More

    ಕ್ರೀಡಾ ಸಾಹಿತ್ಯಕ್ಕೆ ಸ್ಪರ್ಶ ಕಾರ್ಯ ಶ್ಲಾಘನೀಯ

    ಕೊಳ್ಳೇಗಾಲ: ಕ್ರೀಡಾ ಸಾಹಿತ್ಯ ಬಹಳ ವಿರಳವಾಗಿದ್ದು, ಇದಕ್ಕೆ ಸಾಹಿತ್ಯ ಸ್ಪರ್ಶ ನೀಡುವ ಮೂಲಕ ವಿಭಿನ್ನ ರೀತಿಯಲ್ಲಿ ಶೋಧನೆ ಮಾಡಿ ಕೃತಿಗಳನ್ನು ಹೊರ ತಂದಿರುವುದು ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ ತಿಳಿಸಿದರು.

    ಪಟ್ಟಣದ ರೋಟರಿ ಕ್ಲಬ್‌ನಲ್ಲಿ ಸಾಹಿತ್ಯ ಮಿತ್ರಕೂಟ ವತಿಯಿಂದ ಮಂಗಳವಾರ ಆಯೋಜಿಸಿದ್ದ ಜಿ.ಪಳನಿಸ್ವಾಮಿ ಜಾಗೇರಿ ಅವರ ಹತ್ತನೇ ಕೃತಿ ಕ್ರೀಡಾಲೋಕ ಗಾದೆಲೋಕ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಹಿತಿ ಜಿ.ಪಳನಿಸ್ವಾಮಿ ಅವರು 10 ಕೃತಿಗಳನ್ನು ಬರೆದಿರುವುದು ಮೆಚ್ಚುವಂತಹ ವಿಷಯ. ಅದರಲ್ಲೂ ಕ್ರೀಡಾಲೋಕ ಗಾದೆಲೋಕ ಎಂಬ ಕೃತಿ ಹೊರತಂದಿರುವುದು ಕ್ರೀಡಾ ಕ್ಷೇತ್ರಕ್ಕೆ ಉಪಯುಕ್ತವಾಗಲಿದೆ ಎಂದು ಹೇಳಿದರು.

    ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ.ಶಂಕನಪುರ ಮಹದೇವ, ದೈಹಿಕ ಶಿಕ್ಷಣ ಶೋಧನಾ ಸಾಹಿತ್ಯದಲ್ಲಿ ಅಪರೂಪದ ಪ್ರಥಮ ಕೃತಿ ಕ್ರೀಡಾಲೋಕ ಗಾದೆಲೋಕ. ಇದರ ರಚನೆಯಲ್ಲಿ ಜಿ.ಪಳನಿಸ್ವಾಮಿ ಜಾಗೇರಿ ಅವರ ಪ್ರಯತ್ನ ಶ್ಲಾಘನೀಯ ಎಂದರು.

    ರಚನಾಕಾರರಿಂದ ಯಾವುದಾದರೂ ಸಾಹಿತ್ಯ ಹೊರಬರಬೇಕೆಂದರೆ ಅವರೊಳಗೆ ಸಂವೇದನೆ ಇರುತ್ತದೆ. ಅದರ ಫಲವೇ ಅದ್ಭುತವಾದ ಸಾಹಿತ್ಯ. ಅಂತೆಯೇ, ಜಿ.ಪಳನಿಸ್ವಾಮಿ ಜಾಗೇರಿ ಅವರನ್ನು ಸಂವೇದನಾಶೀಲತೆ ಕಾಡಿದ್ದು, ಕ್ರೀಡೆ ಕುರಿತು ಸಾವಿರಾರು ಗಾದೆ ಹಾಗೂ ನೀತಿ ಒಳಗೊಂಡ ಉತ್ತಮ ಕೃತಿಯನ್ನು ರಚಿಸಿದ್ದಾರೆ. ಇದನ್ನು ಸಾರ್ವಜನಿಕರು, ಶಿಕ್ಷಕರು ಓದಬೇಕೆಂದು ಎಂದು ಹೇಳಿದರು.

    ಸಾಹಿತ್ಯ ಮಿತ್ರ ಕೂಟದ ಸ್ಥಾಪನಾ ಅಧ್ಯಕ್ಷ ಪ್ರೊ.ಡಿ.ದೊಡ್ಡಲಿಂಗೇಗೌಡ ಮಾತನಾಡಿ, ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ಸಾಹಿತ್ಯ ಬರೆಯುವುದು ಸವಾಲಿನ ವಿಷಯ. ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಪಳಗಿರುವ ಜಿ.ಪಳನಿಸ್ವಾಮಿ ಅವರು ಆ ಸವಾಲನ್ನು ಮೆಟ್ಟಿ ನಿಲ್ಲುವ ಕೆಲಸ ಮಾಡಿ ದ್ದಾರೆ ಎಂದರು.

    ಬಿಆರ್‌ಸಿ ಮಹದೇವ ಕುಮಾರ್, ರೋಟರಿ ಕ್ಲಬ್ ಅಧ್ಯಕ್ಷ ನಂದೀಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್.ನಾಗರಾಜು, ಕೃತಿ ಬರಹಗಾರ ಪಳನಿಸ್ವಾಮಿ, ಶಿಕ್ಷಕ ನಾಗಮಲ್ಲೇಶ್, ಸಾಹಿತಿಗಳಾದ ಬಾಳಗುಣಸೆ ಮಂಜುನಾಥ್, ಇಂದ್ವಾಡಿ ಶಿವಣ್ಣ, ಸಾಹಿತ್ಯ ಮಿತ್ರಕೂಟದ ನಿರ್ದೇಶಕ ಚೆನ್ನಮಾದೇಗೌಡ, ಮಾದೇಶ್, ಗೋಪಾಲ್, ಮಧುವನ ಅರಸ್ ಮತ್ತಿತರಿದ್ದರು.

    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts