More

    ಪರೀಕ್ಷೆಗೆ ಬಂದು ಹೋಗುವವರಿಗೆ ವಿಶೇಷ ರೈಲು ವ್ಯವಸ್ಥೆ..

    ಬೆಂಗಳೂರು: ಪರೀಕ್ಷೆಗೆ ಬಂದು ಹೋಗುವವರಿಗೆ ನೈಋತ್ಯ ರೈಲ್ವೆಯು ವಿಶೇಷ ರೈಲು ವ್ಯವಸ್ಥೆಯನ್ನು ಮಾಡಿದೆ. ರೈಲ್ವೆ ನೇಮಕಾತಿ ಮಂಡಳಿಯ ಪರೀಕ್ಷೆಗಾಗಿ ಈ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ತಿಳಿಸಿದೆ.

    ರೈಲ್ವೆ ನೇಮಕಾತಿ ಮಂಡಳಿಯ ಪರೀಕ್ಷೆಗಳ ಪ್ರಯುಕ್ತ ಅಭ್ಯರ್ಥಿಗಳ ಸಂಚಾರಕ್ಕಾಗಿ 12 ಕಾರುಗಳ ಮೆಮು ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಇದು ಜೂ. 11ರಂದು ಕಡಪದಿಂದ ಬೆಂಗಳೂರಿಗೆ ಮತ್ತು ಜೂ. 12ರಂದು ಕೆಎಸ್ಆರ್ ಬೆಂಗಳೂರಿನಿಂದ ಕಡಪಗೆ ಸಂಚರಿಸಲಿದೆ.

    ರೈಲು ಸಂಖ್ಯೆ-07582 ಕಡಪ- ಕೆಎಸ್ಆರ್ ಬೆಂಗಳೂರು ಪರೀಕ್ಷಾ ವಿಶೇಷ ರೈಲು ಜೂ. 11ರಂದು ಬೆಳಗ್ಗೆ 9ಕ್ಕೆ ಕಡಪದಿಂದ ಹೊರಟು 5.30ಕ್ಕೆ ಕೆಎಸ್ಆರ್ ಬೆಂಗಳೂರು ತಲುಪುತ್ತದೆ. ರೈಲು ಸಂಖ್ಯೆ-07585 ಕೆಎಸ್ಆರ್ ಬೆಂಗಳೂರು – ಕಡಪ ಪರೀಕ್ಷಾ ವಿಶೇಷ ರೈಲು ಕೆಎಸ್ಆರ್ ಬೆಂಗಳೂರಿನಿಂದ ಜೂ.12ರಂದು 7.15ಕ್ಕೆ ಹೊರಟು ಜೂ.13ರಂದು ಬೆಳಗ್ಗೆ 5ಕ್ಕೆ ಕಡಪ ತಲುಪುತ್ತದೆ.

    ಈ ರೈಲಿಗೆ ರಾಜಂಪೇಟ, ಕೋಡೂರು, ರೇಣಿಗುಂಟ (ಮೇಲ್ಪಾಕ್ಕಂ ಮೂಲಕ) ಕಟ್ಪಾಡಿ, ಜೋಲಾರ್‌ಪೇಟ್ಟೈ ಮತ್ತು ಬೆಂಗಳೂರು ಪೂರ್ವ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ವಿಶೇಷ ರೈಲಿನ ದರವು ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲಿನಂತೆಯೇ ಇರುತ್ತದೆ ಎಂದು ಇಲಾಖೆ ತಿಳಿಸಿದೆ.

    ಹೆರಿಗೆ ಆದ 3 ವರ್ಷಗಳ ಬಳಿಕ ತಾಯಿಯ ಮಡಿಲನ್ನು ಸೇರಿದ ಮಗು; ಆಸ್ಪತ್ರೆ ಸಿಬ್ಬಂದಿಯ ಎಡವಟ್ಟು..

    ಹೋಮ್​ವರ್ಕ್ ಮಾಡದ 5 ವರ್ಷದ ಮಗಳಿಗೆ ಅಮ್ಮನಿಂದಲೇ ಇದೆಂಥ ಶಿಕ್ಷೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts