More

    ಮಧ್ಯಪ್ರದೇಶದಲ್ಲಿ ಅಧಿಕಾರ ‘ಕೈ’ ಜಾರುತ್ತಿದ್ದರೂ ಕಳೆದಿಲ್ಲ ಭರವಸೆ; ಸಿಎಂ ಕಮಲ್​ನಾಥ್​ ಪುತ್ರ ನಕುಲ್​ ಮಾತುಗಳ ಅರ್ಥ ಏನಿರಬಹುದು..?

    ಭೋಪಾಲ್​: ಮಧ್ಯಪ್ರದೇಶ ಕಾಂಗ್ರೆಸ್​ ಸರ್ಕಾರ ಅಸ್ಥಿರಗೊಂಡಿದೆ. 114 ಇದ್ದ ಶಾಸಕರ ಸಂಖ್ಯಾಬಲ 92ಕ್ಕೆ ಕುಸಿದು ಆಗಲೋ, ಈಗಲೋ ಪತನವಾಗುವಂತಿದೆ. ಉಳಿದ ಶಾಸಕರನ್ನು ಉಳಿಸಿಕೊಳ್ಳುವ ಪ್ರಯತ್ನ ಜಾರಿಯಲ್ಲಿದೆ.
    ಹೀಗಿರುವಾಗ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್​ ಅವರ ಪುತ್ರ ನಮ್ಮ ಸರ್ಕಾರ ಉಳಿಯುತ್ತದೆ. ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

    ರೆಬಲ್​ ಆಗಿ ಕರ್ನಾಟಕ ಸೇರಿಕೊಂಡಿರುವ ಶಾಸಕರೆಲ್ಲರೂ ಖಂಡಿತ ವಾಪಸ್ ಬರುತ್ತಾರೆ. 22 ಶಾಸಕರೂ ಮತ್ತೆ ಕಾಂಗ್ರೆಸ್​ಗೆ ಸೇರ್ಪಡೆಯಾಗುತ್ತಾರೆ ಎಂದು ಸಂಸದ ನಕುಲ್​ ನಾಥ್​ ತಿಳಿಸಿದ್ದಾರೆ.

    ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಕಮಲನಾಥ್​ ನೇತೃತ್ವದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಖಂಡಿತ ಅಧಿಕಾರದಲ್ಲಿ ಮುಂದುವರಿಯುತ್ತದೆ ಎಂಬ ಭರವಸೆ ನನಗೆ ಇದೆ ಎಂದಿದ್ದಾರೆ.
    ಯಾವ ಶಾಸಕರೂ ಖುದ್ದಾಗಿ ಬಂದು ಸ್ಪೀಕರ್​ಗೆ ರಾಜೀನಾಮೆ ಸಲ್ಲಿಸಿಲ್ಲ. ಹಾಗಾಗಿ ಯಾವುದೂ ಇನ್ನೂ ಅಂಗೀಕಾರ ಆಗಿಲ್ಲ ಎಂದು ತಿಳಿಸಿದ್ದಾರೆ.

    ಈ ಮಧ್ಯೆ ಕಾಂಗ್ರೆಸ್​ ಹಿರಿಯ ನಾಯಕರೋರ್ವರು ಮಾತನಾಡಿ, ನಾವು ಉಳಿದ 92 ಶಾಸಕರನ್ನು ಹಾಗೂ ಮಧ್ಯಪ್ರದೇಶ ಸರ್ಕಾರ ಉಳಿಯಲು ಬೆಂಬಲ ನೀಡುವವರನ್ನು ರಾಜಸ್ಥಾನದ ಹೋಟೆಲ್​ಗಳಿಗೆ ಸ್ಥಳಾಂತರಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಸದ್ಯ ವಿಧಾನಸಭೆಯಲ್ಲಿ ಬಿಜೆಪಿಗೆ 107 ಶಾಸಕರ ಸಂಖ್ಯಾಬಲ ಇದೆ.(ಏಜೆನ್ಸೀಸ್​)

    ಟ್ರಾಫಿಕ್ ಪೋಲಿಸರು ಊದಪ್ಪ ಅಂತಾರೆ, ಚಾಲಕರು ಊದಲ್ಲ ಅಂತಿದ್ದಾರೆ- ಡ್ರಿಂಕ್ ಆ್ಯಂಡ್ ಡ್ರೈವ್ ಫಜೀತಿ

    ಸಿಂಧಿಯಾ ರಾಜೀನಾಮೆ, ಮಧ್ಯಪ್ರದೇಶ ಸರ್ಕಾರದ ಅಸ್ಥಿರತೆ ಬಗ್ಗೆ ಮೌನ ಮುರಿದ ರಾಹುಲ್ ಗಾಂಧಿಯವರದ್ದು ಅದೇ ‘ರಾಗಾ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts