More

    ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

    ಕೊಳ್ಳೇಗಾಲ: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸೋಮವಾರ ಪಟ್ಟಣದ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ದೇವಾಲಯದ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ, ಗರುಡಕಂಬ ಆಂಜನೇಯ, ಗಣಪತಿ ಮೂರ್ತಿಗೆ 25 ಕೆ.ಜಿ. ಬೆಣ್ಣೆಯಿಂದ ಅಲಂಕೃತಗೊಳಿಸಲಾಗಿತ್ತು.

    ಸೌಮ್ಯಾ ನಾಯಕಿ ದೇವಿ ಮೂರ್ತಿಗೆ ವಿವಿಧ ಹೂವುಗಳಿಂದ ಶೃಂಗರಿಸಲಾಗಿತ್ತು. ಬೆಳಗ್ಗೆ 4.30ರಿಂದಲೇ ವಿವಿಧ ಪೂಜಾ ಕೈಂಕರ್ಯ ಆರಂಭವಾದವು. ಸುಪ್ರಭಾತ ಸೇವೆ, ಅಭಿಷೇಕ, ಬೆಣ್ಣೆ ಅಲಂಕಾರ, ಮಹಾ ಮಂಗಳಾರತಿ ನೆರವೇರಿಸಲಾಯಿತು. ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿ ಸಿಹಿ ಪೊಂಗಲ್, ತೀರ್ಥಪ್ರಸಾದ ವಿತರಿಸಲಾಯಿತು.

    ಸಂಜೆ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಮಕರ ಮಾಸ ಪ್ರಾರಂಭವಾದ ದಿನದ ಅಂಗವಾಗಿ ದೇವಾಲಯದ ಉತ್ತರದ್ವಾರ (ಸ್ವರ್ಗದ ಬಾಗಿಲು)ತೆರೆಯಲಾಯಿತು. ನಂತರ ಮೆರವಣಿಗೆಗೆ ಸಿದ್ದಗೊಳಿಸಿದ್ದ ಉತ್ಸವ ಮೂರ್ತಿಯನ್ನು ಉತ್ತರ ದ್ವಾರದಿಂದ ಹೊರತರಲಾಯಿತು. ಬಳಿಕ ರಾಜಬೀದಿಗಳಲ್ಲಿ ಉತ್ಸವ ಮೂರ್ತಿಯನ್ನು ಮೆರವಣಿಗೆ ನಡೆಸಲಾಯಿತು. ಭಕ್ತರು ಮೆರವಣಿಗೆಯಲ್ಲಿ ಭಕ್ತಿಯಿಂದ ಪಾಲ್ಗೊಂಡರು.
    ಪ್ರಧಾನ ಅರ್ಚಕ ಶೇಷಾದ್ರಿ ಭಟ್ ಹಾಗೂ ಸುದರ್ಶನ್ ಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿದವು. ದೇವಾಲಯ ಆಡ ಳಿತ ಮಂಡಳಿಯ ಸದಸ್ಯರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts