More

    ದಕ್ಷಿಣ ರೈಲ್ವೆಯಲ್ಲಿ ಅಪ್ರೆಂಟಿಸ್ ಹುದ್ದೆ; ಯಾರಿಗೆಲ್ಲಾ ಅವಕಾಶ?

    ಬೆಂಗಳೂರು: ದಕ್ಷಿಣ ರೈಲ್ವೆಯು (ಎಸ್‌ಆರ್) ಭಾರತೀಯ ರೈಲ್ವೆಯ ಹದಿನೆಂಟು ವಲಯಗಳಲ್ಲಿ ಒಂದಾಗಿದ್ದು, ಚೆನ್ನೈನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಮದ್ರಾಸ್ ರೈಲ್ವೆ, ದಕ್ಷಿಣ ಭಾರತೀಯ ರೈಲ್ವೆ ಮತ್ತು ಮೈಸೂರು ರಾಜ್ಯ ರೈಲ್ವೆಗಳನ್ನು ವಿಲೀನಗೊಳಿಸುವ ಮೂಲಕ 1951 ಏ.14ರಂದು ರಚಿಸಲಾಯಿತು. ಎಸ್‌ಆರ್ 5,801 ಕಿಮೀ ಮಾರ್ಗ ಮತ್ತು 727 ರೈಲು ನಿಲ್ದಾಣಗಳನ್ನು ನಿರ್ವಹಿಸುತ್ತದೆ. ಪ್ರಸ್ತುತ ಭಾರತದಾದ್ಯಂತ ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ಸಂಬಂಧಿಸಿದಂತೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು.

    ಒಟ್ಟು ಹುದ್ದೆಗಳು-2860  

    ಹುದ್ದೆಯ ವಿವರ 
    ಅಪ್ರೆಂಟಿಸ್

    ವಿದ್ಯಾರ್ಹತೆ 
    ಆಸಕ್ತ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಶೈಕ್ಷಣಿಕ ಮಂಡಳಿಯಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿ ಅಥವಾ ಐಟಿಐ ಉತ್ತೀರ್ಣರಾಗಿರಬೇಕು.

    ಅಧಿಸೂಚನೆ PDF ಇಲ್ಲಿ ಪರಿಶೀಲಿಸಿ   

    ವೇತನ
    ಕೌಶಲ್ಯ ಅಭಿವೃದ್ಧಿ ಸಚಿವಾಲಯದ ನಿರ್ದೇಶನಗಳ ಪ್ರಕಾರ, 2019 ನ.26ರಂದು ರೈಲ್ವೆ ಮಂಡಳಿಯ ಸುತ್ತೋಲೆ ವಿವರಿಸಿರುವ ಮಾರ್ಗಸೂಚಿಗಳ ಆಧಾರದ ಮೇಲೆ ಹುದ್ದೆಗಳಿಗೆ ಅನುಗುಣವಾಗಿ ಸ್ಟೈಫಂಡ್ ವಿತರಿಸಲಾಗುತ್ತದೆ.

    ವಯೋಮಿತಿ 
    ಅಭ್ಯರ್ಥಿಗಳು ಫ್ರೆಶರ್ ಆಗಿದ್ದರೆ ಕನಿಷ್ಠ 15 ವರ್ಷ ವಯಸ್ಸಿನವರಾಗಿರಬೇಕು. ಗರಿಷ್ಠ 22 ವರ್ಷ ಮೀರಿರಬಾರದು. ಈಗಾಗಲೇ ಐಟಿಐ ಪೂರ್ಣಗೊಳಿಸಿದವರಿಗೆ ಗರಿಷ್ಠ ವಯೋಮಿತಿ 24 ವರ್ಷ ಆಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಕಲ್ಪಿಸಲಾಗಿದೆ.

    ಅರ್ಜಿ ಸಲ್ಲಿಸುವ ವಿಧಾನ 
    ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿಕೊಟ್ಟು ಅಲ್ಲಿ ಒದಗಿಸಲಾದ ಅಧಿಸೂಚನೆಯನ್ನು ಸರಿಯಾಗಿ ಪರಿಶೀಲಿಸಬೇಕು. ನಂತರ ನೋಂದಣಿ ಮಾಡಿಕೊಂಡು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬೇಕು.

    ಅರ್ಜಿ ಶುಲ್ಕ
    ಸಾಮಾನ್ಯ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಎಸ್‌ಸಿ, ಎಸ್‌ಟಿ, ಅಂಗವಿಕಲ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ವಿನಾಯಿತಿ ನೀಡಲಾಗಿದೆ.

    ಆಯ್ಕೆ ಪ್ರಕ್ರಿಯೆ
    ಮೆರಿಟ್ ಲಿಸ್ಟ್, ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

    ಪ್ರಮುಖ ಮಾಹಿತಿ
    ಫಿಟ್ಟರ್ ವಿಭಾಗಕ್ಕೆ ಆಯ್ಕೆಯಾದವರಿಗೆ ಎರಡು ವರ್ಷ ತರಬೇತಿ ನಿಗದಿಪಡಿಸಿದ್ದು, ಉಳಿದ ವಿಭಾಗಗಳಲ್ಲಿ ಸೇವೆ ಸಲ್ಲಿಸುವವರೆಗೆ ಒಂದು ತರಬೇತಿ ನೀಡಲಾಗುತ್ತದೆ. ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಹುದ್ದೆಯು ಕಾಯಂ ಆಗಿರುವುದಿಲ್ಲ. ಹುದ್ದೆಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ : 28-02-2024

    ಹೆಚ್ಚಿನ ಮಾಹಿತಿಗಾಗಿ: sr.indianrailways.gov.in  

    Jobs: ಆರ್‌ಪಿಎಫ್​​​​ನಲ್ಲಿ 2,250 ಕಾನ್‌ಸ್ಟೆಬಲ್, ಎಸ್‌ಐ ನೇಮಕಾತಿ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts