್​ ಝೋನ್​ನಿಂದಲೇ ಕೇಕೇ ಹಾಕುತ್ತಿದೆ ಕರೊನಾ!

    ಯಾವ್ಯಾವ ವಿಮಾನಗಳು ಎಲ್ಲೆಲ್ಲಿ ಹಾರಾಟ ನಡೆಸಲಿದೆ ಎಂಬ ಬಗ್ಗೆ ಇಲ್ಲಿದೆ ನೋಡಿ ವಿವರ:
    ಬೆಂಗಳೂರು ಸೇರಿದಂತೆ ದೆಹಲಿ, ಮುಂಬೈ ಮತ್ತು ಹೈದರಾಬಾದ್​ ನಡುವೆ ಹೆಚ್ಚಿನ ವಿಮಾನಗಳು ಹಾರಾಟ ನಡೆಸಲಿವೆ. ದೆಹಲಿಗೆ ಒಟ್ಟು 173 ವಿಮಾನಗಳು, ಮುಂಬೈಗೆ 40, ಹೈದರಾಬಾದ್​ಗೆ 25 ಹಾಗೂ ಕೊಚ್ಚಿಗೆ 12 ವಿಮಾನಗಳಿರಲಿವೆ ಎಂದು ಏರ್‌ ಇಂಡಿಯಾ ಹೇಳಿದೆ.

    ಬೆಂಗಳೂರಿನಿಂದ ಮುಂಬೈ, ದೆಹಲಿ ಹಾಗೂ ಹೈದರಾಬಾದ್​ಗೆ ವಿಮಾನ ಹಾರಾಟ ನಡೆಯಲಿದೆ. ಅದರಂತೆಯೇ, ದೆಹಲಿಯಿಂದ ಜೈಪುರ, ಬೆಂಗಳೂರು, ಹೈದರಾಬಾದ್​, ಅಮೃತಸರ, ಅಹಮದಾಬಾದ್‌, ಲಕ್ನೋ, ಗಯಾ, ವಿಜಯವಾಡಕ್ಕೆ; ಮುಂಬೈನಿಂದ ವಿಶಾಖಪಟ್ಟಣ, ಕೊಚ್ಚಿ, ಅಹಮದಾಬಾದ್, ಬೆಂಗಳೂರು, ಹೈದರಾಬಾದ್​, ವಿಜಯವಾಡಕ್ಕೆ; ಹೈದರಾಬಾದ್​​ನಿಂದ ಮುಂಬೈ, ದೆಹಲಿಗೆ; ಚೆನ್ನೈನಿಂದ ಒಂದು ಫ್ಲೈಟ್‌ ಕೊಚ್ಚಿಗೆ ಹಾರಾಟ ನಡೆಸಲಿದೆ ಎಂದು ಏರ್​ ಇಂಡಿಯಾ ಹೇಳಿದೆ.

    ಇದನ್ನೂ ಓದಿ: ಅರೆ ಹೊಟ್ಟೆ, ಬಗಲಲ್ಲಿ ಪುಟ್ಟ ಮಕ್ಕಳು… 1,100 ಕಿ.ಮೀ ನಡೆದ ದಂಪತಿ… ಮುಂದೆ?

    ಇನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಅನುಮತಿಯೊಂದೇ ಬಾಕಿ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts