More

    ‘ಕೆಜಿಎಫ್​ 2’ ಟೀಸರ್​ ನೋಡಲು ವಿಶೇಷ ಪ್ರದರ್ಶನ

    ಬೆಂಗಳೂರು: ಯಶ್​ ಅಭಿನಯದ ‘ಕೆಜಿಎಫ್​ 2’ ಚಿತ್ರದ ಟೀಸರ್​ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಯಶ್​ ಹುಟ್ಟುಹಬ್ಬವಾದ ಜನವರಿ ಎಂಟರಂದು ಚಿತ್ರದ ಟೀಸರ್​ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಬಹಳ ಸಂಭ್ರಮ ಹಾಗೂ ಕಾತುರದಿಂದ ಈ ಟೀಸರ್​ಗಾಗಿ ಕಾಯುತ್ತಿದ್ದಾರೆ.

    'ಕೆಜಿಎಫ್​ 2' ಟೀಸರ್​ ನೋಡಲು ವಿಶೇಷ ಪ್ರದರ್ಶನ

    ಇದನ್ನೂ ಓದಿ: ‘ಪದವಿ ಪೂರ್ವ’ ಚಿತ್ರದಲ್ಲಿ ಲೆಕ್ಚರರ್ ಆದ್ರಾ ‘ರಾಮಾ ರಾಮಾ ರೇ’ ಸಿನಿಮಾ ಖ್ಯಾತಿಯ ನಟರಾಜ್?

    ಅದರಲ್ಲೂ ಯಶ್​ ಅವರ ಹಲವು ಅಭಿಮಾನಿಗಳು ಸಂಘಗಳು ತಮ್ಮ ನಗರದ ಚಿತ್ರಮಂದಿರಗಳಲ್ಲಿ, ಈ ಟೀಸರ್​ ಬಿಡುಗಡೆಗಾಗಿಯೇ ವಿಶೇಷ ಪ್ರದರ್ಶನ ಏರ್ಪಡಿಸಿದ್ದಾರೆ. ಜನವರಿ 08ರ ಬೆಳಿಗ್ಗೆ 10.18ಕ್ಕೆ ಈ ಟೀಸರ್​ ಬಿಡುಗಡೆಯಾಗಲಿದ್ದು, ಅದಕ್ಕಾಗಿ ಚಿತ್ರಮಂದಿರಗಳನ್ನು ಬುಕ್​ ಮಾಡಲಾಗಿದೆ.

    'ಕೆಜಿಎಫ್​ 2' ಟೀಸರ್​ ನೋಡಲು ವಿಶೇಷ ಪ್ರದರ್ಶನ

    ಅಖಿಲ ಕರ್ನಾಟಕ ರಾಕಿಂಗ್​ ಸ್ಟಾರ್ ಯಶ್​ ಅಭಿಮಾನಿಗಳ ಸಂಘವು, ಜನವರಿ ಎಂಟರಂದು ಯಶ್​ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನ ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಟೀಸರ್​ ಬಿಡುಗಡೆ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಟೀಸರ್​ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಗರುಡ ರಾಮ್​ ಅವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ 2021ನೇ ಸಾಲಿನ ಕ್ಯಾಲೆಂಡರ್​ ಬಿಡುಗಡೆ ಮಾಡಲಾಗುತ್ತದಂತೆ. ಜತೆಗೆ ರಕ್ತದಾನವನ್ನೂ ಆಯೋಜಿಸಲಾಗಿದೆ. ಇದೆಲ್ಲದರ ಜತೆಗೆ ಸಿಹಿ ಹಂಚಲಾಗುತ್ತದೆ ಎಂದು ಹೇಳಲಾಗುತ್ತಿದೆ.

    ದೊಡ್ಡಬಳ್ಳಾಪುರ ತಾಲ್ಲೂಕು ಯುವ ಕೇಸರಿ ಯಶ್​ ಬಾಸ್​ ಅಭಿಮಾನಿಗಳ ಸಂಘದಿಂದ, ದೊಡ್ಡಬಳ್ಳಾಪುರದ ಸೌಂದರ್ಯ ಮಹಲ್​ ಚಿತ್ರಮಂದಿರದಲ್ಲಿ ತಾಲ್ಲೂಕಿನ ಎಲ್ಲಾ ಯಶ್​ ಅಭಿಮಾನಿಗಳಿಗೆ ಉಚಿತವಾಗಿ ಟೀಸರ್​ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಸಮಾರಂಭದಲ್ಲಿ ಗಣ್ಯವ್ಯಕ್ತಿಗಳಿಗೆ ಸನ್ಮಾನ ಮಾಡುವುದರ ಜತೆಗೆ ಯಶ್​ ಹುಟ್ಟುಹಬ್ಬದ ಪ್ರಯುಕ್ತ ಕೇಕ್​ ಕಟ್​ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಮಾಸ್ಕ್​ ಇಲ್ಲದೆ ಪ್ರವೇಶವಿಲ್ಲ ಮತ್ತು ಸಾಮಾಜಿಕ ಅಂತರ ಕಡ್ಡಾಯ ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

    ಇದನ್ನೂ ಓದಿ: ಪ್ರಶಾಂತ್ ನೀಲ್- ಪ್ರಭಾಸ್ ‘ಸಲಾರ್​’ ಸಿನಿಮಾಕ್ಕೆ ಬಾಲಿವುಡ್​ನ ಈ ಖ್ಯಾತ ನಟ ವಿಲನ್​!?

    ಇದಲ್ಲದೆ ಹಲವು ಊರುಗಳಲ್ಲಿ ‘ಕೆಜಿಎಫ್​ 2’ ಚಿತ್ರದ ಟೀಸರ್ ಪ್ರದರ್ಶನದ ಜತೆಗೆ, ಯಶ್​ ಹುಟ್ಟುಹಬ್ಬದ ಸಂಬಂಧ ಸಿಹಿ ಹಂಚಲಾಗುತ್ತಿದೆ.

    ದಿಢೀರ್​ ಸುದ್ದಿಗೋಷ್ಠಿ ಕರೆದು ತೀವ್ರ ಕುತೂಹಲ ಮೂಡಿಸಿದ ನಟಿ ರಾಧಿಕಾ ಕುಮಾರಸ್ವಾಮಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts