More

    ಕಾಂಗ್ರೆಸ್ ಸಂಸದರ ಸಭೆ ಕರೆದ ಅಧ್ಯಕ್ಷೆ ಸೋನಿಯಾ ಗಾಂಧಿ; ನಾಳೆ ಬೆಳಗ್ಗೆಯೇ ಮೀಟಿಂಗ್​!

    ನವದೆಹಲಿ: ಕರೊನಾ ವೈರಸ್​ ಹೆಚ್ಚಳ, ಭಾರತ-ಚೀನಾ ಗಡಿ ಸಂಘರ್ಷ, ಆರ್ಥಿಕತೆ ಕುಸಿತ, ವಲಸೆ ಕಾರ್ಮಿಕ ಸಂಕಷ್ಟ ಹೀಗೆ ಹತ್ತು ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ ಪ್ರತಿಪಕ್ಷ ಕಾಂಗ್ರೆಸ್​.
    ಈ ಮಧ್ಯೆ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿಯವರು ನಾಳೆ ಬೆಳಗ್ಗೆ ತಮ್ಮ ಪಕ್ಷದ ಲೋಕಸಭಾ ಸದಸ್ಯರ ಜತೆ ಸಭೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್​ ಮೂಲಗಳು ತಿಳಿಸಿದ್ದು, ಕುತೂಹಲ ಹುಟ್ಟಿಸಿದೆ.

    ನಾಳೆ (ಶನಿವಾರ) ಬೆಳಗ್ಗೆ ಸೋನಿಯಾ ಗಾಂಧಿಯವರು ಕಾಂಗ್ರೆಸ್​ನ ಸಂಸದರ ಜತೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಯಾವ ವಿಚಾರ ಚರ್ಚೆಯಾಗಬಹುದು ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
    ಸತತವಾಗಿ ಏರುತ್ತಿರುವ ಇಂಧನ ಬೆಲೆಯ ವಿರುದ್ಧವೂ ಕಾಂಗ್ರೆಸ್​ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಷ್ಟೇ ಏಕೆ, ಪಾರ್ಲಿಮೆಂಟ್​ನಲ್ಲಿ ಕೇಂದ್ರ ಸರ್ಕಾರ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಗೆ ಆಸ್ಪದ ಕೊಡದೆ, ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ಆರೋಪವನ್ನೂ ಕಾಂಗ್ರೆಸ್ ಈಗಾಗಲೇ ಮಾಡಿದೆ. ಇದನ್ನೂ ಓದಿ: ಆರೋಗ್ಯಸೇತು ಆ್ಯಪ್ ಕಡ್ಡಾಯವಲ್ಲ: ಹೈಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ಹೇಳಿಕೆ

    ಇಷ್ಟೆಲ್ಲ ವಿಚಾರಗಳ ಮಧ್ಯೆ ನಾಳೆ ಸೋನಿಯಾ ಗಾಂಧಿಯವರ ಸಭೆ ಕುತೂಹಲ ಹುಟ್ಟಿಸಿದೆ. (ಏಜೆನ್ಸೀಸ್)

    ಮುಖ್ಯಮಂತ್ರಿ ನಿವಾಸಕ್ಕೆ ಬಾಂಬ್​ ಹಾಕುವುದಾಗಿ ಬೆದರಿಕೆ ಕರೆ ಮಾಡಿದ್ದವನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts