More

  ಮೂರು ಬಾರಿ ಪಲ್ಟಿ ಹೊಡೆದ ಕಾರಿನಿಂದ ಆಕಾಶಕ್ಕೆ ಚಿಮ್ಮಿ ಕೆಳಗೆ ಬಿದ್ದ ಚಾಲಕ! ಭಯಾನಕ ವಿಡಿಯೋ ವೈರಲ್​

  ದುಬೈ: ಮೂರು ಬಾರಿ ಪಲ್ಟಿ ಹೊಡೆದ ಕಾರಿನಿಂದ ವ್ಯಕ್ತಿಯೊಬ್ಬ ಪವಾಡಸದೃಶ ರೀತಿಯಲ್ಲಿ ಪಾರಾಗಿರುವ ಭಯಾನಕ ಘಟನೆ ಕುವೈತ್​ನ ಅಬು ಎಲ್​ ಹಸನಿಯಾ ಬೀಚ್​ನಲ್ಲಿ ನಡೆದಿದ್ದು, ಇದಕ್ಕೆ​ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

  ಈ ಘಟನೆ ಮುಬಾರಕ್ ಅಲ್-ಕಬೀರ್ ಗವರ್ನರೇಟ್​ನಲ್ಲಿ ಭಾನುವಾರ ನಡೆದಿದೆ. ಸಮುದ್ರದ ದಂಡೆಯಲ್ಲಿ ಕಾರು ಓಡಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸಮುದ್ರದ ಅಲೆಗಳು ಹೆಚ್ಚಾಗುತ್ತಿದ್ದಂತೆ 34 ವರ್ಷದ ಚಾಲಕ ಕಾರಿನ ಬ್ಯಾಲೆನ್ಸ್ ಕಾಪಾಡಿಕೊಳ್ಳಲು ಹೆಣಗಾಡುತ್ತಿರುವಂತೆ ತೋರುತ್ತದೆ. ನೋಡ ನೋಡುತ್ತಿದ್ದಂತೆ ಕಾರು ಮೂರು ಬಾರಿ ಪಲ್ಟಿ ಹೊಡೆಯುತ್ತದೆ.

  ಆಘಾತಕಾರಿ ಸಂಗತಿ ಏನೆಂದರೆ, ಕಾರು ಪಲ್ಟಿಯಾಗುತ್ತಿದ್ದಂತೆ ಚಾಲಕನು ಕೂಡ ಕಾರಿನಿಂದ ಹೊರಕ್ಕೆ ಹಾರಿ ಸಮುದ್ರಕ್ಕೆ ಬೀಳುತ್ತಾನೆ. ಆದಾಗ್ಯೂ ಚಾಲಕ ನೀರಿನಲ್ಲಿ ಬಿದ್ದಿದ್ದರಿಂದ ಯಾವುದೇ ಹಾನಿಯಾಗದೇ ಚಾಲಕ ಬಚಾವ್​ ಆಗುತ್ತಾನೆ. ಇದಿಷ್ಟು ದೃಶ್ಯ ವಿಡಿಯೋದಲ್ಲಿದೆ.

  ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಅಧಿಕಾರಿಗಳು ಕಾರು ಸಮುದ್ರದ ದಡದಲ್ಲಿ ಉರುಳಿಬಿದ್ದಿರುವುದನ್ನು ಕಂಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಕಾರನ್ನು ದಡದಿಂದ ಮೇಲಕ್ಕೆ ಎತ್ತಲಾಗಿದ್ದು, ಅದನ್ನು ವಶಪಡಿಸಿಕೊಂಡು ಚಾಲಕನ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. (ಏಜೆನ್ಸೀಸ್​)

  ಹಾರ್ದಿಕ್​ ಪರ ಬ್ಯಾಟ್​ ಬೀಸಿದ​ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಫ್ಯಾನ್ಸ್ ಆಕ್ರೋಶಕ್ಕೆ ಹೆದರಿ ಯೂಟರ್ನ್​!

  ಮಾಫಿಯಾ ಡಾನ್​​​​, ರಾಜಕಾರಣಿ ಮುಖ್ತಾರ್ ಅನ್ಸಾರಿ ಹಿನ್ನೆಲೆ ಏನು? ದೇಶಭಕ್ತಿ ಕುಟುಂಬದಲ್ಲಿ ಜನಿಸಿದವ ದೊಡ್ಡ ಕ್ರಿಮಿನಲ್​ ಆಗಿದ್ಹೇಗೆ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts