More

    ಟಿಕ್ರಿ ಗಡಿಯಲ್ಲಿ ರೈತ ಮಹಿಳೆಯರ ಮೇಲೆ ಚಲಿಸಿದ ಟ್ರಕ್​; ಮನೆಗೆ ಹೊರಟಿದ್ದವರ ಪ್ರಾಣ ಹೊತ್ತೊಯ್ದ ಜವರಾಯ

    ಚಂಡೀಗಢ: ದೆಹಲಿ ಮತ್ತು ಹರಿಯಾಣ ನಡುವಿನ ಟಿಕ್ರಿ ಗಡಿಯಲ್ಲಿ ವೇಗವಾಗಿ ಹೋಗುತ್ತಿದ್ದ ಟ್ರಕ್​ ಒಂದು ಮೇಲೆ ಹರಿದು ಮೂವರು ರೈತಮಹಿಳೆಯರು ಸಾವಪ್ಪಿದ್ದಾರೆ. ಇಂದು ಬೆಳಿಗ್ಗೆ, ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರು ತಮ್ಮ ಹಳ್ಳಿಗೆ ವಾಪಸಾಗಲು ಆಟೋ ರಿಕ್ಷಾಗೆ ಕಾಯುತ್ತಿದ್ದಾಗ, ಈ ಅಪಘಾತ ನಡೆದಿದೆ ಎನ್ನಲಾಗಿದೆ.

    ಇಂದು ಬೆಳಿಗ್ಗೆ 6 ಗಂಟೆ ವೇಳೆಗೆ ಹರಿಯಾಣದ ಜಝ್ಝರ್​ ಜಿಲ್ಲೆಯ ಬಹದೂರ್​ಗಡದ ಬಳಿ ವೇಗವಾಗಿ ಚಲಿಸುತ್ತಿದ್ದ ಟ್ರಕ್​​, ರಸ್ತೆ ಡಿವೈಡರ್​ ಮೇಲೆ ಹರಿಹಾಯ್ದಿತು. ಆ ಡಿವೈಡರ್​ ಮೇಲೆ ಆಟೋರಿಕ್ಷಾಗಾಗಿ ಐವರು ಮಹಿಳೆಯರು ಕಾದು ಕುಳಿತಿದ್ದರು. ಅವರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮೂರನೆಯವರು ಆಸ್ಪತ್ರೆಯಲ್ಲಿ ಮೃತಪಟ್ಟರು. ಇನ್ನಿಬ್ಬರು ಮಹಿಳೆಯರಿಗೆ ಗಾಯಗಳುಂಟಾದವು ಎನ್ನಲಾಗಿದೆ.

    ಇದನ್ನೂ ಓದಿ: ತುಂಬು ಗರ್ಭಿಣಿಗಾಗಿ ವಾಪಸ್‌ ಬಂತು ರೈಲು! ನಡೆಯಿತು ಹೆರಿಗೆ- ಟ್ರೇನ್‌ ಲೇಟಾದರೂ ಭಾರಿ ಮೆಚ್ಚುಗೆ

    ಟ್ರಕ್​ ಚಾಲಕ ಅಪಘಾತ ಸ್ಥಳದಲ್ಲಿ ವಾಹನ ಬಿಟ್ಟು ಓಡಿಹೋಗಲು ಪ್ರಯತ್ನಿಸಿದ. ಆದರೆ ಸ್ಥಳೀಯ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಚಾಲಕನು ನಿದ್ದೆ ಹತ್ತಿ ವಾಹನವನ್ನು ಡಿವೈಡರ್​ ಮೇಲಕ್ಕೆ ಹೊರಳಿಸಿದ್ದಾನೆಂದು ಅನುಮಾನಿಸಲಾಗಿದೆ.

    ಮೃತರನ್ನು ಪಂಜಾಬ್​ನ ಮಾನ್ಸಾ ಜಿಲ್ಲೆಯ ಖೀವ ದಿಯಲು ವಾಲ ಎಂಬ ಗ್ರಾಮಕ್ಕೆ ಸೇರಿದ್ದ ಅಮರ್​ಜೀತ್​ ಕೌರ್​, ಗುರ್​ಮೇಲ್​ ಕೌರ್​ ಮತ್ತು ಸುಖವಿಂದರ್ ಕೌರ್​ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಗುರ್​ಮೇಲ್​ ಕೌರ್ ಮತ್ತು ಹರಮೀತ್ ಕೌರ್ ಎಂಬ ಇಬ್ಬರು ಮಹಿಳೆಯರೂ ಈ ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ಎಬಿಸಿಡಿ ಬರೆಯಲು ಸೆಣಸಾಡಿದ ಇಂಗ್ಲೀಷ್​ ಶಿಕ್ಷಕ! ಪೋಷಕರ ಆಕ್ರೋಶ

    ರಾಖಿ ಕಟ್ಟಿದ ಹುಡುಗಿಯನ್ನೇ ಹಾರಿಸಿಕೊಂಡು ಹೋದ! ಸ್ನೇಹಿತನಿಂದಲೇ ನಡೆಯಿತು ಘೋರ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts