More

    ಓಟಿಟಿಯಲ್ಲೇ ಬಿಡುಗಡೆಯಾಗುತ್ತಾ `ಸೂರ್ಯವಂಶಿ’ ಮತ್ತು `83′?

    ಆರು ತಿಂಗಳ ಹಿಂದೆಯೇ ಆ ಎರಡೂ ಚಿತ್ರಗಳು ಬಿಡುಗಡೆಯಾಬೇಕಿದ್ದವು. ಆದರೆ, ಕರೊನಾ ಮತ್ತು ಲಾಕ್‍ಡೌನ್‍ನಿಂದ ಈ ಎರಡೂ ಚಿತ್ರಗಳ ಬಿಡುಗಡೆ ಮುಂದಕ್ಕೆ ಹೋಗುತ್ತಲೇ ಇದೆ. ಇದೀಗ ಅಕ್ಷಯ್ ಕುಮಾರ್ ಅಭಿನಯದ `ಸೂರ್ಯವಂಶಿ’ ಮತ್ತು ರಣವೀರ್ ಸಿಂಗ್ ಅಭಿನಯದ `83′ ಚಿತ್ರಗಳು ಚಿತ್ರಮಂದಿರಗಳನ್ನು ಬಿಟ್ಟು ಓವರ್ ದಿ ಟಾಪ್‍ನಲ್ಲೇ (ಓಟಿಟಿ) ಬಿಡುಗಡೆಯಾಗಲಿದೆಯಾ?

    ಇದನ್ನೂ ಓದಿ: ಜ್ಯೋತಿಕಾ ಆಯ್ತು; ಈಗ ಸೂರ್ಯ ಸಿನಿಮಾ ಸಹ ಓಟಿಟಿಯಲ್ಲಿ …

    ಇಂಥದ್ದೊಂದು ಪ್ರಶ್ನೆ ಎಲ್ಲರನ್ನೂ ಕಾಡುವುದಕ್ಕೆ ಒಂದು ಕಾರಣವಿದೆ. ಅದೇನೆಂದರೆ, ಚಿತ್ರಮಂದಿರಗಳು ಬಂದ್ ಆಗಿ ಐದು ತಿಂಗಳಾಗಿವೆ. ಪುನಃ ಯಾವಾಗ ಪ್ರಾರಂಭವಾಗಬಹುದು ಎಂದು ಯಾರಿಗೂ ಗೊತ್ತಿಲ್ಲ. ಪ್ರಾರಂಭವಾದರೂ ಜನ ಬರುತ್ತಾರೋ, ಇಲ್ಲವೋ ಎಂದು ಹೇಳುವುದು ಕಷ್ಟ. ಹೀಗಿರುವಾಗ ಎಲ್ಲಾ ರೆಡಿ ಇರುವ ಸಿನಿಮಾಗಳನ್ನು ಇಟ್ಟುಕೊಂಡು ವೇಸ್ಟ್ ಮಾಡುವುದು ಯಾಕೆ, ಹೇಗೂ ಜನ ಹೊಸ ಚಿತ್ರಗಳನ್ನು ನೋಡದೆ ಕಂಗೆಟ್ಟಿರುವುದರಿಂದ, ಆ ಚಿತ್ರಗಳನ್ನು ಓಟಿಟಿಯಲ್ಲಿ ಬಿಡುಗಡೆ ಯಾಕೆ ಮಾಡಬಾರದು ಎಂಬ ಚರ್ಚೆ ಎರಡೂ ಚಿತ್ರತಂಡಗಳಲ್ಲಿ ಜೋರಾಗಿ ನಡೆಯುತ್ತಿದೆ.

    `ಸೂರ್ಯವಂಶಿ’ ಮತ್ತು `83′ ಚಿತ್ರಗಳ ಬಿಡುಗಡೆ ಈ ಹಿಂದೆಯೇ ಮಾಡಬಹುದಿತ್ತು. ಆದರೆ, ಎರಡೂ ಚಿತ್ರತಂಡಗಳು ಚಿತ್ರಗಳನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡಬೇಕು ಎಂದು ಕಾದು ಕುಳಿತಿವೆ. ಈಗಲೂ ಎರಡೂ ಚಿತ್ರಗಳು ದೀಪಾವಳಿ ಮತ್ತು ಕ್ರಿಸ್ಮಸ್ ವೇಳೆಗೆ ಬಿಡುಗಡೆಯಾಗುತ್ತವೆ ಎಂದು ಹೇಳಲಾಗುತ್ತಿದೆ. ಒಂದು ಪಕ್ಷ ಆಗಲೂ ಚಿತ್ರಮಂದಿರಗಳು ಓಪನ್ ಆಗದಿದ್ದರೆ ಏನು ಗತಿ? ಆಗ ಓಟಿಟಿಯಲ್ಲಿ ಬಿಡುಗಡೆ ಅನಿವಾರ್ಯ ರಿಲಯನ್ಸ್ ಎಂಟರ್‍ಟೈನ್‍ಮೆಂಟ್ ಸಿಇಓ ಶಿಬಾಶಿಶ್ ಸರ್ಕಾರ್ ಹೇಳಿದ್ದಾರೆ.

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, `ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕು ಎಂಬ ಕಾರಣಕ್ಕೆ ಇಷ್ಟು ದಿನಗಳ ಕಾಲ ಸುಮ್ಮನಿದ್ದೇವೆ. ಇನ್ನು ಸುಮ್ಮನೆ ಎಷ್ಟು ದಿನ ಅಂತಿರುವುದು? ಈ ಹಿನ್ನೆಲೆಯಲ್ಲಿ ಇನ್ನೂ ಸ್ವಲ್ಪ ದಿನಗಳ ಕಾಲ ಕಾದು ನೋಡಿ, ಅಷ್ಟರಲ್ಲಿ ಚಿತ್ರಮಂದಿರಗಳು ಪ್ರಾರಂಭವಾಗದಿದ್ದರೆ, ಆಗ ಅನಿವಾರ್ಯವಾಗಿ ಓಟಿಟಿಯಲ್ಲೇ ಚಿತ್ರವನ್ನು ಬಿಡುಗಡೆ ಮಾಡಬೇಕಾಗುತ್ತದೆ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಚಂದನ್ ಶೆಟ್ಟಿ ಕಂಠದಲ್ಲಿ ಹೊಸ `ಕೋಲು ಮಂಡೆ’ …

    ಈ ವಿಷಯವಾಗಿ ಅವರು ಇನ್ನು ಒಂದು ತಿಂಗಳು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದು, ಅಷ್ಟರಲ್ಲಿ ಏನಾದರೂ ಬೆಳವಣಿಗೆ ಆಗುತ್ತದಾ ಎಂದು ಕಾದು ನೋಡಲಿದ್ದಾರಂತೆ. ಅಷ್ಟರಲ್ಲಿ ಚಿತ್ರಮಂದಿರಗಳು ಬಿಡುಗಡೆಯಾಗದಿದ್ದರೆ, ಆಗ ಎರಡೂ ಚಿತ್ರಗಳು ಓಟಿಟಿ ಪಾಲಾಗಲಿವೆ.

    ಗಣಪತಿ ಹಬ್ಬಕ್ಕೆ ಚಿತ್ರತಂಡಗಳಿಂದ ಶುಭಾಶಯ ಪೋಸ್ಟರ್​

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts