More

    ಸೋನು ಸೂದ್​ ನಿಜಕ್ಕೂ ನೀವು ದೇವ್ರಾಗ್ಬಿಟ್ರಿ; ತರಕಾರಿ ಮಾರುತ್ತಿದ್ದ ಯುವತಿಗೆ ಕೊಟ್ರು ಬಿಗ್​ ಆಫರ್​..

    ಸೋನು ಸೂದ್​ ಕಳೆದ ನಾಲ್ಕು ತಿಂಗಳಿಂದ ಕರೊನಾ ಹಾವಳಿ ನಡುವೆಯೂ ಫೀಲ್ಡಿನಲ್ಲಿ ಇಳಿದು ಕೆಲಸ ಮಾಡುತ್ತಿದ್ದಾರೆ. ಕೆಲಸ ಇಲ್ಲದವರಿಗೆ ಕೆಲಸ ನೀಡುತ್ತಿದ್ದಾರೆ. ಎತ್ತುಗಳಿಲ್ಲದ ರೈತಾಪಿ ಕುಟುಂಬಕ್ಕೆ ಟ್ರ್ಯಾಕ್ಟರ್ ನೀಡಿದ್ದಾರೆ. ಎಷ್ಟೋ ನಿರ್ಗತಿಕರನ್ನು ಅವರವರ ಊರು ತಲುಪಿಸಿದ್ದಾರೆ. ರೀಲ್​ನಲ್ಲಿ ಖಳನಾಯಕನಾಗಿರುವ ಸೋನು ಸೂದ್​, ರಿಯಲ್ ಲೈಫ್​ನಲ್ಲಿ ಹೀರೋ ಆಗಿ ಕಾಣಿಸುತ್ತಿದ್ದಾರೆ. ಅವರು ಮಾಡುತ್ತಿರುವ ಪ್ರತಿ ಕಾರ್ಯವನ್ನು ಇಡೀ ದೇಶದ ಜನ ಶ್ಲಾಘಿಸುತ್ತಿದ್ದಾರೆ. ಇದೀಗ ಇದೇ ಸೋನು ಮತ್ತೊಂದು ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.

    ಇದನ್ನೂ ಓದಿ: ತಾವೇ ಎತ್ತುಗಳಾಗಿ ಯುವತಿಯರ ಉಳುಮೆ; ಸೋನು ಸೂದ್​ ಕಡೆಯಿಂದ ಬಂತು ವಿಶೇಷ ಉಡುಗೊರೆ!

    ಹೌದು, ಇತ್ತೀಚೆಗಷ್ಟೇ ಆಂಧ್ರದ ರೈತಾಪಿ ಕುಟುಂಬಕ್ಕೆ ಟ್ರ್ಯಾಕ್ಟರ್​ ಕೊಡಿಸಿ ಸುದ್ದಿಯಾಗಿದ್ದ ಸೋನು, ಇದೀಗ ಅದೇ ಆಂಧ್ರದ ಯುವತಿಯ ಸಹಾಯಕ್ಕೆ ನಿಂತಿದ್ದಾರೆ. ಪ್ರತಿಷ್ಠಿತ ಕಂಪನಿಯೊಂದರಲ್ಲಿ ಜಾಬ್​ ಗಿಟ್ಟಿಸಿಕೊಂಡಿದ್ದ ಶಾರದಾ, ಲಾಕ್​ಡೌನ್​ ನಷ್ಟದ ಹಿನ್ನೆಲೆಯಲ್ಲಿ ಅವರನ್ನು ಕೆಲಸದಿಂದ ಕೈ ಬಿಡಲಾಗಿತ್ತು. ಬಳಿಕ ಕುಟುಂಬ ನಿರ್ವಹಣೆಗಾಗಿ ಕಳೆದ ಮೂರು ತಿಂಗಳಿಂದ ರಸ್ತೆಯಲ್ಲಿ ತರಕಾರಿ ಮಾರುತ್ತಿದ್ದಾರೆ. ಅವರ ಆ ಸುದ್ದಿ ಎಲ್ಲೆಡೆ ಹರಿದಾಡಿದ್ದು, ಸೋನು ಸೂದ್​ ಗಮನಕ್ಕೂ ಬಂದಿತ್ತು.

    ಇದನ್ನೂ ಓದಿ: VIDEO: ಪವರ್​ಸ್ಟಾರ್ ಪುನೀತ್​ ರಾಜಕುಮಾರ್ ಕಿಲ್ಲಿಂಗ್​ ವರ್ಕೌಟ್​ ಹೇಗಿದೆ ನೋಡಿ…

    ಅಷ್ಟೇ ಮುಂದಾಗಿದ್ದೇ ಬೇರೆ! ಹೌದು, ಶಾರದಾ ಅವರ ಪರಿಸ್ಥಿತಿ ಅರಿತ ಸೋನು ತಕ್ಷಣ ಅವರನ್ನು ಸಂಪರ್ಕಿಸುವಂತೆ ಅವರ ತಂಡಕ್ಕೆ ಹೇಳಿದ್ದರು. ಇದೀಗ ಶಾರದಾ ಸಂದರ್ಶನ ಮುಗಿಸಿದ್ದು, ಜಾಬ್​ ಲೆಟರ್​ ಸಹ ಪಡೆದುಕೊಂಡಿದ್ದಾರೆ. ಈ ವಿಚಾರವನ್ನು ಟ್ವಿಟರ್ ಮೂಲಕ ಸ್ವತಃ ಸೋನು ಶೇರ್​ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇತ್ತೀಚೆಗಷ್ಟೇ ಕೆಲಸ ನೀಡುವ ಉದ್ದೇಶದಿಂದ ಪ್ರವಾಸಿ ರೋಜ್​ಗಾರ್ ಸಂಸ್ಥೆ ಸ್ಥಾಪಿಸಿರುವ ಸೋನು, ಇದೀಗ ಅದರ ಮೂಲಕವೇ ಶಾರದಾಗೆ ಕೆಲಸ ನೀಡಿದ್ದಾರೆ. (ಏಜೆನ್ಸೀಸ್​)

    PHOTOS: ಟ್ರೆಂಡಿಂಗ್​ನಲ್ಲಿದೆ ಬ್ಲ್ಯಾಕ್​ ಆ್ಯಂಡ್​ ವೈಟ್ ಚಾಲೆಂಜ್​; ಸ್ಯಾಂಡಲ್​ವುಡ್​ ನಟಿಯರೂ ಮಿಂಚಿಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts