More

    ಬಿತ್ತಿದ್ದ ಬೀಜ ಕಾಡು ಹಂದಿಗಳ ಪಾಲು

    ಹರಪನಹಳ್ಳಿ: ತಾಲೂಕಿನ ವ್ಯಾಸನತಾಂಡಾದ ಅಡಕೆ ಹೊಲದಲ್ಲಿ ಬಿತ್ತಿದ್ದ ಮೆಕ್ಕೆಜೋಳ ಬೀಜವನ್ನು ಕಾಡು ಹಂದಿಗಳು ತಿಂದುಹಾಕಿವೆ.

    ಗ್ರಾಮದ ಯಮುನಾನಾಯ್ಕ ಅವರು 2 ಎಕರೆ ಜಮೀನಿನಲ್ಲಿ ಕಳೆದ ವಾರ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ವಾರದಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೀಜ ಮೊಳಕೆಯೊಡೆದು ಮೇಲೆದ್ದಿತ್ತು, ಮಳೆಗಾಲವಾದ್ದರಿಂದ ರಾತ್ರಿ ಹೊತ್ತು ರೈತರು ಹೊಲಕ್ಕೆ ಹೋಗುವುದು ಕಡಿಮೆ.

    ಈ ಸಮಯದಲ್ಲಿ ಕಾಡು ಹಂದಿಗಳು ನುಗ್ಗಿ ಬೀಜಗಳನ್ನು ಸಂಪೂರ್ಣ ತಿಂದು ಹೊಲ ಹಾಳು ಮಾಡಿವೆ.
    ಸಾಲ ಮಾಡಿ ಗೊಬ್ಬರ, ಬೀಜ ಖರೀದಿಸಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೆ.

    ಆದರೆ ಕಾಡು ಹಂದಿಗಳು ರಾತ್ರಿ ವೇಳೆ ಹೊಲಕ್ಕೆ ನುಗ್ಗಿ ತಿಂದು ನಾಶ ಮಾಡಿವೆ. ಈ ಬಗ್ಗೆ ತಾಲೂಕು ಆಡಳಿತ ಸೂಕ್ತ ಪರಿಹಾರ ನೀಡಬೇಕೆಂದು ರೈತ ಯಮುನಾನಾಯ್ಕ ಆಗ್ರಹಿಸಿದರು.

    ಇದನ್ನೂ ಓದಿ:https://www.vijayavani.net/disabled-department-director-transfer-cancellation

    ತಾಲೂಕು ವಲಯ ಅರಣ್ಯಾಧಿಕಾರಿ ಮಲ್ಲಪ್ಪ ಪ್ರತಿಕ್ರಿಯಿಸಿ, ಹಂದಿಗಳ ಹಾವಳಿ ತಡೆಗೆ ರೈತರು ಜಮೀನುಗಳಲ್ಲಿ ಮುಳ್ಳುಬೇಲಿ ಹಾಕಬೇಕು.ತಂತಿಬೇಲಿ ನಿರ್ಮಾಣ ಮಾಡಿಕೊಳ್ಳಲು ರೈತರಿಗೆ ಸರ್ಕಾರದಿಂದ ಶೇ.50 ಸಬ್ಸಿಡಿ ಇದೆ, ವ್ಯಾಸನತಾಂಡಾದ ರೈತರು ಇಲಾಖೆಗೆ ಅರ್ಜಿ ಸಲ್ಲಿಸಿದಲ್ಲಿ, ಪರಿಹಾರ ಒದಗಿಸಲು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts