More

    ಸಂಗೀತದಿಂದ ಒತ್ತಡ ನಿವಾರಣೆ

    ಸಿಂಧನೂರು: ಸಂಗೀತ, ಕಲೆ, ಸಾಹಿತ್ಯದಿಂದ ಮನುಷ್ಯನ ಅಂತರಂಗ ಶುದ್ಧೀಕರಣ ಮಾಡುತ್ತವೆ ಎಂದು ಮೂರುಮೈಲ್ ಕ್ಯಾಂಪಿನ ರಂಭಾಪುರಿ ಖಾಸಾ ಶಾಖಾಮಠದ ಸೋಮನಾಥ ಶಿವಾಚಾರ್ಯ ಹೇಳಿದರು.

    ಸಂಗೀತ, ಕಲೆ, ಸಾಹಿತ್ಯದಿಂದ ಮನುಷ್ಯನ ಅಂತರಂಗ ಶುದ್ಧೀಕರಣ

    ನಗರದ ಪಂಚಾಕ್ಷರಿ ಸಂಗೀತ ಸಲಕರಣೆ ಕೇಂದ್ರದ ಆವರಣದಲ್ಲಿ ಮಂಗಳವಾರ ಶ್ರಮಜೀವಿ ಎಪಿಎಂಸಿ ಹಮಾಲರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ಸಂಯುಕ್ತಾಶ್ರಯದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಸುಗಮ ಸಂಗೀತ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

    ಇದನ್ನೂ ಓದಿ: ವಾಂಖೆಡೆ ಪಿಚ್​ ಬದಲಾಯಿಸಲಾಗಿದೆ ಎಂದು ಹೇಳುವವರು ಮೂರ್ಖರು; ಮಾಜಿ ಕ್ರಿಕೆಟಿಗರ ಆರೋಪಕ್ಕೆ ಸುನೀಲ್ ಗವಾಸ್ಕರ್ ತಿರುಗೇಟು

    ಸಂಗೀತಕ್ಕೆ ಒತ್ತಡಗಳನ್ನು ನಿವಾರಣೆ ಮಾಡುವ ಶಕ್ತಿ ಇದೆ. ಅಲ್ಲದೆ ಶಾಂತತೆ ಇರುತ್ತದೆ. ಸಂಗೀತಕ್ಕೆ ಗದಗಿನ ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರವಾಗಿದೆ. ಅವರ ಶಿಷ್ಯ ಬಳಗದಿಂದ ಇಂದು ಸಂಗೀತ ಕ್ಷೇತ್ರ ಬೆಳೆಯುತ್ತಿದೆ. ಝೀ ಕನ್ನಡದಲ್ಲಿ ಶಿಷ್ಯ ಬಳಗದ ಪ್ರತಿಭೆ ಅನಾವರಣಗೊಳ್ಳುತ್ತಿದೆ ಎಂದರು.

    ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ ಮಾತನಾಡಿ, ತಾಲೂಕಿನಲ್ಲಿ ಬಸವರಾಜ ಮೋತಿ ಸೇರಿದಂತೆ ಹಲವಾರು ಸಂಗೀತಗಾರರು ಇದ್ದಾರೆ. ಸಂಗೀತ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಿ ಜನರನ್ನು ರಂಜಿಸಿಸುವುದರ ಜತೆಗೆ ಪ್ರೀತಿ, ವಿಶ್ವಾಸ ಮತ್ತು ನೆಮ್ಮದಿಯನ್ನು ತರಲು ಶ್ರಮಿಸುತ್ತಿದ್ದಾರೆ ಎಂದರು.

    ಬೇವಿನಾಳ ಶರಣಯ್ಯಸ್ವಾಮಿ ಹಿರೇಮಠ ಮಾತನಾಡಿ, ದೀಪಾವಳಿ ಹಬ್ಬದ ಸಮಯದಲ್ಲಿ ಸಂಗೀತ ಕಾರ್ಯಕ್ರಮ ಮಾಡುವ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜನರಲ್ಲಿ ಸಂಗೀತ ಕುರಿತು ಆಸಕ್ತಿ ಹುಟ್ಟಿಸುವ ಕಾರ್ಯ ಮಾಡುತ್ತಿರುವುದಕ್ಕೆ ಸ್ವಾಗತಾರ್ಹವಾಗಿದೆಂದರು.
    ಸುಕಾಲಪೇಟೆ ಸಿದ್ದಯ್ಯತಾತ ಗುರುವಿನ್, ಶ್ರಮಜೀವಿ ಎಪಿಎಂಸಿ ಹಮಾಲರ ಸಂಘದ ಗೌರವಾಧ್ಯಕ್ಷ ಎಂ.ಗಂಗಾಧರ, ಅಧ್ಯಕ್ಷ ಮಾಬುಸಾಬ ಬೆಳ್ಳಟ್ಟಿ, ಕಾರ್ಯದರ್ಶಿ ಎಚ್.ಆರ್.ಹೊಸಮನಿ, ಬೈಲಾಟದ ಮಾಸ್ತರ ಜಗನ್ನಾಥ ಜನತಾ ಕಾಲನಿ, ಶ್ರೀಗುರು ಪುಟ್ಟರಾಜ ತಾಲೂಕು ವೃತ್ತ ರಂಗಭೂಮಿ ಕಲಾವಿದರ ಸಂಘದ ಭಕ್ಷಿ ದರವೇಶ, ಬಸವರಾಜ ಗಸ್ತಿ, ದುಗ್ಗಪ್ಪ ಪೋತೂರು ಮಾತನಾಡಿದರು. ಕಾರ್ಯಕ್ರಮದ ವ್ಯವಸ್ಥಾಪಕ ಅಮರೇಗೌಡ, ಗೌಡಪ್ಪಗೌಡ ಯಾಪಲಪರ್ವಿ, ಕಲಾವಿದ ಶರಣಕುಮಾರ ಮೋತಿ ಇದ್ದರು.

    ಪುಟ್ಟರಾಜ ಗವಾಯಿಗಳ ಶಿಷ್ಯ ಬಸವರಾಜ ಮೋತಿ ಸುಗಮ ಸಂಗೀತ ಪ್ರಸ್ತುತ ಪಡಿಸುವ ಮೂಲಕ ಜನಮನ ರಂಜಿಸಿದರು. ಕಾರಟಗಿಯ ರಾಚಯ್ಯಸ್ವಾಮಿ ಹಿರೇಮಠ ಮದರಿ ಹಾರ್ಮೋನಿಯಂ ಸಾಥ್ ನೀಡಿದರು. ಹಿರಿಯ ಕಲಾವಿದ ನಿಜಗುಣಿ ಬೋಗಾವತಿ ತಬಲ ವಾದಿಸಿದರು. ಪುಟ್ಟರಾಜ ಮೋತಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts