More

    ಐಸಿಸಿ ಪುರುಷರ ಕ್ರಿಕೆಟ್​ ಸಮಿತಿ ಅಧ್ಯಕ್ಷರಾಗಿ ಸೌರವ್​ ಗಂಗೂಲಿ ನೇಮಕ

    ನವದೆಹಲಿ: ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಹಾಗೂ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಸೌರವ್​ ಗಂಗೂಲಿ ಅವರನ್ನು ಇಂಟರ್​ನಾಷನಲ್​ ಕ್ರಿಕೆಟ್​ ಕೌನ್ಸಿಲ್​(ಐಸಿಸಿ)ನ ಮೆನ್ಸ್​ ಕ್ರಿಕೆಟ್​ ಕಮಿಟಿ(ಪುರುಷರ ಕ್ರಿಕೆಟ್​ ಸಮಿತಿ)ಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕಳೆದ 9 ವರ್ಷಗಳಿಂದ ಅನಿಲ್​ ಕುಂಬ್ಳೆ ವಹಿಸಿಕೊಂಡಿದ್ದ ಹುದ್ದೆಯ ಜವಾಬ್ದಾರಿಯನ್ನು ಇದೀಗ ಗಂಗೂಲಿ ನಿರ್ವಹಿಸಲಿದ್ದಾರೆ ಎಂದು ಐಸಿಸಿ ಘೋಷಿಸಿದೆ.

    “ಅನಿಲ್​ ಕುಂಬ್ಳೆ ಅವರು ಮೂರು ವರ್ಷ ಅವಧಿಯ ಗರಿಷ್ಠ ಮೂರು ಟೆನ್ಯೂರ್​ಗಳನ್ನು ಮುಗಿಸಿ ಆ ಸ್ಥಾನದಿಂದ ಕೆಳಗಿಳಿದಿದ್ದಾರೆ. ಆ ಹುದ್ದೆಗೆ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಅವರನ್ನು ನೇಮಿಸಲಾಗಿದೆ” ಐಸಿಸಿ ಹೇಳಿಕೆ ನೀಡಿದೆ. ಒಂದು ಕಾಲದ ಅದ್ವಿತೀಯ ಬ್ಯಾಟ್ಸ್​ಮನ್​ ಆದ ಗಂಗೂಲಿ, ಬಂಗಾಳ ಕ್ರಿಕೆಟ್​ ಅಸೋಸಿಯೇಷನ್​​ನ ಅಧ್ಯಕ್ಷರಾಗಿ 2015 ರಿಂದ 2019ರವರೆಗೆ ಕಾರ್ಯನಿರ್ವಹಿಸಿದ್ದರು. ಅಕ್ಟೋಬರ್​ 2019 ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.

    ಇದನ್ನೂ ಓದಿ: ಹಿಂದು ಎದ್ದರೆ ಕೇಸರಿ, ಹಿಂದು ಎದ್ದರೆ ವ್ಯಾಘ್ರ! ಸಹನೆಯನ್ನ ತಪ್ಪು ತಿಳೀಬೇಡಿ ಎಂದ ಬಿಜೆಪಿ ನಾಯಕ

    ಐಸಿಸಿ ಚೇರ್​ಮನ್​ ಗ್ರೆಗ್​ ಬಾರ್ಕ್​ಲೇ, ಕುಂಬ್ಳೆ ಅವರ ಕಳೆದ ಒಂಭತ್ತು ವರ್ಷಗಳ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದ್ದು, ನೂತನ ಸ್ಥಾನಕ್ಕೆ ಗಂಗೂಲಿಗೆ ಸ್ವಾಗತ ಕೋರಿದ್ದಾರೆ. “ಅನಿಲ್​ ಕುಂಬ್ಳೆ ಅವರು ಡಿಆರ್​ಎಸ್​ನ ಸಮರ್ಪಕ ಅನುಷ್ಠಾನದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್​ ಆಟಗಾರಿಕೆಯನ್ನು ಉತ್ತಮವಾಗಿಸುವಲ್ಲಿ ವಿಶಿಷ್ಟ ಪಾತ್ರ ವಹಿಸಿದ್ದಾರೆ” ಎಂದು ಬಾರ್ಕ್​ಲೇ ಹೇಳಿದ್ದಾರೆ. (ಏಜೆನ್ಸೀಸ್​)

    ಬಿಟ್​ಕಾಯಿನ್​ ಹಾವಲ್ಲ, ಕಾಂಗ್ರೆಸ್​ನವರು ಎರಡು ತಲೆಯ ಮಣ್ಣುಮುಕ್ಕ ಹಾವು: ರೇಣುಕಾಚಾರ್ಯ

    1947ರಲ್ಲಿ ಯಾವ ಯುದ್ಧ ನಡೆಯಿತು ಹೇಳಿದರೆ, ಪದ್ಮಶ್ರೀ ವಾಪಸ್​ ಕೊಡುವೆ ಎಂದ ಕಂಗನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts