More

    ಆರೋಗ್ಯಸೇತು ಆ್ಯಪ್ ಕಡ್ಡಾಯವಲ್ಲ: ಹೈಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ಹೇಳಿಕೆ

    ಬೆಂಗಳೂರು: ಆರೋಗ್ಯ ಸೇತು ಆ್ಯಪ್ ಬಳಕೆಯನ್ನು ಕಡ್ಡಾಯಗೊಳಿಸಿ ಕೇಂದ್ರ ಗೃಹ ಸಚಿವಾಲಯ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಕೇಂದ್ರ ಸರ್ಕಾರದ ಪರ ವಕೀಲರು ರಾಜ್ಯ ಹೈಕೋರ್ಟ್‌ನಲ್ಲಿ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

    ಡಿಜಿಟಲ್ ವಲಯದಲ್ಲಿನ ನಾಗರಿಕರ ಹಕ್ಕುಗಳ ರಕ್ಷಣೆಯ ಹೋರಾಟಗಾರ ಅನಿವರ್ ಅರವಿಂದ್ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠದ ಎದುರು ವಕೀಲರು ಈ ವಿಷಯ ಸ್ಪಷ್ಟಪಡಿಸಿದರು. ಆರೋಗ್ಯಸೇತು ಆ್ಯಪ್ ಬಳಕೆಯನ್ನು ಕಡ್ಡಾಯಗೊಳಿಸಿ ಯಾವುದಾದರೂ ಸರ್ಕಾರಿ ಸ್ವಾಮ್ಯದ ಸಂಸ್ಥೆ ಆದೇಶ ಹೊರಡಿಸಿದ್ದರೆ ಅದರ ಪ್ರತಿಯನ್ನು ಅರ್ಜಿದಾರರು ಕೋರ್ಟ್‌ಗೆ ಸಲ್ಲಿಸಲಿ ಎಂದು ಹೇಳಿದರು. ಇದನ್ನೂ ಓದಿ: ಸುಶಾಂತ್ ಸಾವಿನ ಹಿಂದೆ ದಾವೂದ್ … ಮಾಜಿ ರಾ ಅಧಿಕಾರಿ ಬಿಚ್ಚಿಟ್ಟ ರೋಚಕ ಮಾಹಿತಿ

    ಅರ್ಜಿದಾರರ ಪರ ವಕೀಲರು ಮಾತನಾಡಿ, ‘‘ಆರೋಗ್ಯಸೇತು ಆ್ಯಪ್ ಬಳಕೆ ಕಡ್ಡಾಯವಲ್ಲ ಎಂಬುದನ್ನು ಈ ಹಿಂದೆಯೇ ಕೇಂದ್ರ ಸರ್ಕಾರ ಈ ಹಿಂದಿನ ವಿಚಾರಣೆ ವೇಳೆಯೇ ಕೋರ್ಟ್‌ಗೆ ಸ್ಪಷ್ಟಪಡಿಸಿದ್ದರೂ ನಂತರದ ದಿನಗಳಲ್ಲಿ ಆ್ಯಪ್ ಬಳಕೆಯನ್ನು ಕಡ್ಡಾಯಗೊಳಿಸಿತ್ತು’’ ಎಂದು ವಾದಿಸಿದರು. ಈ ವಾದಕ್ಕೆ ಕೇಂದ್ರದ ಪರ ವಕೀಲರು ಸ್ಪಷ್ಟೀಕರಣ ನೀಡಿದರು. ವಿಚಾರಣೆಯನ್ನು ಜು. 17ಕ್ಕೆ ಮುಂದೂಡಲಾಯಿತು.

    ಸಮನ್ಸ್, ನೋಟಿಸ್ ತಲುಪಿಸಲು ವಾಟ್ಸ್‌ಆ್ಯಪ್‌ಗೂ ಸುಪ್ರೀಂಕೋರ್ಟ್ ಮಾನ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts