More

    ಕಾಂಗ್ರೆಸ್​ ಅಧ್ಯಕ್ಷನ ಪಟ್ಟ ಯಾರಿಗೆ..? ನಾಳೆಯಿಂದ ಕಾಂಗ್ರೆಸ್​ ಹೊಣೆ ಯಾರದ್ದು? ಇಲ್ಲಿದೆ ಮಾಹಿತಿ…

    ನವದೆಹಲಿ: ರಾಹುಲ್​ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಮಧ್ಯಂತರ ಅಧ್ಯಕ್ಷೆಯಾಗಿ, ಜವಾಬ್ದಾರಿ ಹೊತ್ತಿದ್ದ ಸೋನಿಯಾ ಗಾಂಧಿಯವರ ಅವಧಿ ನಾಳೆ (ಆಗಸ್ಟ್​ 10) ಅಂತ್ಯವಾಗಲಿದ್ದು, ಈಗಾಗಲೇ ಕುತೂಹಲ ಶುರುವಾಗಿದೆ.

    ಸೋನಿಯಾ ಗಾಂಧಿಯವರ ಅವಧಿ ವಿಸ್ತರಣೆಯಾಗುತ್ತದೆಯಾ? ಅಥವಾ ಹೊಸಬರು ಅಧ್ಯಕ್ಷರಾಗುತ್ತಾರಾ? ರಾಹುಲ್​ ಗಾಂಧಿಯವರೇನಾದರೂ ಮೌನವಾಗಿದ್ದುಕೊಂಡೇ ಮನಸು ಬದಲಿಸಿದರಾ? ಎಂಬಿತ್ಯಾದಿ ಪ್ರಶ್ನೆಗಳೂ ಎದ್ದಿವೆ.

    ಇದೀಗ ಎಲ್ಲ ಅನುಮಾನಗಳಿಗೂ ಕಾಂಗ್ರೆಸ್ ತೆರೆ ಎಳೆದಿದ್ದು, ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಸೋನಿಯಾ ಗಾಂಧಿಯವರೇ ಅಧ್ಯಕ್ಷೆಯಾಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದೆ.

    ಪಕ್ಷಕ್ಕೆ ಇನ್ನೂ ಪೂರ್ಣಾವಧಿ ಅಧ್ಯಕ್ಷರ ಆಯ್ಕೆ ಆಗಲಿಲ್ಲ. ಹಾಗಾಗಿ ಸೋನಿಯಾ ಗಾಂಧಿಯವರ ಅವಧಿಯನ್ನು ವಿಸ್ತರಿಸುವುದು ತಾಂತ್ರಿಕ ಅನಿವಾರ್ಯತೆಯಾಗಿದೆ ಎಂದು ಕಾಂಗ್ರೆಸ್ ಕಾರ್ಯಕಾರಿ ತಿಳಿಸಿದೆ. ಇದನ್ನೂ ಓದಿ: ರಾಮನಿಗಾಗಿ ಹಿಂದೂ-ಮುಸ್ಲಿಮರಿಂದ ತಯಾರಾಗ್ತಿದೆ 2,100 ಕೆ.ಜಿಯ ಐತಿಹಾಸಿಕ ಗಿಫ್ಟ್‌

    ಸೋನಿಯಾ ಗಾಂಧಿಯವರು ಮಧ್ಯಂತರ ಅವಧಿ ಅಧ್ಯಕ್ಷೆಯಾಗಿ ನೇಮಕ ಆಗುತ್ತಿದ್ದಂತೆ ಮಹಾರಾಷ್ಟ್ರ, ಹರಿಯಾಣ ಚುನಾವಣೆಗಳು ಎದುರಾದವು. ಅವು ಮುಗಿಯುತ್ತಿದ್ದಂತೆ ಕೊವಿಡ್​-19, ಲಾಕ್​ಡೌನ್ ಶುರುವಾಯಿತು. ಇದೆಲ್ಲದರ ಮಧ್ಯೆ ಅಧ್ಯಕ್ಷರ ಆಯ್ಕೆಗೆ ಸಮಯ ಸಿಗಲಿಲ್ಲ ಎಂದು ಪಕ್ಷ ಕಾರ್ಯಕಾರಿ ವಿವರಣೆ ನೀಡಿದೆ.

    ನಮ್ಮ ಪಕ್ಷದ ಸಿದ್ಧಾಂತಕ್ಕೆ ನಾವು ಬದ್ಧರಾಗಿದ್ದೇವೆ. ಪೂರ್ಣಾವಧಿ ಅಧ್ಯಕ್ಷರ ಆಯ್ಕೆ ಸಂಬಂಧ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಮತ್ತು ಎಐಸಿಸಿ ಪ್ರಕ್ರಿಯೆಗಳು ಶುರುವಾಗಿದ್ದು, ಯಾವಾಗ ಬೇಕಾದರೂ ಫಲಿತಾಂಶ ಹೊರಬೀಳಬಹುದು. ಅಲ್ಲಿಯವರೆಗೂ ಸೋನಿಯಾಗಾಂಧಿಯವರೇ ಮುಂದುವರಿಯುತ್ತಾರೆ. ನಾಯಕತ್ವ ಇಲ್ಲದ ಕಾಂಗ್ರೆಸ್​ನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್​ ಮನು ಸಿಂಘ್ವಿ ಹೇಳಿದ್ದಾರೆ. (ಏಜೆನ್ಸೀಸ್​)

    ಇಡುಕ್ಕಿ ಭೂಕುಸಿತದ ಭೀಕರತೆ; ಇಂದು 16 ಶವಗಳನ್ನು ಮಣ್ಣಿನಡಿಯಿಂದ ಹೊರತೆಗೆದ ರಕ್ಷಣಾ ಸಿಬ್ಬಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts