More

    ತಿರುಪತಿ ಏರ್​ಪೋರ್ಟ್​ಗೆ ನೀರು ನಿಲ್ಲಿಸಿದ ಶಾಸಕನ ಪುತ್ರ

    ತಿರುಪತಿ: ಆಂಧ್ರ ಪ್ರದೇಶದ ಚಿತ್ತೂರು(ತಿರುಪತಿ) ಶಾಸಕ ಬಿ. ಕರುಣಾಕರ ರೆಡ್ಡಿ ಪುತ್ರ ಅಭಿನಯ್ ರೆಡ್ಡಿ ತಿರುಪತಿ ವಿಮಾನ ನಿಲ್ದಾಣದ ನೀರು ಪೂರೈಕೆ ವ್ಯವಸ್ಥೆಗೆ ತಡೆಯೊಡ್ಡಿ ವಿಲಕ್ಷಣ ರೀತಿಯಲ್ಲಿ ದೇಶದ ಗಮನಸೆಳೆದಿದ್ದಾರೆ.

    ಅಭಿನಯ್ ರೆಡ್ಡಿ ತಿರುಪತಿಯ ಡೆಪ್ಯುಟಿ ಮೇಯರ್. ರೇಣಿಗುಂಟ ಏರ್​ಪೋರ್ಟ್ ಮ್ಯಾನೇಜರ್ ಸುನಿಲ್ ಮತ್ತು ಅಭಿನಯ್ ರೆಡ್ಡಿ ನಡುವಿನ ಸಂಘರ್ಷದ ಪರಿಣಾಮ ಇದು. ಈ ವಾರ ಆರಂಭದಲ್ಲಿ ರಾಷ್ಟ್ರೀಯ ಕಬಡ್ಡಿ ಸ್ಪರ್ಧೆಯ ಸಮಾರೋಪದಲ್ಲಿ ಭಾಗಿಯಾಗಲು ಬಂದ ಆಂಧ್ರ ಸಚಿವ ಬೋತ್ಸಾ ಸತ್ಯನಾರಾಯಣ ಮತ್ತು ಟಿಟಿಡಿ ಚೇರ್​ವುನ್ ವೈ.ವಿ ಸುಬ್ಬಾ ರೆಡ್ಡಿ ಅವರನ್ನು ಬರಮಾಡಿಕೊಳ್ಳಲು ಅಭಿನಯ್ ರೆಡ್ಡಿ ಏರ್​ಪೋರ್ಟ್​ಗೆ ಹೋಗಿದ್ದರು.

    ಆದರೆ, ಏರ್​ಪೋರ್ಟ್ ಮ್ಯಾನೇಜರ್ ಸುನಿಲ್ ಅವರು ಅಭಿನಯ್ ರೆಡ್ಡಿ ಮತ್ತು ಅವರ ಸಹಾಯರಿಗೆ ವಿಮಾನ ನಿಲ್ದಾಣ ಪ್ರವೇಶಿಸಲು ಅನುಮತಿ ನಿರಾಕರಿಸಿದರು. ಪರಿಣಾಮ ತೀವ್ರ ವಾಗ್ವಾದ ನಡೆಯಿತು. ಇದರ ಬೆನ್ನಿಗೆ, ಪ್ರತೀಕಾರ ಕ್ರಮವೆಂಬಂತೆ ಏರ್​ಪೋರ್ಟ್ ಮತ್ತು ಅಲ್ಲಿನ ವಸತಿ ಸಂಕೀರ್ಣಕ್ಕೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts