More

    ಹಂಗಾಮಿ ಅಧ್ಯಕ್ಷ ಸ್ಥಾನದಿಂದ ನನ್ನ ರಿಲೀವ್ ಮಾಡಿ ಅಂದ್ರು ಸೋನಿಯಾ

    ನವದೆಹಲಿ: ಎಐಸಿಸಿಯ ಸಾರಥ್ಯ ಯಾರ ಹೆಗಲೇರಬೇಕು ಎಂಬ ಬಗ್ಗೆ ಕಾಂಗ್ರೆಸ್ ವರ್ಕಿಂಗ್ ಕಮಿಟಿ(ಸಿಡಬ್ಲ್ಯುಸಿ)ಯಲ್ಲಿ ಗಂಭೀರ ಚರ್ಚೆಗಳಾಗುತ್ತಿದೆ. ಸೋಮವಾರ ಈ ಚರ್ಚೆಯ ನಡುವೆ ಸೋನಿಯಾ ಗಾಂಧಿ ಮಾತನಾಡ್ತಾ, ಹಂಗಾಮಿ ಅಧ್ಯಕ್ಷ ಸ್ಥಾನದಿಂದ ನನ್ನ ರಿಲೀವ್ ಮಾಡಿ ಅಂತ ಪಕ್ಷದ ನಾಯಕರಲ್ಲಿ ಕೋರಿಕೊಂಡ್ರು. ಆ ಕೂಡ್ಲೇ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ‘ಇಲ್ಲ, ನೀವು ಮುಂದುವರಿಯಬೇಕು’ ಅಂತ ಮನವಿ ಮಾಡ್ಕೊಂಡ್ರು.

    ಸಭೆಯಲ್ಲಿ ಮಾತನಾಡ್ತಿದ್ದ ಸೋನಿಯಾ, ನನಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡೋ ಹೊಣೆಗಾರಿಕೆ ನಿಭಾಯಿಸೋದು ಕಷ್ಟವಾಗ್ತಿದೆ ಅನ್ನೋ ರೀತಿ ಮಾತನಾಡಿದ್ರು. ಅದಕ್ಕೆ ಪ್ರತಿಕ್ರಿಯಿಸಿದ ಇನ್ನೊಬ್ಬ ಹಿರಿಯ ನಾಯಕ ಎ.ಕೆ.ಆ್ಯಂಟನಿ, ನೀವು ಹಿಂದೆ ಸರೀತೀರಿ ಅಂತಾದ್ರೆ ರಾಹುಲ್ ಗಾಂಧಿಯವರು ಅಧಿಕಾರ ವಹಿಸ್ಕೊಳ್ಳಲಿ ಅಂತ ಹೇಳಿದ್ರು.

    ಇದನ್ನೂ ಓದಿ:  ಯಾರಿಗೆ ಕೀಲಿ’ಕೈ’?; ಹೊಸ ನಾಯಕತ್ವಕ್ಕೆ ಸೋನಿಯಾ ಸೂಚನೆ

    ಸಂಘಟನಾತ್ಮಕವಾಗಿ ಆಮೂಲಾಗ್ರ ಬದಲಾವಣೆ ಬೇಕು ಎಂದು ಕಪಿಲ್ ಸಿಬಲ್​, ಶಶಿ ತರೂರ್​, ಗುಲಾಂ ನಬಿ ಆಜಾದ್​, ಪೃಥ್ವಿರಾಜ್ ಚೌಹಾಣ್, ವಿವೇಕ್ ತನ್ಖಾ, ಆನಂದ್ ಶರ್ಮಾ ಸೇರಿ 23 ನಾಯಕರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರವಾಗಿ ಎಲ್ಲರೂ ಸಭೆ ಸೇರಿ ಹೊಸ ನಾಯಕನನ್ನು ಆಯ್ಕೆ ಮಾಡೋಣ ಎಂದು ಉತ್ತರಿಸಿದ್ದರು. ಆ ಹಿನ್ನೆಲೆಯಲ್ಲಿ ಇಂದಿನ ಸಿಡಬ್ಲ್ಯುಸಿ ಸಭೆ ನಡೆಯುತ್ತಿದೆ. ಏತನ್ಮಧ್ಯೆ ವೇಣುಗೋಪಾಲ್​, ಆ್ಯಂಟನಿ, ರಾಹುಲ್ ಗಾಂಧಿ, ಕ್ಯಾಪ್ಟನ್ ಅಮರೀಂದರ್ ಸಿಂಗ್ ಸೇರಿ ಇತರೆ ಕೆಲವು ನಾಯಕರು ಈ 23 ನಾಯಕರ ಪತ್ರ ಅಭಿಯಾನವನ್ನು ಖಂಡಿಸಿದ್ದರು.

    ಎಐಸಿಸಿ ಅಧ್ಯಕ್ಷ ಪಟ್ಟ: ಖರ್ಗೆಗೆ ಖುಲಾಯಿಸುತ್ತ ಅದೃಷ್ಟ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts