More

    ಮಳೆಗಾಗಿ ಬಸವೇಶ್ವರನ ಮೊರೆ ಹೋದ ಮುಡಿಗುಂಡ ನಿವಾಸಿಗಳು!

    ಕೊಳ್ಳೇಗಾಲ: ಮಳೆ ಕೊರತೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ನೀರಿನ ಅಭಾವ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಪಟ್ಟಣದ ಮುಡಿಗುಂಡದ ಮಠ ಬೀದಿ ನಿವಾಸಿಗಳು ಮಂಗಳವಾರ ಬಸವೇಶ್ವರನ ಮೊರೆ ಹೋಗಿದ್ದಾರೆ.

    ಗ್ರಾಮದ ಮಠದ ಬೀದಿಯ ಮಕ್ಕಳು ಸೊಂಟಕ್ಕೆ ಬೇವಿನ ಎಲೆಗಳನ್ನು ಕಟ್ಟಿಕೊಂಡು, ತಲೆಯ ಮೇಲೆ ಬಸವ ದೇವರನ್ನು ಹೊತ್ತು ಉಯ್ಯೋ ಉಯ್ಯೋ ಮಳೆರಾಯ ಎಂದು ಕೂಗಿದರು. ಈ ವೇಳೆ ನಿವಾಸಿಗಳು ಮನೆಯಲ್ಲಿದ್ದ ನೀರನ್ನು ಮಕ್ಕಳು ತಲೆ ಮೇಲೆ ಹಾಕಿ ಬಸವೇಶ್ವರನಿಗೆ ಕೈ ಮುಗಿದು ಮಳೆ ಬರಲೆಂದು ಪ್ರಾರ್ಥಿಸಿದರು.

    ದಿನ ಕಳೆದಂತೆ ನೀರಿನ ಅಭಾವ ಹೆಚ್ಚಾಗುತ್ತಿದೆ. ತಾಲೂಕಿನಾದ್ಯಂತ ಸಂಕಷ್ಟ ಎದುರಾಗಿದೆ. ಅಂತರ್ಜಲ ಸೇರಿದಂತೆ ಜಲ ಮೂಲಗಳು ಬತ್ತಿ ಹೋಗಿದ್ದು, ವ್ಯವಸಾಯಕ್ಕೆ ಕಷ್ಟವಾಗಿದೆ. ಹೀಗಾಗಿ ಮಳೆ ಬೀಳಲೆಂದು ಪ್ರಾರ್ಥಿಸಲಾಗುತ್ತಿದೆ ಎಂದು ಗ್ರಾಮಸ್ಥ ಪಾಪಣ್ಣ ತಿಳಿಸಿದರು.

    ಮಠದ ಬೀದಿಯ ಪ್ರತಿ ಮನೆಯವರು ಬಸವನಿಗೆ ನೀರು ಹಾಕುತ್ತಿದ್ದಾರೆ. ಜನರಿಂದ ಕಾಣಿಕೆ ಹಾಗೂ ದವಸ-ಧಾನ್ಯಗಳನ್ನು ಶೇಖರಣೆ ಮಾಡಲಾಗುತ್ತಿದೆ. ಬಸವನಿಗೆ ನೀರು ಹಾಕುವ ಕಾರ್ಯ ಮುಗಿದ ಮೇಲೆ ಸಮೀಪದ ಮದುಮಲೆ ಗುಡ್ಡದ ಮುನೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಅಡುಗೆ ತಯಾರಿಸಿ ದೇವರಿಗೆ ಎಡೆಯಿಟ್ಟು ಪೂಜೆ ಸಲ್ಲಿಸಲಾಗುವುದು ಎಂದು ಶ್ರೀ ಬಸವೇಶ್ವರ ದೇವಾಲಯದ ಅರ್ಚಕ ಬಸವರಾಜುತಿಳಿಸಿದರು.

    ಮುಡಿಗುಂಡ ಗೌಡರಾದ ಮಹಾದೇವಪ್ಪ, ಭೀಮಪ್ಪ, ಬಸವೇಶ್ಚರ ದೇವಾ ಲಯದ ಅರ್ಚಕ ಬಸವರಾಜು, ಪಾಪಣ್ಣ, ಕಾಂತರಾಜು, ಮಹೇಂದ್ರ, ನಾಗು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts